ಕೊಪ್ಪಳ, ನ.೧೬ (ಕ ವಾ) ಆಧಾರ್ ಸಂಖ್ಯೆಗಳನ್ನು ರಾಷ್ಟ್ರೀಯ ಜನಗಣತಿ ರಜಿಸ್ಟರ್ (ಎನ್.ಪಿ.ಆರ್) ಮೂಲದೊಡನೆ ಜೋಡಿಸಲು ನ.೧೫ ರಿಂದ ಡಿ.೧೫ ರವರೆಗೆ ಜಿಲ್ಲಾದ್ಯಂತ ಗಣತಿ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಗಣತಿ ಕಾರ್ಯಕ್ಕೆ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ||ಜಿ.ಎಲ್. ಪ್ರವೀಣಕುಮಾರ್ ಮನವಿ ಮಾಡಿದ್ದಾರೆ.
ಭಾರತ ಸರ್ಕಾರವು ಭಾರತೀಯ ಪೌರರ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ನ್ನು ಸಿದ್ಧಪಡಿಸುವ ದಿಶೆಯಲ್ಲಿ ಮೊದಲ ಹೆಜ್ಜೆಯಾಗಿ ೨೦೧೧ ರ ಜನಗಣತಿಯ ಮೊದಲ ಹಂತದ ಸಮಯದಲ್ಲಿ ದೇಶದಲ್ಲಿರುವ ಸಾಮಾನ್ಯ ನಿವಾಸಿಗಳಿಗೆ ಸಂಬಂಧಿಸಿದಂತೆ ಒಂದು ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ನ್ನು ಈಗಾಗಲೇ ತಯಾರಿಸಿದೆ. ೧೯೫೫ ರ ಪೌರತ್ವ ಕಾಯ್ದೆ ಮತ್ತು ೨೦೦೩ ರ ಪೌರತ್ವ ನಿಯಮಗಳ ಅಡಿಯಲ್ಲಿ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಬದ್ಧವಾಗಿದೆ. ದೇಶದಲ್ಲಿನ ೧೧೯ ಕೋಟಿಗೂ ಅಧಿಕ ಸಾಮಾನ್ಯ ನಿವಾಸಿಗಳಿಗೆ ಸಂಬಂಧಿಸಿದಂತೆ ವಿದ್ಯುನ್ಮಾನ ಮೂಲ ಮಾಹಿತಿ ಕೋಶವನ್ನು ಅಂದರೆ ಸಾಮಾನ್ಯ ನಿವಾಸಿಗಳಲ್ಲಿ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ನ್ನು ಆಂಗ್ಲ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್‌ರ್‌ನ ಅಡಿಯಲ್ಲಿ ಈಗಾಗಲೇ ಸಿದ್ಧಪಡಿಸಲಾಗಿದೆ.
ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್‌ರ್‌ನ ಮೂಲ ಮಾಹಿತಿ ಕೋಶದ ಪರಿಷ್ಕರಣೆ ಮತ್ತು ಆಧಾರ್ ಸಂಖ್ಯೆಯೊಡನೆ ಜೋಡಣೆಯ ಕಾರ್ಯವನ್ನು ದೇಶದಾದ್ಯಂತ ೨೦೧೫ರ ಜುಲೈ ೦೧ ರಿಂದ ಕೈಗೊಳ್ಳಲು ಭಾರತ ಸರ್ಕಾರವು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎನ್‌ಪಿಆರ್ ಮೂಲ ಮಾಹಿತಿಕೋಶದ ಪರಿಷ್ಕರಣೆ ಮತ್ತು ಆಧಾರ್‌ನೊಡನೆ ಜೋಡಣೆಯ ಕಾರ್ಯಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಕಾರ್ಯವನ್ನು ನ.