ಅಹ್ಮದಾಬಾದ್, ಆ. 9: ಗುಜರಾತ್ ನ ವಿಧಾನಸಭೆಯಿಂದ ರಾಜ್ಯ ಸಭೆಯ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳಾದ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಜಯ ಗಳಿಸಿದ್ದಾರೆ. ಮೂರನೆ ಸ್ಥಾನದ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಮುಖಭಂಗವಾಗಿದ್ದು, ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ರೋಚಕ ಜಯ ದಾಖಲಿಸಿದ್ದಾರೆ.
ಕಾಂಗ್ರೆಸ್ ನ ಅಹ್ಮದ್ ಪಟೇಲ್ ವಿರುದ್ಧ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು
ಬಿಜೆಪಿ ಸೇರಿರುವ ಬಲವಂತ್‌ಸಿಂಗ್ ರಜಪೂತ್ ಅವರನ್ನು ಕಣಕ್ಕಿಳಿಸಿದ್ದರೂ ಬಿಜೆಪಿ ತಂತ್ರ ಫಲ ನೀಡಲಿಲ್ಲ.
ಬಿಜೆಪಿ ಸೇರಿರುವ ಬಲವಂತ್‌ಸಿಂಗ್ ರಜಪೂತ್ ಅವರನ್ನು ಕಣಕ್ಕಿಳಿಸಿದ್ದರೂ ಬಿಜೆಪಿ ತಂತ್ರ ಫಲ ನೀಡಲಿಲ್ಲ.
ಚುನಾವಣಾ ಆಯೋಗವು ಕಾಂಗ್ರೆಸ್ ನಿಂದ ಅಡ್ಡ ಮತದಾನ ಮಾಡಿದ ಇಬ್ಬರು ಶಾಸಕರ ಮತವನ್ನು ರದ್ದು ಮಾಡುವಂತೆ ಕಾಂಗ್ರೆಸ್ ಮಾಡಿದ್ದ ಮನವಿಯನ್ನು ಕೇಂದ್ರ ಚುನಾವಣಾ ಆಯೋಗ ಪುರಸ್ಕರಿಸಿತ್ತು. ಇದರಿಂದಾಗಿ ಮತ ಎಣಿಕೆಯ ಮೊದಲೇ ಬಿಜೆಪಿಗೆ ಮುಖಭಂಗವಾಗಿತ್ತು.
ಗುಜರಾತ್‌ನಲ್ಲಿ ರಾಜ್ಯ ಸಭೆಯ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿರುವ ಇಬ್ಬರು ಶಾಸಕರಾದ ಬೋಲಾಭಾಯ್ ಗೋಯಲ್ ಮತ್ತು ರಾಘವಜಿಭಾಯ್ ಪಟೇಲ್ ಮತವನ್ನು ರದ್ಧು ಪಡಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಒತ್ತಾಯಿಸಿತ್ತು. ಆದರೆ ಕಾಂಗ್ರೆಸ್ ನ ಮನವಿಯನ್ನು ತಿರಸ್ಕರಿಸುವಂತೆ ಬಿಜೆಪಿ ಮನವಿ ಮಾಡಿದ್ದರೂ ಫಲ ನೀಡಲಿಲ್ಲ
0 comments:
Post a Comment