PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಕೊಪ್ಪಳಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಇಂದು ಕೊಪ್ಪಳ ನನ್ನ ಸ್ವಂತ ಊರೆ ಎನಿಸಿದೆ. ನನ್ನ ಹುಟ್ಟಿದ ಊರ ಬಿಜಾಪೂರ ಜಿಲ್ಲೆಯ ಬಬಲೇಶ್ವರ. ಕುಷ್ಟಗಿಯ ಜಿ.ಆರ್. ಹಿರೇಮಠರೊಂದಿಗೆ ಮದುವೆ ವಿವಾಹವಾಯಿತು. ಈಗಾಗಿ ನಾನು ಕೊಪ್ಪಳ ಜಿಲ್ಲೆಯ ನಂಟಿ ಬೆಳೆಯಿತು. ಆದರೆ ಈಗ ನನ್ನ ಸಾಹಿತ್ಯ ಸೆವೆಯನ್ನು ಗಮನಿಸಿ ಕೊಪ್ಪಳ ತಾಲೂಕ ನಾಲ್ಕನೆಯ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿರುವುದರಿಂದ ನನ್ನ ಜವಾಬ್ದಾರಿಯು ಹೆಚ್ಚಾಗಿದೆ ಎಂದು ಹಿರಿಯ ಸಾಹಿತಿಗಳಾದ ಶಾಂತಾದೇವಿ ಹಿರೇಮಠ ಹೇಳಿದರು.
ಅವರು ಸೋಮವಾರ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಬೆಳೆಯಬೇಕು. ಯುವಕರು ಹೆಚ್ಚೆಚ್ಚು ಅಧ್ಯಯನಶೀಲರಾಗಿ ಕನ್ನಡ ಸಾಹಿತ್ಯದ ತೇರನ್ನು ಎಳೆಯಬೇಕು ಎಂದರು.
ನೇಹ ಸಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಾ.ಮಹಾಂತೇಶ ಮಲ್ಲನಗೌಡರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಶಾಂತಾದೇವಿ ಹಿರೇಮಠರು ನಮ್ಮ ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸಬಲ್ಲ ಹಿರಿಯ ಕವಿಗಳು.  ಇವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಬೇಕೆಂದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ, ಕನ್ನಡ ಸಾಹಿತ್ಯದಲ್ಲಿ ಗಟ್ಟಿಯಾಗಿ ಬರೆಯಬಲ್ಲ  ಮಹಿಳಾಪರ ಸಂವೇದನಗಳುಳ್ಳ ಹಾಗೂ ಕೃತಿಗಳನ್ನು ನಿರಂತರವಾಗಿ ರಚಿಸಬಲ್ಲ ಮಹಿಳಾ ಸಾಹಿತಿಗಳು ಇಂದು ಬಹಳ ವಿರಳ. ಇಂತಹ ಸಂದರ್ಭದಲ್ಲಿ ಶಾಂತಾದೇವಿ ಹಿರೇಮಠರು ಓರ್ವ ಶಿಕ್ಷಕಿಯಾಗಿ, ಗೃಹಣಿಯಾಗಿ ಮನೆತನದ ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದರ ಜೊತೆಗೆ ದು:ಖ ದುಮ್ಮಾನ, ಏಳು-ಬೀಳುಗಳು, ತಾಪತ್ರೆಗಳನ್ನು ಸಹಿಸಕೊಂಡು ತಮ್ಮದೆ ಆದ ಚಿಂತನೆಗಳನ್ನು, ಅನುಭವಗಳನ್ನು, ಘಟನೆಗಳನ್ನು ನೈಜವಾಗಿ ಅನುಭವಿಸಿ ಅವುಗಳಿಗೊಂದು ರೂಪ ಕೊಟ್ಟು. ಕವನಗಳನ್ನು , ಕಥೆಗಳನು, ಲೇಖನಗಳನ್ನು, ಪ್ರಬಂಧಗಳನ್ನು ಬರೆದು ಹಿರಿಯ ಸಾಹಿತಿಗಳಾಗಿ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿದ್ದಾರೆ ಎಂದರು.
ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಎಂ.ಎಸ್.ಗಂಟಿ, ಕೂಡ್ಲಿಗಿಯ ಹಿರೇಮಠ ವಿದ್ಯಾಪೀಠ ಪದವಿ ಪೂರ್ವ ಮಹಾವಿದ್ಯಾಲಯದ  ಪ್ರಾಚಾರ್ಯರಾದ ಸಿದ್ದರಾಮ ಹಿರೇಮಠ ಹಾಗೂ ಅಲ್ಲಮಪ್ರಭು ಹಿರೇಮಠ, ವಿದ್ಯಾ ಸಿದ್ದರಾಮ ಹಿರೇಮಠ, ಹೇಮಾ ಅಲ್ಲಮ್ಮ ಪ್ರಭು ಹಿರೇಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top