ಜಿಲ್ಲೆಯ ಬಾಲಕಿಯರ ಬಾಲ ಮಂದಿರಕ್ಕೆ ನಗರಸಭೆ ಉಪಾಧ್ಯಕ್ಷ ಎಸ್. ಅಮ್ಜದ್ ಪಟೇಲ್ ಮತ್ತು ಜಿಲ್ಲಾ ಜನಪರ ಜಾಗೃತಿ ವೇದಿಕೆಯ ಅಧ್ಯಕ್ಷ ಮೈಲಪ್ಪ ಬಿಸರಳ್ಳಿ ಹಾಗೂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಪ್ರಧಾನ ಕಾರ್ಯದರ್ಶಿ ಮುನೀರ್ ಸಿದ್ದೀಕಿ ಜಂಟಿಯಾಗಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
ಬಾಲಕಿಯರ ಬಾಲಮಂದಿರದ ಮಕ್ಕಳೊಂದಿಗೆ ಚರ್ಚೆಗಿಳಿದಾಗ ಮಕ್ಕಳಿಗೆ ಕುಡಿಯಲು ಉಪ್ಪು ನೀರು ನೀಡುತ್ತಿರುವುದು, ರಾತ್ರಿ ವಿದ್ಯುತ್ ಹೋದಲ್ಲಿ ಬೆಳಕಿನ ಬದಲಿ ವ್ಯವಸ್ಥೆ ಮಾಡದಿರುವದನ್ನು ಮತ್ತು ಭಾಗ್ಯನಗರದಿಂದ ಕೊಪ್ಪಳದ ಬನ್ನಿಕಟ್ಟಿ ಹತ್ತಿರದ ಗಾಂಧಿನಗರ ಮತ್ತು ರೈಲ್ವೆ ನಿಲ್ದಾಣ ಹತ್ತಿರದ ರಾಧಾಬಾಯಿ ಶಾಲೆ, ಬೆಂಕಿ ನಗರ ಪ್ರೌಢಶಾಲೆಗಳಿಗೆ ದಿನ ಮಕ್ಕಳು ಬರಲು ತೊಂದರೆಯಾಗುತ್ತಿದೆಂದು ಅಸಮಧಾನ ವ್ಯಕ್ತಪಡಿಸಿದರು.
ಒಬ್ಬ ಬಾಲಕಿಗೆ ಕೀವಿ ಸೊರುತ್ತಿದ್ದು, ಇನ್ನೂ ಕೆಲ ಬಾಲಕಿಯರಿಗೆ ಕೆಮ್ಮು, ಜ್ವರದಂತಹ ಅನಾರೋಗ್ಯ ಇರುವದನ್ನು ಗಮನಿಸಿ ಡಾ|| ಮಹೇಶ ಉಮಚಿಗಿ ಅವರಿಗೆ ದೂರವಾಣಿಯಲ್ಲಿ ಎಸ್. ಅಮ್ಜದ್ ಪಟೇಲ್ ಮಾತನಾಡಿ ತಕ್ಷಣ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಕಾರಟಗಿಯ ೭ ತಿಂಗಳಿನ ಶಿವಕುಮಾರ, ಢಾಣಾಪೂರದ ಎರಡುವರೆ ವರ್ಷದ ಸಂಗೀತಾ, ಕನಕಗಿರಿಯ ಆರು ವರ್ಷದ ಶೋಭಾ ಎಂಬ ಕಿರಿಯ ಮಕ್ಕಳನ್ನು ನೋಡಿ ಕನಿಕರ ಪಟ್ಟರು. ಊಟ-ಉಪಚಾರ ನೀಡುತ್ತಿರುವದನ್ನು ವಿಚಾರಿಸಿದರು. ಬೆಳಿಗ್ಗೆ ಸ್ನಾನಕ್ಕೆ ಬಿಸಿ ನೀರಿಲ್ಲದನ್ನು ತಿಳಿದುಕೊಂಡು ಸರ್ಕಾರ ಹಣ ಎನೇನೋ ಯೋಜನೆಗಳಿಗೆ ವಿನಿಯೋಗಿಸುತ್ತಿದ್ದು, ಇಂತಹ ಮಕ್ಕಳ ಬದುಕಿಗೆ ಮತ್ತು ಭವಿಷ್ಯಕ್ಕೆ ಬಳಸುವದು ತುಂಬಾ ಅಗತ್ಯವಿದೆ ಎಂದು ಎಸ್. ಅಮ್ಜದ್ ಪಟೇಲ್ ಹೇಳಿದರು.
ಬಾಲಮಂದಿರ ಸಮಿತಿ ಪ್ರಭಾರಿ ಅಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ಸದಸ್ಯ ಶೇಖರಗೌಡ ರಾಮತ್ನಾಳ ಅವರಿಂದ ಮಾಹಿತಿ ತಿಳಿದುಕೊಂಡು ನಗರದ ಬನ್ನಿಕಟ್ಟಿ ಹತ್ತಿರ ಇದ್ದ ಬಾಲಕಿಯರ ಬಾಲಮಂದಿರ ಮಂಗಳವಾರ ಅಷ್ಟೇ ಕಿರು ಕೊಣೆ ಇದೆ ಎಂಬ ಕಾರಣಕ್ಕೆ ಬದಲಾಯಿಸಿ ಭಾಗ್ಯನಗರಕ್ಕೆ ವರ್ಗಾಹಿಸಿದ್ದಾರೆ. ೧ ರಿಂದ ೧೦ನೇ ತರಗತಿವರೆಗೆ ಓದುವ ೪೦ಕ್ಕೂ ಹೆಚ್ಚು ಬಾಲಕಿಯರು ಇರುವ ಈಗಿನ ಕಟ್ಟಡ ಸಹ ಮಕ್ಕಳಿಗೆ ಇರಲು ಸರಿಹೊಂದುವುದಿಲ್ಲ. ಕೊಪ್ಪಳ ನಗರದಲ್ಲಿ ವಿಶಾಲವಾದ ಕಟ್ಟಡ ಬಾಡಿಗೆ ಪಡೆಯುವಂತೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಬಾಲಮಂದಿರಕ್ಕೆ ಕಟ್ಟಡ ನಿರ್ಮಿಸಲು ೬೦ ಲಕ್ಷ ರೂ. ಬಂದಿದು, ಚುಕ್ಕನಕಲ್ಲ ಹತ್ತಿರ ೪ ಎಕರೆ ಭೂಮಿ ಖರೀದಿಸಲಾಗಿದೆ. ಅದರಲ್ಲಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಹೇಳಿ ಇನ್ನೂ ಮುಂದೆ ಆಗಾಗ ಅನಿರೀಕ್ಷಿತ ಭೇಟಿ ನೀಡುತ್ತೇನೆ. ಎನೇ ಸಮಸ್ಯೆಗಳಿದ್ದಲ್ಲಿ ತಮಗೆ ದೂರವಾಣಿ ಮೂಲಕ ಹೇಳುವಂತೆ ಮಕ್ಕಳಿಗೆ ತಿಳಿಸಿದರು.
0 comments:
Post a Comment