೧೫ ರಿಂದ ಆರಂಭಿಸಿ ಒಂದು ತಿಂಗಳ ಅವಧಿಯಲ್ಲಿ ಕೈಗೊಳ್ಳಲಾಗುವುದು. ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್‌ರ್‌ನ ಪರಿಷ್ಕರಣೆ ಮತ್ತು ಆಧಾರ್ ಸಂಖ್ಯೆಯನ್ನು ಎನ್‌ಪಿಆರ್ ಮೂಲ ಮಾಹಿತಿ ಕೋಶದಲ್ಲಿ ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ಮೂಲಕ ಕೈಗೊಳ್ಳಲಾಗುವುದು. ಎನ್‌ಪಿಆರ್ ಮೂಲ ಮಾಹಿತಿ ಕೋಶದಲ್ಲಿ ಕಂಡುಬರದ ಕುಟುಂಬಗಳನ್ನು ಅಥವಾ ವ್ಯಕ್ತಿಗಳನ್ನು ಹೊಸ ಎನ್‌ಪಿಆರ್ ಅನುಸೂಚಿಗಳನ್ನು ಭರ್ತಿ ಮಾಡುವ ಮೂಲಕ ನೋಂದಾಯಿಸಲಾಗುವುದು. ಈ ಕ್ಷೇತ್ರ ಕಾರ್ಯವು, ಎನ್‌ಪಿಆರ್ ಮೂಲ ಮಾಹಿತಿ ಕೋಶದ ಪರಿಷ್ಕರಣೆಗೆ ಅನುವಾಗಲಿದೆ. ಅಲ್ಲದೆ, ಈ ಪರಿಷ್ಕರಣೆ ಕಾರ್ಯದೊಡನೆ ಜನನ, ಮರಣ ಮತ್ತು ವಿವಾಹದ ನೋಂದಣಿಗಳನ್ನು ಅಳವಡಿಸಲಾಗುವುದು. ಪರಿಷ್ಕರಿತ ಎನ್‌ಪಿಆರ್ ಮೂಲ ಮಾಹಿತಿ ಕೋಶವು ರಾಜ್ಯ ಸರ್ಕಾರವು ರೂಪಿಸುವ ವಿವಿಧ ಯೋಜನೆಗಳಿಗೆ ಸೂಕ್ತ ವ್ಯಕ್ತಿಗಳನ್ನು ಗುರುತಿಸಲು ಮೂಲಾಧಾರವಾಗಲಿದೆ.
ರಾಜ್ಯ, ಜಿಲ್ಲೆ, ಚಾರ್ಜ್ ಮಟ್ಟದಲ್ಲಿನ ಎಲ್ಲಾ ಕಾರ್ಯನಿರ್ವಾಹಕರುಗಳಿಗೆ ಎನ್‌ಪಿಆರ್ ಮೂಲ ಮಾಹಿತಿ ಕೋಶವನ್ನು ಪರಿಷ್ಕರಿಸಲು ಮತ್ತು ಹೊಸದಾಗಿ ಕಂಡುಬರುವ ಕುಟುಂಬಗಳಿಗೆ ಅಥವಾ ವ್ಯಕ್ತಿಗಳಿಗೆ ಖಾಲಿ ಎನ್‌ಪಿಆರ್ ಅನುಸೂಚಿಗಳನ್ನು ಭರ್ತಿ ಮಾಡಲು ಅಗತ್ಯವಾದ ತರಬೇತಿಯನ್ನು ಈಗಾಗಲೇ ನೀಡಲಾಗಿದೆ. ಗಣತಿದಾರರು ತಮ್ಮಗೆ ವಹಿಸಲಾಗಿರುವ ಗಣತಿ ಬ್ಲಾಕಿನಲ್ಲಿರುವ ಎಲ್ಲಾ ಕುಟುಂಬಗಳಿಗೆ ಭೇಟಿ ನೀಡುವರು ಮತ್ತು ಎನ್‌ಪಿಆರ್ ಮೂಲ ಮಾಹಿತಿಕೋಶದಲ್ಲಿ ವ್ಯಕ್ತಿಯ ಹೆಸರು, ಲಿಂಗ, ಹುಟ್ಟಿದ ದಿನಾಂಕ, ತಂದೆಯ ಹೆಸರು, ತಾಯಿಯ ಹೆಸರು, ಹುಟ್ಟಿದ ಸ್ಥಳ, ಸದ್ಯದ ವಿಳಾಸ, ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸುವರು ಮತ್ತು ಎನ್‌ಪಿಆರ್ ಮೂಲ ಮಾಹಿತಿಕೋಶದಲ್ಲಿ ಆಧಾರ್ ಸಂಖ್ಯೆಯ ಜೋಡಣೆ ಕಾರ್ಯಗಳನ್ನು ಕೈಗೊಳ್ಳುವರು ಗಣತಿ ಬ್ಲಾಕಿನಲ್ಲಿ ಹೊಸದಾಗಿ ಕಂಡುಬರುವ ಕುಟುಂಬಗಳಿಗೆ ಅಥವಾ ವ್ಯಕ್ತಿಗಳಿಗೆ ಖಾಲಿ ಎನ್‌ಪಿಆರ್ ಅನುಸೂಚಿಗಳನ್ನು ಭರ್ತಿ ಮಾಡುವರು.
