Sunday, April 20, 2014

ಅಧಿಕಾರಕ್ಕೆ ಬರುವ ಮುನ್ನವೇ ಫ್ಯಾಸಿಸ್ಟ್ ಆರ್ಭಟ‘‘ನರೇಂದ್ರ ಮೋದಿಯನ್ನು ಟೀಕಿಸುವವರಿಗೆ ಭಾರತದಲ್ಲಿ ಜಾಗವಿಲ್ಲ. ಅವರೆಲ್ಲ ಪಾಕಿಸ್ತಾನಕ್ಕೆ ಹೋಗಲಿ’’ ಎಂದು ಬಿಹಾರದ ಬಿಜೆಪಿ ನಾಯಕ ನವಾಡ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಿರಿರಾಜ್ ಸಿಂಗ್ ಹೇಳಿದ್ದಾರೆ. (ಇಂಥವರು ಬಹುವಚನಕ್ಕೆ ಅರ್ಹರಲ್ಲ) ಇದು ಗಿರಿರಾಜ ಸಿಂಗ್ ಒಬ್ಬನ ಹೇಳಿಕೆಯಲ್ಲ. ಸಂಘ ಪರಿವಾರದ ಭೂತಬಡಿದುಕೊಂಡ ಬಿಜೆಪಿ ಒಳಗಿನ, ಹೊರಗಿನ ಅನೇಕರ ಅಸಹನೆಯ ಆಕ್ರೋಶ ಈ ರೀತಿ ವ್ಯಕ್ತವಾಗುತ್ತದೆ. ಇದು ಮಾತಲ್ಲ, ಅನೇಕ ಕಡೆ ಕೃತಿಯಲ್ಲೀ ಕಂಡು ಬರುತ್ತಿದೆ.
‘ಆಮ್ ಆದ್ಮಿ’ ನಾಯಕ ಅರವಿಂದ್ ಕೇಜ್ರಿವಾಲ್ ಈಗಾಗಲೇ ಈ ಕೋಮುವಾದಿ ಗೂಂಡಾಗಳಿಂದ ನಿತ್ಯವೂ ಏಟು ತಿನ್ನುತ್ತಿದ್ದಾರೆ. ದಿಲ್ಲಿಯಲ್ಲಿ, ಗುಜರಾತಿನಲ್ಲಿ, ವಾರಣಾಸಿಯಲ್ಲಿ ಅವರ ಮೇಲೆ ಹಲ್ಲೆ ನಡೆದಿವೆ. ‘ಚುನಾವಣೆ ನಂತರ ಈ ದಾಳಿ ಇನ್ನಷ್ಟು ತೀವ್ರಗೊಳ್ಳಲಿದೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಕೇಜ್ರಿವಾಲ್ ಮಾತ್ರವಲ್ಲ, ಯಾವುದೇ ರಾಜಕಾರಣಿಯಾಗಲಿ, ಸಾಹಿತಿಯಾಗಲಿ ಈಗ ಮೋದಿಯನ್ನು ಟೀಕಿಸಿ ಸುರಕ್ಷಿತವಾಗಿ ಇರಲು ಸಾಧ್ಯವಿಲ್ಲ.
ಆದರೂ ಸುರಕ್ಷತೆಗಾಗಿ, ಭದ್ರತೆಗಾಗಿ ಮೋದಿ ಪ್ರಧಾನಿಯಾಗಬೇಕೆಂದು ಮಾಧ್ಯಮ ವರ್ಗದ ಅನಿಸಿಕೆಯಾಗಿದೆ. ಮೇಲ್ಜಾತಿಯ ಮಧ್ಯಮ ವರ್ಗಗಳು ಮೋದಿಯಲ್ಲಿ ಅವತಾರ ಪುರುಷನನ್ನು ಕಾಣುತ್ತಿದ್ದಾರೆ. ಅಂತಲೆ ಮೋದಿ ಛಾಯಾಚಿತ್ರದ ಟೀ ಶರ್ಟುಗಳು, ವೌಸ್‌ಗಳು, ಚಹ ಕಪ್ಪುಗಳು, ಬನಿಯನ್‌ಗಳು ಮಾರುಕಟ್ಟೆಯಲ್ಲಿ ಬಂದಿವೆ. ಈ ದೇಶದ 125 ಕೋಟಿ ಜನರಲ್ಲಿ ಇಲ್ಲದ ಸಾಮರ್ಥ್ಯ ಮೋದಿಯಲ್ಲಿದೆ ಎಂದು ನಂಬಿಸುವ ಹುನ್ನಾರ ನಡೆದಿದೆ.

ಮೋದಿ ವಿರೋಧಿಗಳಿಗೆ ಭಾರತದಲ್ಲಿ ಜಾಗವಿಲ್ಲ ಎಂದು ಬಿಹಾರದ ಬಿಜೆಪಿ ನಾಯಕ ಹೇಳಿದ ಮಾತ್ರಕ್ಕೆ ಅದು ಪಕ್ಷದ ಅಭಿಪ್ರಾಯವಲ್ಲ, ಸಂಘದ ಅಭಿಪ್ರಾಯವಲ್ಲ ಎಂದು ಜಾರಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಆದರೆ ಇದು ಬರೀ ಒಬ್ಬಿಬ್ಬರ ಇಂಗಿತವಲ್ಲ. ದೇಶದ ಪ್ರಧಾನಿಯಾಗಲು ಹೊರಟಿರುವ ನರೇಂದ್ರ ಮೋದಿಯು ಆ್ಯಂಟನಿ, ಕೇಜ್ರಿವಾಲ್‌ರನ್ನು ಪಾಕಿಸ್ತಾನದ ಬೆಂಬಲಿಗರೆಂದು ಕರೆದಿದ್ದರು. ಈ ದೇಶದ ಬಡತನ, ನಿರುದ್ಯೋಗ, ಕುಡಿಯುವ ನೀರಿನ ಅಭಾವ, ವಿದ್ಯುತ್ ಸಮಸ್ಯೆ, ವಿದೇಶಿ ಸಾಲ ಎಲ್ಲವೂ ಮೋದಿ ಪ್ರಧಾನಿಯಾದ ಕ್ಷಣದಲ್ಲಿ ಪರಿಹಾರವಾಗುತ್ತದೆ ಎಂದು ಕಾರ್ಪೊರೇಟ್ ತೂತ್ತೂರಿಗಳು ಒದರುತ್ತಿವೆ.

