ಸ.ಪ.ಪೂ ಕಾಲೇಜು (ಪ್ರೌಢಶಾಲಾ ವಿಭಾಗ, ಇರಕಲ್‌ಗಡಾದಲ್ಲಿ ಕೊಪ್ಪಳ ತಾಲೂಕಿನ ಎಲ್ಲಾ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಓರ್ವಭಾಷಾ ಶಿಕ್ಷಕರು ಹಾಗೂ ಓರ್ವ ಐಚ್ಛಿಕ ವಿಷಯಗಳನ್ನು ಬೋಧಿಸುವ ಒಟ್ಟು ೯೦ ಜನ ಶಿಕ್ಷಕರಿಗೆ ಸಿ.ಸಿ.ಇ (ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ) ತರಬೇತಿಯನ್ನು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹಾಗೂ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಕೊಪ್ಪಳ ತಾಲೂಕ ಘಟಕದ ವತಿಯಿಂದ ಏರ್ಪಡಿಸಲಾಗಿತ್ತು.
ಕಾರ‍್ಯಗಾರವನ್ನು ಪ್ರಭಾರಿ ಉಪನಿರ್ದೆಶಕರಾದ ಬಿ.ಎಸ್.ಗೋನಾಳರವರು ಉದ್ಘಾಟಿಸಿ ