ದಿ ೨೯.೧೧.೨೦೧೨ ರಂದು ಲೇಬಗೇರಿ ಗ್ರಾಮದಲ್ಲಿನ ೨೪ ಜನ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಮಾಡುವ ಮೂಲಕ ಗ್ರಾಮ ತಾಯ್ತನ ರಕ್ಷಣಾ ವೇದಿಕೆ ತಮ್ಮ ಸೃಜನ ಶೀಲತೆ ಮೆರೆದಿದೆ.
ಗ್ರಾಮದಲ್ಲಿ ಗರ್ಭಿಣಿ ಬಾಣಂತಿಯರ ಸುರಕ್ಷತೆಗಾಗಿ ಹಾಗೂ ತುರ್ತು ಸಂದರ್ಭದಲ್ಲಿ ಸಹಾಯ ಹಸ್ತ ನೀಡಲು ೧೨-೧೫ ಜನರ ತಾಯ್ತನ ರಕ್ಷಣಾ ವೇದಿಕೆ ೨ ವರ್ಷಗಳಿಂದ ಗ್ರಾಮದಲ್ಲಿ ಗರ್ಭಿಣಿಯ ಸುರಕ್ಷಿತೆಗಾಗಿ ಶ್ರಮಿಸುತ್ತಿದ್ದು, ಇತ್ತಿಚೆಗೆ ಗರ್ಭಿಣಿಯರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾಮದ ೨೪ ಜನ ಗರ್ಭಿಣಿಯರಿಗೆ ಸೀಮಂತ ಮಾಡಿ ಸುರಕ್ಷಿತವಾಗಿ ಹೆರಿಗೆಯಾಗಲೆಂದು ಹಾರೈಸಲಾಯಿತು. ಜೊತೆಗೆ ಸಾವು-ಬದುಕಿನ ಮಧ್ಯೆ ಹೋರಾಡಿತ್ತಿದ್ದ ಗಿರಿಜಮ್ಮ ಗುಡದಪ್ಪ ವಿ.ಕಾಟಾಪೂರ ಇವರಿಗೆ ಹೆರಿಗೆಯ ನಂತರ ರಕ್ತಸ್ರಾವದಿಂದಾಗಿ ರಕ್ತ(ಃ-ಗಿe)ದ ಅವಶ್ಯಕತೆ ಇದ್ದಾಗ ಗ್ರಾಮದ ಯುವಕ ಸತ್ಯಪ್ಪ ಯಂಕಪ್ಪ ಗೊಲ್ಲರ್ ಇವರು ದಿನಾಂಕ ೨೦.೭.೨೦೧೨ ರಂದು ರಕ್ತದಾನ ಮಾಡಿ ತಾಯಿ ಮಗುವಿನ ಜೀವ ಉಳಿಸಿದ್ದಕ್ಕಾಗಿ ಸನ್ಮಾನ ಮಾಡಲಾಯಿತು. ಸುರಕ್ಷಿತ ತಾಯ್ತನ ಆಂದೋಲನದ ಸುರಕ್ಷಾ ಕಲಾ ತಂಡದ ಮೂಲಕ ಜಾಗೃತಿ, ಹಾಡು ಹಾಗೂ ರೂಪಕದ ಮೂಲಕ ಸಮಾಜದಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ಸಾಧ್ಯವಾಯಿತು. ಪ್ರತಿ ತಿಂಗಳು ಮೊದಲನೇ ಬಾನುವಾರ ಯುವಕರ ಹಾಗೂ ಮಹಿಳೆಯರನ್ನು ಒಳಗೊಂಡು ಸಭೆ ನಡೆಸಲಾಗುತ್ತದೆ. ಗಂಡಾಂತರ ಗರ್ಭಿಣಿ ಮತ್ತು ಬಾಣಂತಿಯರ ಬಗ್ಗೆ ಚರ್ಚಿಸಿ, ಮಾಹಿತಿ ಮಾರ್ಗದರ್ಶನ ಜೊತೆಗೆ ಹಣದ ಹಾಗೂ ರಕ್ತದ ವ್ಯವಸ್ಥೆ ಮಾಡಲು ವೇದಿಕೆ ಸದಾ ಸಿದ್ದವಿದೆ. ಕಾರ್ಯಕ್ರಮಕ್ಕೆ ಸಹಕರಿಸಿದ ಗ್ರಾಂ.ಪ. ಅಧ್ಯಕ್ಷರು ಹಾಗೂ ಸದಸ್ಯರಿಗೆ ಗ್ರಾಮ ತಾಯ್ತನ ರಕ್ಷಣಾ ವೇದಿಕೆ ಧನ್ಯವಾದಗಳನ್ನು ಅರ್ಪಿಸಿದೆ.

0 comments:
Post a Comment