ಮೋದಿಯನ್ನು ವಿಕಾಸ ಪುರುಷ ಎಂದು ಬಿಂಬಿಸುತ್ತಿವೆ. ಕಳೆದ ವರ್ಷ ಕೇದಾರನಾಥದಲ್ಲಿ ನಡೆದ ಪ್ರವಾಹದ ಸಂದರ್ಭದಲ್ಲಿ ಹನುಮಂತ ಲಂಕೆಗೆ ಹಾರಿದಂತೆ ಮೋದಿ ಉತ್ತರಖಂಡಕ್ಕೆ ಹಾರಿ ಸಾವಿರಾರು ಜನರನ್ನು ರಕ್ಷಿಸಿದ ಎಂಬ ಕಟ್ಟುಕತೆಯನ್ನು ನಂಬಿಸುವ ಹುನ್ನಾರ ನಡೆಯಿತು. ತೊಂಬತ್ತರ ದಶಕದ ಕೊನೆಯಲ್ಲಿ ಭಾರತದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಗಣಪತಿಗೆ ಹಾಲು ಕುಡಿಸಿದ ಈ ವಂಚಕ ಪಡೆ ಮೋದಿಯನ್ನು ಅವತಾರ ಪುರುಷ ಎಂದು ಬಿಂಬಿಸುತ್ತಿರುವುದರಲ್ಲಿ ಅಚ್ಚರಿಯೇನೂ ಇಲ್ಲ.
2009ರ ಲೋಕಸಭೆ ಚುನಾವಣೆಯಲ್ಲಿ ಎಲ್.ಕೆ.ಅಡ್ವಾಣಿಯನ್ನು ಇದೇ ಜನ ‘ಲೋಹಪುರುಷ್’ ಎಂದು ಪ್ರಚಾರ ಮಾಡಿದವು. ಆ ಲೋಹ ಪುರುಷ ಈಗ ತುಕ್ಕು ಹಿಡಿದು ಬಿದ್ದಿದ್ದಾರೆ. ಕಾರ್ಪೊರೇಟ್ ಸುದ್ದಿ ಮಾಧ್ಯಮಗಳು ಈ ವಿಕಾಸ ಪುರುಷನನ್ನು ಮುಂದಿನ ಪ್ರಧಾನಿ ಎಂದು ಈಗಾಗಲೇ ನಂಬಿಸಿ ಬಿಟ್ಟಿವೆ. ಮೋದಿ ಸಂಪುಟದಲ್ಲಿ ಸಚಿವರಾಗುವವರು ಹೊಸ ಉಡುಪುಗಳನ್ನು ಖರೀದಿಸಿ ತಯಾರಾಗಿದ್ದಾರೆ. ಈ ಪ್ರಚಾರದಿಂದ ದಿಕ್ಕು ತಪ್ಪಿದ ಕಾಂಗ್ರೆಸ್ ಕೂಡ ಈಗ ಸತ್ವಹೀನವಾಗಿ ಸೋಲಿನ ಮೂಡ್‌ನಲ್ಲಿದೆ. ಎಡಪಕ್ಷಗಳು ಸಂಪೂರ್ಣ ಮೂಲೆಗೊತ್ತಲ್ಪಟ್ಟಿವೆ.
‘‘ಮೋದಿಯ ಬಗ್ಗೆ ಎಷ್ಟೆಲ್ಲ ಬರೆಯುತ್ತೀರಿ’’ ಎಂದು ಕೆಲ ಸ್ನೇಹಿತರು ಕೇಳಿದ್ದಾರೆ. ಸುತ್ತಲಿನ ಎಲ್ಲದನ್ನು ಸುಡುವ ದಳ್ಳುರಿಯನ್ನು ಆರಿಸುವ ವರೆಗೆ ನೀರು ಹಾಕಲೇಬೇಕಾಗುತ್ತದೆ. ಒಂದು ಬರಹದಿಂದ ಈ ದಳ್ಳುರಿಯನ್ನು ನಂದಿಸಲು ಸಾಧ್ಯವಿಲ್ಲ. ಆದರೆ ಬೆಂಕಿ ನಂದಿಸುವಾಗ ಒಂದು ಬಕೆಟ್ ನೀರು ಕೂಡ ಉಪಯೋಗವಾಗುತ್ತದೆ ಎಂಬುದನ್ನು ಮರೆಯಬಾರದು. ಮೋದಿ ಗೆದ್ದರೆ ತಮ್ಮ ಹಿತಾಸಕ್ತಿಯನ್ನು ರಕ್ಷಿಸುವ ಸರಕಾರ ಬರುತ್ತದೆ ಎಂದು ಮೇಲ್ವರ್ಗಗಳ ಕಾರ್ಪೊರೇಟ್ ಬಂಡವಾಳಿಗರು ಸಂಭ್ರಮಪಡುತ್ತಿದ್ದರೆ, ಇನ್ನೊಂದೆಡೆ ಗುಜರಾತ್ ಹತ್ಯಾಕಾಂಡ ಮಾತ್ರವಲ್ಲ ಇತ್ತೀಚಿನ ಮುಝಫ್ಫರ್‌ನಗರ ಕೋಮುದಂಗೆಯನ್ನು ನೆನಪು ಮಾಡಿಕೊಳ್ಳುವ ಅಲ್ಪಸಂಖ್ಯಾತ ಸಮುದಾಯದ ಜನರಲ್ಲಿ ಅಭದ್ರತೆಯ ಭಾವನೆ ಮೂಡಿದೆ.
ಸುಭದ್ರ ಸರಕಾರದ ಹೆಸರಿನಲ್ಲಿ ತಮ್ಮ ಬದುಕು ಎಲ್ಲಿ ಛಿದ್ರವಾಗುತ್ತದೋ ಎಂದು ಆತಂಕ ಉಂಟಾಗಿದೆ. ಈ ಅಂಕಣ ಬರಹ ಬರೆಯುವಾಗಲೇ ಶೃಂಗೇರಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಮುಸ್ಲಿಂ ತರುಣನೊಬ್ಬ ಬಲಿಯಾದ ಸುದ್ದಿ ಬಂದಿದೆ. ಒಂದೆಡೆ ಪೊಲೀಸರ ಪೈಶಾಚಿಕತೆ ಎದ್ದು ಕಾಣುತ್ತಿದೆ.
ಅದಕ್ಕಿಂತಲೂ ಅಮಾನವೀಯ ಹೇಯ ಘಟನೆ ಅಂದರೆ ಗುಂಡಿಗೆ ಬಲಿಯಾದ ಕಬೀರ್ ಎಂಬ ಯುವಕನ ಮೃತದೇಹವನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಲು ಬಂದಿದ್ದ ಸಂಬಂಧಿಕರ ವಾಹನದ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗಲೇ ಅಲ್ಪಸಂಖ್ಯಾತರ ಮೇಲೆ ಈ ರೀತಿ ಹಲ್ಲೆಯಾಗುತ್ತಿದೆ. ಇನ್ನು ಆ ‘ವಿಕಾಸ ಪುರುಷ’ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ ಗತಿಯೇನು? ದೇಶದ ಹೆಬ್ಬಾಗಿಲಲ್ಲಿ ಫ್ಯಾಸಿಸಂ ಬಂದು ನಿಂತಿರುವಾಗ ಅದನ್ನು ಹಿಮ್ಮೆಟ್ಟಿಸಲು ದಣಿವಿಲ್ಲದೆ ಹೋರಾಡಲೇ ಬೇಕಾಗುತ್ತದೆ. ‘ - Varthabharati 

ಮಕ್ಕಳಿಗೆ ಕರಾಟೆ ಶಿಕ್ಷಣ ಅತ್ಯಗತ್ಯ-ಗೊಂಡಬಾಳ

 ಇಂದಿನ ಮಕ್ಕಳಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಸಲುವಾಗಿ ಕರಾಟೆಯಂತಹ ಆತ್ಮರಕ್ಷಣೆ ಕಲೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಹೇಳಿದರು.
ಅವರು ನಗರದ ಎಂಹೆಚ್‌ಪಿಎಸ್ ಶಾಲಾ ಆವರಣದಲ್ಲಿ ಕೊಪ್ಪಳದ ಝೆನ್ ಕರಾಟೆ ಐಕಿಡೋ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ೧೦ ದಿನಗಳ ಬೇಸಿಗೆ ಉಚಿತ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು, ಕೊಪ್ಪಳದಲ್ಲಿ ಒಂದು ಕಾಲದಲ್ಲಿ ಕರಾಟೆ ತುಂಬಾ ಆಸಕ್ತಿದಾಯಕವಾಗಿತ್ತು ಈಗದಿಲ್ಲ, ಆದರೆ ಪ್ರತಿಯೊಬ್ಬರೂ ಅದನ್ನು ಕಲಿಯಬೇಕು ಎಂಬ ಹಂಬಲದಿಂದ ಪತಿವರ್ಷ ಉಚಿತ ತರಬೇತಿ ಹಮ್ಮಿಕೊಳ್ಳುವ ಶ್ರೀನಿವಾಸ ಪಂಡಿತ್ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಪರ್ವತಗೌಡ್ರ, ಕರಾಟೆ, ನೃತ್ಯ, ವ್ಯಾಯಾ

ಮ ಮನುಷ್ಯನನ್ನ ದೈಹಿಕ ಮತ್ತು ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ, ಪ್ರತಿಯೊಬ್ಬ ಪೋಷಕರು, ತಮ್ಮ ಮಕ್ಕಳು ಉತ್ತಮ ಅಂಕಗಳನ್ನು ಗಳಿಸಬೇಕು ಎಂಬುದರ ಕಡೆಗೆ ಮುಖಮಾಡಿ ಕುಳಿತಿರುವದು ತಪ್ಪು, ಅವರಿಗೆ ಇತರೆ ಕ್ರಿಯಾತ್ಮಕ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದರು. ಝೆನ್ ಕರಾಟೆ ಸಂಸ್ಥೆಯ ತರಬೇತುದಾರ ಶ್ರೀನಿವಾಸ ಪಂಡಿತ್ ಶಿಬಿರಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ನೀಡಿ ಶುಭಕೋರಿದರು.

