PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ್ ಹಾಗೂ ಎನ್.ಹೆಚ್.೬೩ ದದೇಗಲ್ ಕಾರಿಡಾರ್ ಮಧ್ಯದಲ್ಲಿ ಬರುವ ೨೮ ಕಿ.ಮೀ ಹೊಸ ರಸ್ತೆಯನ್ನು ಭಾರತ ಮಾಲಾ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ ಎಂದು ಸಂಸದರಾದ ಕರಡಿ ಸಂಗಣ್ಣನವರು ತಿಳಿಸಿದ್ದಾರೆ.  ರಾಷ್ಟ್ರೀಯ ಹೆದ್ದಾರಿ ೫೦ ಹಾಗೂ ೬೩ ರ ಸೇರ್ಪಡೆ ಮಾಡುವ ಹೊಸ ಮಾರ್ಗಇದಾಗಿದ್ದು
ಜಂಕ್ಷನ್ ನಿರ್ಮಾಣವಾಗಲಿದೆ. ಇದರಿಂದ ಹುಬ್ಬಳಿ, ಗದಗ, ವಿಜಯಪುರ, ರಾಯಚೂರು, ಹಾವೇರಿಗೆ ಸಂಚರಿಸುವ ಅಂತರವು   ಸಹಜವಾಗಿ ಕಡಿಮೆಯಾಗಲಿದೆ. ಹೊಸ ಮಾರ್ಗವು ಭಾಗ್ಯನಗರ, ಬೋಜನಹಳ್ಳಿ, ಟಣಕನಕಲ್, ಇರಕಲ್‌ಗಡ, ಚಿಲಕಮುಖಿ ಗ್ರಾಮಗಳ ಮೂಲಕ ಹಾದು ಹೋಗಲಿದ್ದು ಹಿರೇಸೂಳೆಕೆರೆ ಗ್ರಾಮದ ಮೂಲಕ ದದೇಗಲ್‌ಗೆ ಸಂಪರ್ಕಿಸುತ್ತದೆ. ಈ ಮಾರ್ಗದ ನಿರ್ಮಾಣಕ್ಕೆ ಹೊಸ ಪರಿಷ್ಕೃತ ಮಾರ್ಗಸೂಚಿಯಂತೆ ಪರಿಷ್ಕೃತಯೋಜನೆಯನ್ವಯ ವಿಸ್ತೃತಯೋಜನೆಯನ್ನು ಸಿದ್ದಪಡಿಸಲು ಚಿತ್ರದುರ್ಗದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಾಗೂ ವಲಯ ಯೋಜನಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಂಸದರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ ಎಂದು ಸಂಸದ ಕರಡಿ ಸಂಗಣ್ಣನವರು ತಿಳಿಸಿದ್ದಾರೆ.

Advertisement

Next
This is the most recent post.
Previous
Older Post

0 comments:

Post a Comment

 
Top