PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಸೆ.೨೪ (ಕ ವಾ)  ನಗರಸಭೆ ಕಾರ್ಯಾಲಯ, ಕೊಪ್ಪಳ ಇವರಿಂದ ಪ್ರಸಕ್ತ ಸಾಲಿಗಾಗಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಇಎಸ್‌ಟಿ ಮತ್ತು ಪಿ ಕೌಶಲ್ಯ ತರಬೇತಿಯ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಘಟಕದಡಿ ಲಘು ಹಾಗೂ ಭಾರಿ ವಾಹನ ಚಾಲನಾ ತರಬೇತಿ ನೀಡಲು ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವ ಸಂಸ್ಥೆಯು ಆರ್.ಟಿ.ಓ ಅಡಿ ಲಘು ಹಾಗೂ ಭಾರಿ ವಾಹನ ಚಾಲನಾ ತರಬೇತಿದಾರರೆಂದು ನೊಂದಣಿಯಾಗಿರಬೇಕು. ಆರ್.ಟಿ.ಓ ನೊಂದಾಯಿತ ಲಘು ಹಾಗೂ ಭಾರಿ ವಾಹನ ಚಾಲನಾ ಪರವಾನಿಗೆ ಪ್ರಮಾಣ ಪತ್ರವನ್ನು ಪಡೆದಿರಬೇಕು ಮತ್ತು ಅದನ್ನು ಕಾಲಕಾಲಕ್ಕೆ ನವೀಕರಿಸಿರಬೇಕು. ತರಬೇತಿ ನೀಡಲು ನುರಿತ ಮತ್ತು ಅರ್ಹ ಸಿಬ್ಬಂದಿಯನ್ನು ಹೊಂದಿರಬೇಕು. ಸಂಸ್ಥೆಗೆ ಲಘು ಹಾಗೂ ಭಾರಿ ಮೋಟಾರ್ ವಾಹನ ಚಾಲನಾ ತರಬೇತಿಯನ್ನು ನೀಡಿದ ಅನುಭವ ಹೊಂದಿರಬೇಕು. ತರಬೇತಿ ನೀಡಲು ಮೂಲಭೂತ ಸೌಲಭ್ಯಗಳಾದ ಲಘು ಹಾಗೂ ಭಾರಿ ಮೋಟಾರ್ ವಾಹನಗಳನ್ನು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ನಿಯಮಗಳನ್ವಯ ಹೊಂದಿರಬೇಕು. ಸಂಸ್ಥೆಯು ಅರ್ಜಿಯೊಂದಿಗೆ, ಪ್ರತಿ ಫಲಾನುಭವಿಗೆ ತಗುಲುವ ದರಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ, ಪೌರಾಯುಕ್ತರು, ನಗರಸಭೆ, ಕೊಪ್ಪಳ ಇವರಿಗೆ ಅಕ್ಟೋಬರ್.೦೯ ರೊಳಗಾಗಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಾರ್ಯಾಲಯ ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್ ತಿಳಿಸಿದ್ದಾರೆ.

Advertisement

0 comments:

Post a Comment

 
Top