Saturday, April 19, 2014

ಕೆ.ಪಿ.ಮೋಹನರಾಜ್ ಹಾಗೂ ಡಾ|| ರೋಹಿಣಿ ಕಟೋಚ್ ಸೆಪಟ್ ಸುದ್ದಿಗೋಷ್ಠಿಶ್ರೀ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ರೋಹಿಣಿ ಕಟೋಚ್ ಸೆಪಟ್ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಏ.೨೧ ರಿಂದ ಸರ್ಕಾರಿ ಕಚೇರಿ ವೇಳೆಯಲ್ಲಿ ಬದಲಾವಣೆ

 ಬೇಸಿಗೆ ಕಾಲದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುವ ಕಾರಣ ಜಿಲ್ಲೆಯಲ್ಲಿ ಏ.೨೧ ರಿಂದ ಮೇ.೧೦ ರವರೆಗೆ ಮತ್ತು ಮತ ಎಣಿಕೆ ಕಾರ್ಯ ಸಂಪೂರ್ಣವಾದ ನಂತರ ಮೇ.೧೮ ರಿಂದ ಮೇ.೩೧ ರವರೆಗೆ ಒಟ್ಟು ೩೪ ದಿನಗಳ ಕಾಲ ಗುಲ್ಬರ್ಗಾ ವಿಭಾಗದ ಜಿಲ್ಲೆಗಳು ಮತ್ತು ಬೆಳಗಾವಿ ವಿಭಾಗದ ವಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿನ ಸರ್ಕಾರಿ ಕಚೇರಿ ವೇಳೆ ಸಮಯವನ್ನು ಬದಲಾವಣೆ ಮಾಡಲಾಗಿದೆ. 
   ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಬಿಸಿಲಿನ ಹೆಚ್ಚು ತೀವ್ರತೆಯ ಪರಿಣಾಮವನ್ನು ಎದುರಿಸುವ ಗುಲಬರ್ಗಾ ವಿಭಾಗದ ಜಿಲ್ಲೆಗಳಲ್ಲಿ ಹಾಗೂ ಬೆಳಗಾವಿ ವಿಭಾಗದ ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ರಾಜ್ಯ ಸರ್ಕಾರಿ ಕಚೇರಿಗಳ ಕಾರ್ಯ ಅವಧಿಯನ್ನು ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ    ೧-೩೦ ರವರೆಗೆ ನಿಗದಿಪಡಿಸಲಾಗಿದೆ .

ಗ್ರಾಮಸ್ಥರಿಂದ ಕ್ರೇನ್ ಮೂಲಕ ಕೋಣ ರಕ್ಷಣೆ
ಕೊಪ್ಪಳ,ಏ.೧೮: ತಾಲೂಕಿನ ಚಿಕ್ಕಬಗನಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ೧೦.೦೦ ಗಂಟೆ ಸುಮಾರಿಗೆ ಗ್ರಾಮದ ಹೊರಗಡೆ ಇರುವ ಭಾವಿಯಲ್ಲಿ ಗ್ರಾಮದ ಶ್ರೀ ಕೆಂಚಮ್ಮ ದೇವಿಗೆ ಬಿಟ್ಟಿದ್ದ ಕೋಣವೊಂದು ಬಿದ್ದಿದ್ದು, ಗ್ರಾಮಸ್ಥರ ಸಹಕಾರದಿಂದ ಕೋಣವನ್ನು ಕ್ರೇನ್ ಮೂಲಕ ರಕ್ಷಣೆ ಮಾಡಲಾಯಿತು. 
ಶನಿವಾರ ಬೆಳಿಗ್ಗೆ ೯.೩೦ ರಿಂದ ೧೧.೦೦ ರವರೆಗೆ ನಡೆದ ಕಾರ್ಯಾಚರಣೆಯಲ್ಲಿ ಈ ಕೋಣವನ್ನು ಗ್ರಾಮದ ಯುವಕರು, ಹಿರಿಯರ ನೇತೃತ್ವದಲ್ಲಿ ಕ್ರೇನ್ ಮೂಲಕ ತೆಗೆಯಲಾಯಿತು. 

Friday, April 18, 2014

koppal Boothwise Details- Excel File
https://drive.google.com/file/d/0B6mjD5QT8mdGVWVIbVhyV3I1aHc/edit?usp=sharing

ವಿಶ್ವ ಸೈಕ್ಲಿಂಗ್ ದಿನ : ಸೈಕಲ್ ರ‍್ಯಾಲಿ


ಕೊಪ್ಪಳ : ನಾಳೆ ( ಏಪ್ರಿಲ್ ೧೯)ರಂದು ವಿಶ್ವದಾದ್ಯಂತ ವಿಶ್ವ ಸೈಕ್ಲಿಂಗ್ ದಿನ ಆಚರಿಸಲಾಗುತ್ತಿದೆ. ಇದರ ನಿಮಿತ್ಯ ಕೊಪ್ಪಳದಲ್ಲೂ ಸಹ ಸೈಕಲ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷದಿಂದಲೂ ಈ ಕಾರ‍್ಯಕ್ರಮ ಆಚರಿಸಲಾಗುತ್ತಿದೆ. ಇದರ ಅಂಗವಾಗಿ  ಈ ರ‍್ಯಾಲಿ ಗವಿಮಠದಿಂದ ಸಂಜೆ ೪:೩೦ಕ್ಕೆ  ಆರಂಭವಾಗಲಿದೆ. ಆಸಕ್ತರು ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಕಾಂತು ಗುಡಿ ಇವರನ್ನು (೯೯೮೬೫ ೭೬೧೬೨) ಸಂಪರ್ಕಿಸಲು ಕೋರಲಾಗಿದೆ.