ಸಾರ್ವಜನಿಕರು, ತಮ್ಮ ಮನೆಗಳಿಗೆ ಗಣತಿದಾರರು ಭೇಟಿ ನೀಡಿದ ಸಮಯದಲ್ಲಿ ಸಂಪೂರ್ಣ ಸಹಕಾರವನ್ನು ಅಂದರೆ ಗಣತಿದಾರರು ಈಗಾಗಲೇ ಅಸ್ತಿತ್ವದಲ್ಲಿರುವ ಎನ್‌ಪಿಆರ್ ಮೂಲ ಮಾಹಿತಿ ಕೋಶವನ್ನು ಪರಿಷ್ಕರಿಸಲು ಮತ್ತು ಹೊಸದಾಗಿ ಕಂಡುಬರುವ ಕುಟುಂಬಗಳಿಗೆ ಅಥವಾ ವ್ಯಕ್ತಿಗಳಿಗೆ ಖಾಲಿ ಎನ್‌ಪಿಆರ್ ಅನುಸೂಚಿಗಳನ್ನು ಭರ್ತಿ ಮಾಡಲು ಸರಿಯಾದ ಮತ್ತು ಅರ್ಥಪೂರ್ಣವಾದ ಮಾಹಿತಿಯನ್ನು ಒದಗಿಸುವಂತೆ ಹಾಗೂ ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಪತ್ರಗಳನ್ನು ಅಥವಾ ನೋಂದಾಯಿಸಿ ಆಧಾರ್ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಪಾವತಿ ಪತ್ರಗಳನ್ನು ಮತ್ತು ಕುಟುಂಬದ ಪಡಿತರ ಚೀಟಿಯನ್ನು ಗಣತಿದಾರರು ಎನ್‌ಪಿಆರ್ ಪುಸ್ತಕದಲ್ಲಿ ಗುರುತಿಸಿಕೊಳ್ಳಲು ಅನುವಾಗುವಂತೆ ಸಿದ್ಧವಾಗಿ ಇಟ್ಟುಕೊಂಡಿರುವಂತೆ ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವೃತ್ತಿ ಕೌಶಲ್ಯ ತರಬೇತಿ : ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ
ಕೊಪ್ಪಳ, ನ.೧೬ (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ನವಸಾಕ್ಷರರಿಗೆ ವೃತ್ತಿ ಕೌಶಲ್ಯ ತರಬೇತಿ (ಹೊಲಿಗೆ ತರಬೇತಿ)ಯನ್ನು ನೀಡಲು ಆಸಕ್ತ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಬಂಧಿಸಿದ ಟ್ರೇಡ್‌ನಲ್ಲಿ ಮೂರು ವರ್ಷಗಳ ತರಬೇತಿ ನೀಡಿದ ಅನುಭವ ಹೊಂದಿರುವ, ಸಂಸ್ಥೆಯ ಮೂರು ವರ್ಷಗಳ ಲೆಕ್ಕ ಪರಿಶೋಧನಾ ವರದಿ ಇತರೆ ಅವಶ್ಯಕ ಅರ್ಹತೆಗಳನ್ನು ಹೊಂದಿರುವ ನೊಂದಾಯಿತ ಸ್ವಯಂ ಸೇವಾ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ನ.೧೮ ರಿಂದ ನ.೨೪ ರೊಳಗಾಗಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಿಂದ ಪಡೆದು, ಭರ್ತಿ ಮಾಡಿ, ನ.೨೫ ರೊಳಗಾಗಿ ಕಛೇರಿ ಅವಧಿಯಲ್ಲಿ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ನ.೧೮ ರಂದು ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಆಧಾರಿತ ಯೋಜನೆಗಳ ಸ್ಪರ್ಧೆ.
