ಜು. ೫ ಕ್ಕೆ ಮದ್ದಿನೇನಿ ಅವ್ಯವಹಾರ ತನಿಖೆಗೆ ಒತ್ತಾಯಿಸಿ
ಕೊಪ್ಪಳ, ಜು.೩. ಕೊಪ್ಪಳದಿಂದ ವರ್ಗವಾದ ಡಿಸಿ ತುಳಸಿ ಮದ್ದಿನೇನಿ ವಿರುದ್ಧ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಜುಲೈ ೫ ರಂದು ಬೆಳಿಗ್ಗೆ ಸಾಹಿತ್ಯ ಭವನದ ಮುಂದೆ ಸೇರಿ ಅಲ್ಲಿಂದ ತಹಶೀಲ್ದಾರ ಕಛೇರಿವರೆಗೆ ಪ್ರತಿಭಟನೆ ಮೂಲಕ ತೆರಳಿ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವದು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಅನಾವಶ್ಯಕವಾಗಿ ಗೂಬೆ ಕೂರಿಸುತ್ತಿರುವದರ ವಿರುದ್ಧ ಹಾಗೂ ಅನಾವಶ್ಯಕವಾಗಿ ಒಬ್ಬ ದಲಿತ ನಾಯಕನ ಕುರಿತು ಅಪಪ್ರಚಾರ ಮಾಡಿ ಪರಿಶ್ರಮದಿಂದ ಬಂದಿರುವ ಅಧಿಕಾರವನ್ನು ಕಿತ್ತುಕೊಳ್ಳುವ ಕುತಂತ್ರಕ್ಕೆ ಕಡಿವಾಣ ಹಾಕಲು ಹಾಗೂ ಜಾತಿ ಪ್ರೀತಿ, ಭಾಷೆ ಹಾಗೂ ಆಂಧ್ರ ಲಾಬಿಯಿಂದ ೨ ವರ್ಷ ಜಿಲ್ಲೆಯನ್ನು ಲೂಟಿ ಮಾಡಿದ ತುಳಸಿ ಮದ್ದಿನೇನಿ ವಿರುದ್ಧ ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಕಾರಣ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಸಹಕಾರ ನೀಡಿ ಭಾಗವಹಿಸಿ, ಸಹಕರಿಸಲು ವಿನಂತಿಸಿದ್ದಾರೆ.

0 comments:
Post a Comment