Election Details Booth Wise- Koppal ಬೂತ್ ವಾರು ಮತದಾನದ ವಿವರ

ಬೂತ್ ವಾರು ಮತದಾನದ ವಿವರ  Election Details Booth Wise- Koppal

ಕೊಪ್ಪಳ ವಿಧಾನಸಭಾ ಕ್ಷೇತ್ರ

ಮಸ್ಕಿ  ವಿಧಾನಸಭಾ ಕ್ಷೇತ್ರ

ಕುಷ್ಟಗಿ  ವಿಧಾನಸಭಾ ಕ್ಷೇತ್ರ

ಕನಕಗಿರಿ ವಿಧಾನಸಭಾ ಕ್ಷೇತ್ರ

ಗಂಗಾವತಿ  ವಿಧಾನಸಭಾ ಕ್ಷೇತ್ರ

ಯಲಬುರ್ಗಾ  ವಿಧಾನಸಭಾ ಕ್ಷೇತ್ರ

ಸಿರಗುಪ್ಪಾ ವಿಧಾನಸಭಾ ಕ್ಷೇತ್ರ


ಕೊಪ್ಪಳ ಲೋಕಸಭಾ ಕ್ಷೇತ್ರ : ಗರಿಷ್ಠ-ಕನಿಷ್ಠ ಮತದಾನದ ವಿವರ

 ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಜರುಗಿದ ಮತದಾನದಲ್ಲಿ ಒಟ್ಟಾರೆ ಶೇ. ೬೫. ೫೯ ರಷ್ಟು ಮತದಾನ ದಾಖಲಾಗಿದ್ದು, ಕ್ಷೇತ್ರದಲ್ಲಿ ಅತಿಹೆಚ್ಚು ಕೊಪ್ಪಳ ತಾಲೂಕಿನ ಹನುಮನಹಳ್ಳಿಯಲ್ಲಿ ಶೇ. ೯೫. ೩೩ ರಷ್ಟು ಮತದಾನ ದಾಖಲಾಗಿದೆ.  ಅತಿ ಕಡಿಮೆ ಮತದಾನ ಕ್ಷೇತ್ರದ ಸಿಂಧನೂರಿನ ಮತಗಟ್ಟೆ ಸಂಖ್ಯೆ ೧೧೮ ರಲ್ಲಿ ಶೇ. ೩೩. ೪೬ ರಷ್ಟು ದಾಖಲಾಗಿದೆ.
  ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಚಿಂತಮನದೊಡ್ಡಿ- ಶೇ. ೮೩. ೮೩.  ಅತಿ ಕಡಿಮೆ ಸಿಂಧನೂರು ಮತಗಟ್ಟೆ ಸಂಖ್ಯೆ ೧೧೮ ರಲ್ಲಿ ಶೇ. ೩೩. ೪೬ ರಷ್ಟು ದಾಖಲಾಗಿದೆ.
  ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಜಂಗಮರಹಳ್ಳಿ- ಶೇ. ೭೭. ೧೫.  ಅತಿ ಕಡಿಮೆ ಸರ್ಜಾಪುರ- ಶೇ. ೩೭. ೧೪.  ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ನೆರೆಬೆಂಚಿ- ಶೇ. ೮೮. ೧೦.  ಅತಿ ಕಡಿಮೆ ಕುಷ್ಟಗಿ ಮತಗಟ್ಟೆ ಸಂಖ್ಯೆ-೩ ರಲ್ಲಿ ಶೇ. ೩೯. ೧೫ ರಷ್ಟು ದಾಖಲಾಗಿದೆ.  ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಕನಕಗಿರಿ ಮತಗಟ್ಟೆ ಸಂಖ್ಯೆ ೨೧೮ ರಲ್ಲಿ ಶೇ. ೮೬. ೭೦.  ಅತಿ ಕಡಿಮೆ ಕನಕಗಿರಿ ಮತಗಟ್ಟೆ ಸಂಖ್ಯೆ- ೧೮೯ ರಲ್ಲಿ ಶೇ. ೪೯. ೩೧ ದಾಖಲಾಗಿದೆ.  ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಗಂಗಾವತಿಯ ಮತಗಟ್ಟೆ ಸಂಖ್ಯೆ ೧೧ ರಲ್ಲಿ ಶೇ. ೮೯. ೭೦.  ಅತಿ ಕಡಿಮೆ ಗಂಗಾವತಿ ಮತಗಟ್ಟೆ ಸಂಖ್ಯೆ ೧೭೧ ರಲ್ಲಿ ಶೇ. ೫೧. ೨೭ ರಷ್ಟು ದಾಖಲಾಗಿದೆ.  ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಹನುಮಾಪುರ- ಶೇ. ೯೧. ೦೩.  ಅತಿ ಕಡಿಮೆ ತೊಂಡಿಹಾಳ- ಶೇ. ೪೭. ೬೦ ದಾಖಲಾಗಿದೆ.  ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಹನುಮನಹಳ್ಳಿ- ಶೇ. ೯೫. ೩೩.  ಅತಿ ಕಡಿಮೆ ಕೊಪ್ಪಳ ಮತಗಟ್ಟೆ ಸಂಖ್ಯೆ ೧೩೭ ರಲ್ಲಿ ಶೇ. ೪೨. ೯೩ ದಾಖಲಾಗಿದೆ.  ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಸಿರಗುಪ್ಪ ಮತಗಟ್ಟೆ ಸಂಖ್ಯೆ ೧೨೫ ರಲ್ಲಿ ಶೇ. ೮೨. ೧೬.  ಅತಿ ಕಡಿಮೆ ಸಿರಗುಪ್ಪ ಮತಗಟ್ಟೆ ಸಂಖ್ಯೆ- ೭೯ ರಲ್ಲಿ ಶೇ. ೩೮. ೮೫ ರಷ್ಟು ದಾಖಲಾಗಿದೆ.


