PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-16- ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೌಲಭ್ಯ ವಂಚಿತ ತಾಂಡಾಗಳಲ್ಲಿ ಆಧ್ಯತೆ ಮೇರೆಗೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಶಾಸಕರಾದ ಇಕ್ಬಾಲ್ ಅನ್ಸಾರಿ ಹೇಳಿದರು.
       ಅವರು ಶನಿವಾರ ಕ್ಷೇತ್ರದ ಹಿರೇಸೂಳಿಕೇರಿ ತಾಂಡಾದಲ್ಲಿ ಎಸ್‌ಸಿಪಿ-ಟಿಎಸ್‌
    ತಾಂಡಾಗಳಿಗೆ ಆಶ್ರಯ ಮನೆಗಳು, ಗಂಗಾ ಕಲ್ಯಾಣ ಯೋಜನೆ, ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಕ್ರಮ ಕೈಗೆತ್ತಿಕೊಳ್ಳಲಾಗುತ್ತಿದ್ದು ಅಭಿವೃದ್ದಿ ವಿಷಯದಲ್ಲಿ ರಾಜಕೀಯವಿಲ್ಲ ಆದ್ರೆ ಅಭಿವೃದ್ದಿಗಾಗಿ ರಾಜಕೀಯ ಮಾಡ್ತೇವೆ ಎಂದರು.
   ನಂತರ ಶಾಸಕರು ಚಿಕ್ಕ ಸೂಳಿಕೇರಿ ಗ್ರಾಮದಲ್ಲಿ ೨೦ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ  ಚಾಲನೆ ನೀಡಿದರು. ಗ್ರಾಮಸ್ಥರ ಮನವಿಯಂತೆ ಕುಡಿಯುವ ನೀರಿನ ತೊಂದರೆ ಆಗದಂತೆ ಪೈಪ್‌ಲೈನ್ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
   ಈ ಸಂದರ್ಭದಲ್ಲಿ ಮುಖಂಡ ಎಸ್.ಬಿ.ಖಾದ್ರಿ, ಸಂಗಮೇಶ ಬಾದವಾಡಗಿ, ಪರಮೇಶ ಸೂಳಿಕೇರಿ ತಾಂಡಾ, ಮಲ್ಲೇಶಪ್ಪ ಗುಮಗೇರಿ, ಬಸವಕುಮಾರ, ಕೊಟ್ರೇಶ ಇತರರು ಉಪಸ್ಥಿತರಿದ್ದರು.
ಪಿ-ಲೋಕೋಪಯೋಗಿ ಇಲಾಖೆಯ ೩೦ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

Advertisement

0 comments:

Post a Comment

 
Top