ಕೊಪ್ಪಳ, ನ.೧೬ (ಕ ವಾ) ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ನವದೆಹಲಿ, ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಮತ್ತು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ(ಡಯಟ್) ಟಿ.ಬಿ.ಪಿ ಮುನಿರಾಬಾದ್ ಇವರುಗಳ ಸಂಯುಕ್ತಾಶ್ರಯದಲ್ಲಿ ಇನ್‌ಸ್ಪೈರ್ ಅವಾರ್ಡ್ ಪಡೆದ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಆಧಾರಿತ ಯೋಜನೆಗಳ ಸ್ಪರ್ಧೆ-೫ ನ್ನು ನ.೧೮ ರಂದು ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಕಾರ್ಯಕ್ರಮ ಉದ್ಘಾಟಿಸುವರು. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ಲೋಕಸಭಾ ಸದಸ್ಯ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಹೆಚ್.ಪಾಟೀಲ್, ಹಾಲಪ್ಪ ಆಚಾರ್, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ.ವಿನಯಕುಮಾರ ಮೇಲಿನಮನಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಸಾಲೋಣಿ, ತಾಲೂಕಾ ಪಂಚಾಯತ್ ಅಧ್ಯಕ್ಷೆ ಬಾನು ಚಂದುಸಾಬ್, ಜಿಲ್ಲಾ ಪಂಚಾಯತ್ ಸದಸ್ಯೆ ವನಿತಾ ಗಡಾದ, ಗ್ರಾಮ ಪಂಚಾಯತ್ ಅಧ್ಯಕ್ಷ ಯಮನೂರಪ್ಪ ನಾಯಕ, ಉಪಾಧ್ಯಕ್ಷೆ ಹುಲಿಗೆಮ್ಮ ಭಜಂತ್ರಿ, ತಾಲೂಕಾ ಪಂಚಾಯತ್ ಸದಸ್ಯ ರಮೇಶ ಚೌಡ್ಕಿ, ಕೊಪ್ಪಳ ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನಿಲಕುಮಾರ ಟಿ.ಕೆ, ಜಿಲ್ಲಾಧಿಕಾರಿ ಡಾ||ಪ್ರವೀಣಕುಮಾರ್ ಜಿ.ಎಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ತ್ಯಾಗರಾಜನ್ ಕೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿಯ ಅಪರ ಆಯುಕ್ತ ರಾಧಾಕೃಷ್ಣರಾವ್ ಮದನಕರ್, ಡಿ.ಎಸ್.ಇ.ಆರ್.ಟಿ ನಿರ್ದೇಶಕ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ ಗೌಡರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣೇಗೌಡ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಆಧಾರಿತ ಯೋಜನೆಗಳ ಸ್ಪರ್ಧೆ-೫ ರ ಸಮಾರೋಪ ಸಮಾರಂಭವು ನ.೨೧ ರಂದು ಮಧ್ಯಾಹ್ನ ೦೩ ಗಂಟೆಗೆ ನಡೆಯಲಿದೆ ಎಂದು ತಿಳಿಸಿದೆ.

0 comments:
Post a Comment
Click to see the code!
To insert emoticon you must added at least one space before the code.