ಸ್ವೀಪ್‌ಗೆ ಜಾಗೃತಗೊಂಡ ಮತದಾರ : ಮತದಾನ ಶೇ. ೧೦ ರಷ್ಟು ಏರಿಕೆ

  ಮತದಾರರಲ್ಲಿ ಜಾಗೃತಿ ಮೂಡಿಸಿ, ಅವರನ್ನು ಮತಗಟ್ಟೆಯತ್ತ ಹೆಜ್ಜೆ ಹಾಕುವಂತೆ ಮಾಡುವಲ್ಲಿ ಸ್ವೀಪ್ ಕಾರ್ಯಕ್ರಮ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ ಉತ್ತಮ ೬೫. ೫೯ ರಷ್ಟು ಮತದಾನವಾಗಿದೆ.  ಕಳೆದ ಬಾರಿಗಿಂತ ಸುಮಾರು ಶೇ. ೧೦ ರಷ್ಟು ಏರಿಕೆ ದಾಖಲಾಗಿದೆ.  ೨೦೦೯ ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ೫೫. ೩೮ ರಷ್ಟು ಮತದಾನವಾಗಿತ್ತು.
  ಮತದಾರರನ್ನು ಜಾಗೃತಗೊಳಿಸಿ, ಮತದಾನಕ್ಕೆ ಅವರನ್ನು ಪ್ರೇರೇಪಿಸುವಂತೆ ಮಾಡಲು ಚುನಾವಣಾ ಆಯೋಗ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್) ಕಾರ್ಯಕ್ರಮವನ್ನು ರೂಪಿಸಿ, ಎಲ್ಲ ಜಿಲ್ಲೆಗಳಲ್ಲಿ ಜಾರಿಗೊಳಿಸಿದೆ.  ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರವಾರು ಮತದಾನ ಪ್ರಮಾಣ ಗಮನಿಸಿದಾಗ, ಹೈದ್ರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳ ಪೈಕಿ ಕೊಪ್ಪಳ ಕ್ಷೇತ್ರ ಶೇ. ೬೫. ೫೯ ರಷ್ಟು ಮತದಾನ ದಾಖಲಿಸಿ, ಎರಡನೆ ಸ್ಥಾನದಲ್ಲಿದೆ.  ಬಳ್ಳಾರಿ ಕ್ಷೇತ್ರದಲ್ಲಿ ಶೇ. ೭೧ ರಷ್ಟು ಮತದಾನವಾಗಿದ್ದು ಹೈ-ಕ ಪ್ರದೇಶದಲ್ಲಿ ಅಗ್ರ ಸ್ಥಾನದಲ್ಲಿದೆ.  ಕಳೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತದಾನ ಪ್ರಮಾಣ ದಾಖಲಾದ ಪ್ರದೇಶಗಳಲ್ಲಿ ಸ್ವೀಪ್ ಕಾರ್ಯಕ್ರಮವನ್ನು ವ್ಯಾಪಕವಾಗಿ ಏರ್ಪಡಿಸಲು ಒತ್ತು ನೀಡಲಾಗಿತ್ತು.  ಈ ಆದ್ಯತೆ ಉತ್ತಮ ಪರಿಣಾಮ ಬೀರಿದ್ದು, ಕಳೆದ ಬಾರಿಯ ಪ್ರಮಾಣಕ್ಕೆ ಹೋಲಿಸಿದಲ್ಲಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನದ ಪ್ರಮಾಣದಲ್ಲಿ ಏರಿಕೆಯಾಗಿದೆ.   
ಸಿಂಧನೂರು ಕ್ಷೇತ್ರದಲ್ಲಿ ಈ ಬಾರಿ ಶೇ. ೬೧. ೯೩ ರಷ್ಟು ಮತದಾನವಾಗಿದ್ದು ಕಳೆದ ಬಾರಿ ಶೇ. ೪೫. ೬೩ ರಷ್ಟು ಮತದಾನವಾಗಿತ್ತು.  ಇಲ್ಲಿ ಶೇ. ೧೬. ೩ ರಷ್ಟು ಏರಿಕೆಯಾಗಿದೆ.  ಮಸ್ಕಿ ಕ್ಷೇತ್ರದಲ್ಲಿ ಶೇ. ೫೮. ೬೦ ರಷ್ಟು ಮತದಾನವಾಗಿದ್ದು, ೨೦೦೯ ರಲ್ಲಿ ಶೇ. ೪೮. ೨೯ ಮತದಾನವಾಗಿತ್ತು.  ಇಲ್ಲಿ ಶೇ. ೧೦. ೩೧ ಏರಿಕೆಯಾಗಿದೆ.  ಕುಷ್ಟಗಿ ಕ್ಷೇತ್ರದಲ್ಲಿ ಈ ಬಾರಿ ಶೇ. ೫೯. ೩೪ ಮತದಾನವಾಗಿದ್ದು, ಕಳೆದ ಚುನಾವಣೆಯಲ್ಲಿ ಶೇ. ೫೧. ೯೨ ಮತದಾನವಾಗಿತ್ತು.  ಇದರಿಂದಾಗಿ ಇಲ್ಲಿ ಶೇ. ೭. ೪೨ ರಷ್ಟು ಮತದಾನ ಹೆಚ್ಚಳವಾಗಿದೆ.  ಕನಕಗಿರಿ ಕ್ಷೇತ್ರದಲ್ಲಿ ಶೇ. ೬೯. ೬೬ ರಷ್ಟು ಮತದಾನವಾಗಿದ್ದು, ಈ ಹಿಂದೆ ೫೯. ೨೯ ರಷ್ಟಾಗಿತ್ತು.  ಇಲ್ಲಿ ಶೇ. ೧೦. ೩೭ ರಷ್ಟು ಏರಿಕೆಯಾಗಿದೆ.  ಗಂಗಾವತಿ ಕ್ಷೇತ್ರದಲ್ಲಿ ಈ ಬಾರಿ ಶೇ. ೬೮. ೯೩ ರಷ್ಟು ಮತದಾನವಾಗಿದ್ದು, ಕಳೆದ ಬಾರಿ ಶೇ. ೬೧. ೧೪ ಮತದಾನವಾಗಿತ್ತು.  ಇದರಿಂದಾಗಿ ಇಲ್ಲಿ ಶೇ. ೭. ೭೯ ರಷ್ಟು ಹೆಚ್ಚಳವಾಗಿದೆ.  ಯಲಬುರ್ಗಾ ಕ್ಷೇತ್ರದಲ್ಲಿ ಈ ಬಾರಿ ೬೮. ೨೪ ರಷ್ಟು ಮತದಾನವಾಗಿದ್ದು, ಈ ಹಿಂದೆ ೬೦. ೪೪ ಮತದಾನ ನಡೆದಿತ್ತು.  ಇಲ್ಲಿ ಶೇ. ೭. ೮೦ ರಷ್ಟು ಏರಿಕೆಯಾಗಿದೆ.  ಕೊಪ್ಪಳ ಕ್ಷೇತ್ರದಲ್ಲಿ ಈ ಬಾರಿ ಶೇ. ೭೧. ೬೫ ರಷ್ಟು ಮತದಾನ ನಡೆದಿದ್ದು, ಕಳೆದ ಬಾರಿ ೬೦. ೫೬ ರಷ್ಟು ಮತದಾನವಾಗಿತ್ತು.  ಇಲ್ಲಿ ಒಟ್ಟು ಶೇ. ೧೧. ೦೯ ರಷ್ಟು ಮತದಾನ ಹೆಚ್ಚಳವಾಗಿದೆ.  ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ. ೬೫. ೭೯ ರಷ್ಟು ಮತದಾನವಾಗಿದ್ದು, ೨೦೦೯ ರಲ್ಲಿ ಶೇ. ೫೭. ೮೮ ಮತದಾನ ದಾಖಲಾಗಿತ್ತು.  ಇಲ್ಲಿ ಶೇ. ೭. ೯೧ ರಷ್ಟು ಪ್ರಮಾಣದ ಮತದಾನ ಹೆಚ್ಚಳವಾಗಿದೆ.
  ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು, ಚುನಾವಣಾ ಆಯೋಗದ ಸೂಚನೆಯಂತೆ ಮತದಾರರನ್ನು ಜಾಗೃತಗೊಳಿಸಲು ಜಿಲ್ಲಾ ಕೇಂದ್ರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮ್ಯಾರಥಾನ್ ಓಟ ಸ್ಪರ್ಧೆ ಏರ್ಪಡಿಸಲಾಯಿತು, ಆಕಾಶವಾಣಿ ಕೇಂದ್ರದ ಸಹಕಾರದೊಂದಿಗೆ ನೇರ-ಫೋನ್-ಇನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.  ಕೆಲಸಕ್ಕಾಗಿ ವಲಸೆ ಹೋಗುವ ಜಿಲ್ಲೆಯ ವಿವಿಧ ತಾಂಡಾಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಅಲ್ಲಿನ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರಲ್ಲಿ ಮತದಾನದ ಜಾಗೃತಿ ಮೂಡಿಸಲಾಗಿದೆ.  ಜಿಲ್ಲೆಯ ಎಲ್ಲ ನಗರ, ಪಟ್ಟಣ, ಗ್ರಾಮಗಳಲ್ಲಿ ಕ್ಯಾಂಡಲ್ ಲೈಟ್ ಜಾಥಾ, ಜಾಗೃತಿ ಜಾಥಾ, ಮತದಾನದ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಕರಪತ್ರ ಹಂಚಿ, ನೈತಿಕ ಮತದಾನಕ್ಕೆ ಪ್ರೇರೇಪಿಸಲಾಯಿತು.  ವಾರ್ತಾ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಿಂದ ಗ್ರಾಮಗಳಲ್ಲಿ ಬೀದಿನಾಟಕ ಪ್ರದರ್ಶನ, ಜಾನಪದ ಸಂಗೀತ ಮೂಲಕ ಜಾಗೃತಿ. ಆಟೋರಿಕ್ಷಾದವರ ಸಹಕಾರದೊಂದಿಗೆ ಆಟೋಗಳಿಗೆ ಜಾಗೃತಿ ಫ್ಲೆಕ್ಸ್ ಅಳವಡಿಕೆ, ಕಡ್ಡಾಯ ಮತದಾನದ ಸಹಿ ಸಂಗ್ರಹ ಅಭಿಯಾನ.  ಬೂತ್ ಮಟ್ಟದ ಅಧಿಕಾರಿಗಳಿಗೆ ಮತದಾರರ ಜಾಗೃತಿಗೆ ತರಬೇತಿ. ನಗರ, ಸ್ಥಳೀಯ ಸಂಸ್ಥೆಗಳ ವಾಹನಗಳ ಮೂಲಕ ಮತದಾರರ ಜಾಗೃತಿ ಗೀತೆಗಳ ಪ್ರಸಾರ ಮುಂತಾದ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.  ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಮತದಾರರ ಜಾಗೃತಿ ಹೀಗೆ ಹತ್ತು ಹಲವು ಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗಿತ್ತು.
        ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ. ೭೦ ರಷ್ಟು ಮತದಾನವಾಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ನಿರೀಕ್ಷಿತ ಮಟ್ಟದ ಗುರಿ ತಲುಪಲು ಸಾಧ್ಯವಾಗದೇ ಇದ್ದರೂ,  ಸಮಾಧಾನದ ಸಂಗತಿಯೆಂದರೆ, ಗ್ರಾಮೀಣ ಮತ್ತು ನಗರ ಪ್ರದೇಶದ ಮತದಾರರು ಹಿಂದೆಂದಿಗಿಂತಲೂ ಉತ್ಸಾಹದಿಂದ ಅತಿ ಹೆಚ್ಚು ಮತದಾನ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ.  ಒಟ್ಟಾರೆಯಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಶೇಕಡಾವಾರು ಮತದಾನಕ್ಕೆ ಹೋಲಿಸಿದಾಗ, ಸ್ವೀಪ್ ಕಾರ್ಯಕ್ರಮಗಳ ಪರಿಣಾಮವಾಗಿ ಈ ಬಾರಿ ಉತ್ತಮ ಮತದಾನ ಪ್ರಮಾಣ ದಾಖಲಾಗಿದೆ ಎನ್ನುತ್ತಾರೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು.

Thursday, April 17, 2014

Complete Details : ಶೇ. ೬೫. ೫೧ ಮತದಾನ

  ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೦೮ ವಿಧಾನಸಭಾ ಕ್ಷೇತ್ರಗಳಲ್ಲಿ ಏ. ೧೭ ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟಾರೆ ಶೇ. ೬೫. ೫೧ ರಷ್ಟು ಮತದಾನ ನಡೆದಿದ್ದು, ಕಳೆದ ೨೦೦೯ ರಲ್ಲಿನ ಮತದಾನ ಪ್ರಮಾಣಕ್ಕಿಂದ ಶೇ. ೧೦ ರಷ್ಟು ಹೆಚ್ಚಳವಾಗಿದೆ.  
೨೦೦೯ ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ೫೫. ೩೮ ರಷ್ಟು ಮತದಾನವಾಗಿತ್ತು.

  ಒಟ್ಟಾರೆಯಾಗಿ ಕೊಪ್ಪಳ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ಜರುಗದೆ, ಶಾಂತಿಯುತವಾಗಿ ಮತದಾನ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ನೆಮ್ಮದಿಯನ್ನುಂಟು ಮಾಡಿದೆ.  ಕೊಪ್ಪಳ ಲೋಕಸಭಾ ಕ್ಷೇತ್ರದ ೧೮೩೬ ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ ಒಟ್ಟು ೧೫೩೪೮೨೬ ಮತದಾರರ ಪೈಕಿ 

೧೦೦೬೬೮೫ ಮತದಾರರು ಮತದಾನ ಮಾಡಿದ್ದು, 
೫೨೬೦೯೬ ಪುರುಷರು ಹಾಗೂ 
೪೮೦೫೮೭ ಮಹಿಳೆಯರು ಮತ ಚಲಾಯಿಸಿದ್ದಾರೆ.  

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಳೆದ ೨೦೦೯ ರಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯ ಅಂಕಿ-ಅಂಶಗಳನ್ನು ಹೋಲಿಸಿದಾಗ ಕ್ಷೇತ್ರದಲ್ಲಿ ಒಟ್ಟಾರೆ ಶೇ. ೧೦ ಕ್ಕಿಂತಲೂ ಹೆಚ್ಚು ಮತದಾನ ಪ್ರಮಾಣ ಏರಿಕೆಯಾಗಿರುವುದು ಪ್ರಮುಖ ಅಂಶವಾಗಿದೆ.  
* ಸಿಂಧನೂರು ಕ್ಷೇತ್ರದಲ್ಲಿ ಈ ಬಾರಿ ಶೇ. ೬೧. ೯೩ ರಷ್ಟು ಮತದಾನವಾಗಿದ್ದು ಕಳೆದ ಬಾರಿ ಶೇ. ೪೫. ೬೩ ರಷ್ಟು ಮತದಾನವಾಗಿತ್ತು.  ಇಲ್ಲಿ ಶೇ. ೧೬. ೩ ರಷ್ಟು ಏರಿಕೆಯಾಗಿದೆ.  
* ಮಸ್ಕಿ ಕ್ಷೇತ್ರದಲ್ಲಿ ಶೇ. ೫೮. ೬೦ ರಷ್ಟು ಮತದಾನವಾಗಿದ್ದು, ೨೦೦೯ ರಲ್ಲಿ ಶೇ. ೪೮. ೨೯ ಮತದಾನವಾಗಿತ್ತು.  ಇಲ್ಲಿ ಶೇ. ೧೦. ೩೧ ಏರಿಕೆಯಾಗಿದೆ.  
* ಕುಷ್ಟಗಿ ಕ್ಷೇತ್ರದಲ್ಲಿ ಈ ಬಾರಿ ಶೇ. ೫೯. ೩೪ ಮತದಾನವಾಗಿದ್ದು, ಕಳೆದ ಚುನಾವಣೆಯಲ್ಲಿ ಶೇ. ೫೧. ೯೨ ಮತದಾನವಾಗಿತ್ತು.  ಇದರಿಂದಾಗಿ ಇಲ್ಲಿ ಶೇ. ೭. ೪೨ ರಷ್ಟು ಮತದಾನ ಹೆಚ್ಚಳವಾಗಿದೆ.  
*   ಕನಕಗಿರಿ ಕ್ಷೇತ್ರದಲ್ಲಿ ಶೇ. ೬೯. ೬೬ ರಷ್ಟು ಮತದಾನವಾಗಿದ್ದು, ಈ ಹಿಂದೆ ೫೯. ೨೯ ರಷ್ಟಾಗಿತ್ತು.  ಇಲ್ಲಿ ಶೇ. ೧೦. ೩೭ ರಷ್ಟು ಏರಿಕೆಯಾಗಿದೆ.  
*  ಗಂಗಾವತಿ ಕ್ಷೇತ್ರದಲ್ಲಿ ಈ ಬಾರಿ ಶೇ. ೬೮. ೯೩ ರಷ್ಟು ಮತದಾನವಾಗಿದ್ದು, ಕಳೆದ ಬಾರಿ ಶೇ. ೬೧. ೧೪ ಮತದಾನವಾಗಿತ್ತು.  ಇದರಿಂದಾಗಿ ಇಲ್ಲಿ ಶೇ. ೭. ೭೯ ರಷ್ಟು ಹೆಚ್ಚಳವಾಗಿದೆ.  
*    ಯಲಬುರ್ಗಾ ಕ್ಷೇತ್ರದಲ್ಲಿ ಈ ಬಾರಿ ೬೮. ೨೪ ರಷ್ಟು ಮತದಾನವಾಗಿದ್ದು, ಈ ಹಿಂದೆ ೬೦. ೪೪ ಮತದಾನ ನಡೆದಿತ್ತು.  ಇಲ್ಲಿ ಶೇ. ೭. ೮೦ ರಷ್ಟು ಏರಿಕೆಯಾಗಿದೆ.  
*  ಕೊಪ್ಪಳ ಕ್ಷೇತ್ರದಲ್ಲಿ ಈ ಬಾರಿ ಶೇ. ೭೧. ೬೫ ರಷ್ಟು ಮತದಾನ ನಡೆದಿದ್ದು, ಕಳೆದ ಬಾರಿ ೬೦. ೫೬ ರಷ್ಟು ಮತದಾನವಾಗಿತ್ತು.  ಇಲ್ಲಿ ಒಟ್ಟು ಶೇ. ೧೧. ೦೯ ರಷ್ಟು ಮತದಾನ ಹೆಚ್ಚಳವಾಗಿದೆ.  
*  ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ. ೬೫. ೭೯ ರಷ್ಟು ಮತದಾನವಾಗಿದ್ದು, ೨೦೦೯ ರಲ್ಲಿ ಶೇ. ೫೭. ೮೮ ಮತದಾನ ದಾಖಲಾಗಿತ್ತು.  ಇಲ್ಲಿ ಶೇ. ೭. ೯೧ ರಷ್ಟು ಪ್ರಮಾಣದ ಮತದಾನ ಹೆಚ್ಚಳವಾಗಿದೆ.

       ಸಿಂಧನೂರು ವಿಧಾನಸಭಾ ಕ್ಷೇತ್ರದ ೨೩೭ ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ ೨೦೬೮೬೭ ಮತದಾರರ ಪೈಕಿ ೧೨೮೧೨೦ ಜನ ಮತ ಚಲಾಯಿಸಿದ್ದು, ಶೇ. ೬೧. ೯೩ ರಷ್ಟು ಮತದಾನ ನಡೆದಿದೆ.  ಈ ಕ್ಷೇತ್ರದಲ್ಲಿ ೬೭೬೬೪ ಪುರುಷರು ಹಾಗೂ ೬೦೪೫೬ ಮಹಿಳೆಯರು ಮತ ಚಲಾಯಿಸಿದ್ದಾರೆ.
           ಮಸ್ಕಿ ವಿಧಾನಸಭಾ ಕ್ಷೇತ್ರದ ೨೦೪ ಮತಗಟ್ಟೆಗಳಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ೧೭೨೭೮೯ ಮತದಾರರ ಪೈಕಿ ೧೦೧೨೫೭ ಜನ ತಮ್ಮ ಹಕ್ಕು ಚಲಾಯಿಸಿದ್ದು, ಶೇ. ೫೮. ೬೦ ರಷ್ಟು ಇಡೀ ಕ್ಷೇತ್ರದಲ್ಲಿ ಅತಿ ಕಡಿಮೆ ಪ್ರಮಾಣದ ಮತದಾನವಾಗಿದೆ.  ಈ ವಿಧಾನಸಭಾ ಕ್ಷೇತ್ರದಲ್ಲಿ ೫೩೮೭೦ ಪುರುಷರು ಹಾಗೂ ೪೭೩೮೫ ಮಹಿಳೆಯರು ಮತದಾನ ಮಾಡಿದ್ದಾರೆ.
    ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲ್ಲಿನ ೨೫೨ ಮತಗಟ್ಟೆಗಳಲ್ಲಿ ಮತದಾನವಾಗಿದ್ದು, ೨೦೧೯೦೪ ಮತದಾರರ ಪೈಕಿ ೧೧೯೮೨೬ ಜನ ತಮ್ಮ ಸಂವಿಧಾನಾತ್ಮಕ ಮತದಾನ ಹಕ್ಕು ಚಲಾಯಿಸಿದ್ದಾರೆ.  ಇಲ್ಲಿ ಶೇ. ೫೯. ೩೪ ರಷ್ಟು ಮತದಾನ ನಡೆದಿರುತ್ತದೆ. ಈ ಕ್ಷೇತ್ರದಲ್ಲಿ ೬೨೯೨೪ ಪುರುಷರು ಹಾಗೂ ೫೬೯೦೨ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕನಕಗಿರಿ ವಿಧಾನಸಭಾ ಕ್ಷೇತ್ರದ ೨೩೯ ಮತಗಟ್ಟೆಗಳಲ್ಲಿ ನಡೆದ ಚುನಾವಣೆಯಲ್ಲಿ ೧೯೧೧೪೫ ಮತದಾರರ ಪೈಕಿ ೧೩೩೧೫೨ ಜನ ಮತದಾನ ಮಾಡಿದ್ದು ಶೇ. ೬೯. ೬೬ ರಷ್ಟು ಮತದಾನವಾದಂತಾಗಿದೆ.  ಈ ಕ್ಷೇತ್ರದಲ್ಲಿ ೬೯೧೨೫ ಪುರುಷರು ಹಾಗೂ ೬೪೦೨೭ ಮಹಿಳೆಯರು ಮತದಾನ ಮಾಡಿದ್ದಾರೆ.
  ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲ್ಲಿನ ೨೧೧ ಮತಗಟ್ಟೆಗಳಲ್ಲಿ ಮತದಾನ ನಡೆದು, ೧೭೯೭೦೩ ಮತದಾರರ ಪೈಕಿ ೧೨೩೮೮೧ ಜನ ಮತ ಚಲಾಯಿಸಿದ್ದಾರೆ.  ಈ ಕ್ಷೇತ್ರದಲ್ಲಿ ಶೇ. ೬೮. ೯೩ ರಷ್ಟು ಮತದಾನವಾಗಿದ್ದು, ೬೩೮೧೩ ಪುರುಷರು ಹಾಗೂ ೬೦೦೬೮ ಮಹಿಳೆಯರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ೨೩೭ ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ ಒಟ್ಟು ೧೮೭೨೨೩ ಮತದಾರರ ಪೈಕಿ ೧೨೭೭೬೭ ಜನ ಮತ ಚಲಾಯಿಸಿದ್ದು, ಶೇ. ೬೮. ೨೪ ರಷ್ಟು ಮತದಾನ ನಡೆದಿದೆ.  ಈ ಕ್ಷೇತ್ರದಲ್ಲಿ ೬೭೦೩೨ ಪುರುಷರು ಹಾಗೂ ೬೦೭೩೫ ಮಹಿಳೆಯರು ಮತ ಚಲಾಯಿಸಿದ್ದಾರೆ.
  ಕೊಪ್ಪಳ ವಿಧಾನಸಭಾ ಕ್ಷೇತ್ರದ ೨೫೩ ಮತಗಟ್ಟೆಗಳಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ೨೧೬೨೧೨ ಮತದಾರರ ಪೈಕಿ ೧೫೪೯೨೩ ಜನ ತಮ್ಮ ಹಕ್ಕು ಚಲಾಯಿಸಿದ್ದು, ಶೇ. ೭೧. ೬೫ ರಷ್ಟು ಕ್ಷೇತ್ರದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ಮತದಾನವಾಗಿದೆ.  ಈ ವಿಧಾನಸಭಾ ಕ್ಷೇತ್ರದಲ್ಲಿ ೮೦೭೧೪ ಪುರುಷರು ಹಾಗೂ ೭೪೨೦೯ ಮಹಿಳೆಯರು ಮತದಾನ ಮಾಡಿದ್ದಾರೆ.
  ಶಿರಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲ್ಲಿನ ೨೦೩ ಮತಗಟ್ಟೆಗಳಲ್ಲಿ ಮತದಾನವಾಗಿದ್ದು, ೧೭೮೯೮೩ ಮತದಾರರ ಪೈಕಿ ೧೧೭೭೫೯ ಜನ ತಮ್ಮ ಸಂವಿಧಾನಾತ್ಮಕ ಮತದಾನ ಹಕ್ಕು ಚಲಾಯಿಸಿದ್ದಾರೆ.  ಇಲ್ಲಿ ಶೇ. ೬೫. ೭೯ ರಷ್ಟು ಮತದಾನ ನಡೆದಿರುತ್ತದೆ. ಈ ಕ್ಷೇತ್ರದಲ್ಲಿ  ೬೦೯೫೪ ಪುರುಷರು ಹಾಗೂ ೫೬೮೦೫ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
  ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಮತದಾನವು  ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿರುವುದಿಲ್ಲ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರ ಚುನಾವಣಾಧಿಕಾರಿ ಕೆ.ಪಿ. ಮೋಹನ್‌ರಾಜ್  ತಿಳಿಸಿದ್ದಾರೆ.

ಕೊಪ್ಪಳ ಲೋಕಸಭೆ ಕ್ಷೇತ್ರ : ಶೇ. ೬೪ ಮತದಾನ


ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಗುರುವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟಾರೆ ಶೇ. ೬೪ ರಷ್ಟು ಮತದಾನವಾಗಿದ್ದು, ಹೆಚ್ಚಿನ ವಿವರಗಳನ್ನು ಆಯಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳಿಂದ ನಿರೀಕ್ಷಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
  ಬೇಸಿಗೆಯ ಕಾಲ ಇರುವುದರಿಂದ, ಮತದಾರರು ತಮ್ಮ ಮತ ಚಲಾವಣೆಗಾಗಿ ಇಂದು ಬೆಳಿಗ್ಗೆ ೭ ಗಂಟೆಯ ಹೊತ್ತಿಗೆ ಮತಗಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಕ್ಷೇತ್ರಾದ್ಯಂತ ಸಾಮಾನ್ಯವಾಗಿತ್ತು.  ಕುಷ್ಟಗಿ ತಾಲೂಕಿನ ಬೆಂಚಮಟ್ಟಿ ಗ್ರಾಮದಲ್ಲಿ, ಮತಗಟ್ಟೆ ಸ್ಥಾಪನೆ ಹಾಗೂ ವಾಹನದ ಸೌಲಭ್ಯಕ್ಕಾಗಿ ಮತದಾನದ ಬಹಿಷ್ಕಾರದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದಕ್ಕೆ ಸ್ಪಂದಿಸಿದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು, ಕೂಡಲೆ ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು, ನಂತರ ವಾಹನದ ವ್ಯವಸ್ಥೆಗೊಳಿಸಿದ್ದರಿಂದ, ಪರಿಸ್ಥಿತಿ ತಿಳಿಗೊಂಡು, ಮತದಾರರು, ಮತದಾನಕ್ಕೆ ಮುಂದಾದ ಘಟನೆ ಜರುಗಿತು.  ಕೊಪ್ಪಳ ನಗರದ ಗಣೇಶ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೊಡ್ಡಿ, ಮತದಾನ ಮಾಡಲು ನಿರಾಕರಿಸಿದ ಬಗ್ಗೆ ಮಾಹಿತಿ ಲಭ್ಯವಾದ ಕೂಡಲೆ, ಎಚ್ಚೆತ್ತ ಅಧಿಕಾರಿಗಳು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ನಂತರ, ಮತದಾನ ಪ್ರಕ್ರಿಯೆ ಸಹಜವಾಗಿ ಪ್ರಾರಂಭಗೊಂಡಿತು.  ಉಳಿದಂತೆ ಕೊಪ್ಪಳ ಲೋಕಸಭಾ ಕ್ಷೇತ್ರಾದ್ಯಂತ ಯಾವುದೇ ಅಹಿತಕರ ಘಟನೆಗಳು ಜರುಗಿದ ಬಗ್ಗೆ ವರದಿಯಾಗಿಲ್ಲ.
  ಬೆಳಿಗ್ಗೆ ೭ ಗಂಟೆಯಿಂದ ಪ್ರಾರಂಭವಾದ ಮತದಾನ ೯ ಗಂಟೆಯವರೆಗೆ ಕ್ಷೇತ್ರದಲ್ಲಿ ಶೇ. ೬ ರಷ್ಟು ಮಾತ್ರ ಮತದಾನವಾಗಿತ್ತು.  ನಂತರ ಮತದಾನದಲ್ಲಿ ಚೇತರಿಕೆ ಕಂಡುಬಂದು, ಬೆಳಿಗ್ಗೆ ೧೧ ಗಂಟೆಯ ವೇಳೆಗೆ ಶೇ. ೧೭ ರಷ್ಟು ಮತದಾನವಾಯಿತು.  ಮಧ್ಯಾಹ್ನ ೧ ಗಂಟೆಯವರೆಗೆ ಶೇ. ೩೫ ರಷ್ಟು ಮತದಾನ ದಾಖಲಾಯಿತು.  ಮಧ್ಯಾಹ್ನ ೩ ಗಂಟೆಯ ವೇಳೆಗೆ ಕ್ಷೇತ್ರದಲ್ಲಿ ದಾಖಲಾದ ಮತದಾನದ ಪ್ರಮಾಣ ಶೇ. ೪೧.  ಸಂಜೆಯ ವೇಳೆಗೆ ಬಿಸಿಲಿನ ಝಳ ಕಡಿಮೆಯಾಗುತ್ತಿದ್ದಂತೆಯೇ, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಯತ್ತ ತೆರಳಿದ್ದರಿಂದ, ಸಂಜೆ ಮತಗಟ್ಟೆಗಳ ಬಳಿ ಮತದಾರರ ಸರದಿ ಸಾಲು ಉದ್ದವಾಗಿದ್ದು ಕಂಡುಬಂದಿತು.  ಸಂಜೆ ೫ ಗಂಟೆಯವರೆಗೆ ಕ್ಷೇತ್ರದಲ್ಲಿ ಒಟ್ಟು ಶೇ. ೫೭ ರಷ್ಟು ಮತದಾನವಾಗಿತ್ತು. ಮತದಾನಕ್ಕೆ ಸಂಜೆ ೬ ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿತ್ತು.  ಅಂತಿಮವಾಗಿ ಶೇ. ೬೪ ರಷ್ಟು ಮತದಾನವಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಮೂಲಗಳು ತಿಳಿಸಿವೆ.  ಕೊಪ್ಪಳ ಲೋಕಸಭಾ ಕ್ಷೇತ್ರ ಒಟ್ಟು ೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕನಕಗಿರಿ ಮತ್ತು ಗಂಗಾವತಿ.  ಬಳ್ಳಾರಿ ಜಿಲ್ಲೆಯ ಸಿರಗುಪ್ಪ, ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಮತದಾನದ ಕೆಲವು ಚಿತ್ರಗಳುಜಿಲ್ಲಾಧಿಕಾರಿಗಳಿಂದ ಮತದಾನ

ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಹಾಗೂ  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ  ತಮ್ಮ ಮತವನ್ನು ಚಲಾಯಿಸಿದರು.

Wednesday, April 16, 2014

ಪರಿಷಿಷ್ಠ ಜಾತಿ ಹಾಗೂ ಪರಿಷಿಷ್ಠ ಪಂಗಡಗಳ ಸರ್ಕಾರಿ ನೌಕರರ ಸಂಘದ ವತಿಯಿಂದ ಅಂಬೇಡ್ಕರ ಜಯಂತಿ

 ನಗರದ ನೌಕರರ ಭವನದಲ್ಲಿ ಇತ್ತೀಚಿಗೆ ಪರಿಷಿಷ್ಠ ಜಾತಿ ಹಾಗೂ ಪರಿಷಿಷ್ಠ ಪಂಗಡಗಳ ಸರ್ಕಾರಿ ನೌಕರರ ಸಂಘದ ವತಿಯಿಂದ ಅಂಬೇಡ್ಕರ ಜಯಂತಿ ಆಚರಿಸಲಾಯಿತು. ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಮಾತನಾಡಿ ಎಲ್ಲ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಅಂಬೇಡ್ಕರ್ ಅವರು ಶ್ರಮಿಸಿದ್ದಾರೆ. ಅವರ ಬದುಕು ಹಾಗೂ ಹೋರಾಟ ಇತರರಿಗೆ ಮಾದರಿಯಾಗಬೇಕು. ಸಂವಿಧಾನ ರಚನೆಯಲ್ಲಿ ಅವರು ವಹಿಸಿರುವ ಪಾತ್ರದಿಂದಲೇ ಇಂದಿಗೂ ಜನಮಾನಸದಲ್ಲಿ ಶಾಶ್ವತವಾಗಿದ್ದಾರೆ ಎಂದರು.  ಈ ಸಂದರ್ಭದಲ್ಲಿ  ಕೊಪ್ಪಳ ಜಿಲ್ಲಾ ಪರಿಷಿಷ್ಠ ಜಾತಿ ಹಾಗೂ ಪರಿಷಿಷ್ಠ ಪಂಗಡಗಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ವೀರಣ್ಣ, ಕರ್ನಾಟಕ ರಾಜ್ಯ ಪರಿಸಿಷ್ಠ ಜಾತಿ ಹಾಗೂ ಪರಿಸಿಷ್ಠ ಪಂಗಡಗಳ ಸರ್ಕಾರಿ ನೌಕರರ ಸಂಘದ ಸಹ ಕಾರ್ಯದರ್ಶಿ ಡಾ.ಗವಿಸಿದ್ಧಪ್ಪ ಮುತ್ತಾಳ,  ಪ್ರಭುರಾಜ ನಾಯಕ್, ಸಿ.ವಿ. ಚವ್ಹಾಣ,  ಹನುಮಂತಪ್ಪ ಸಿ ಉಪಸ್ಥಿತರಿದ್ದರು.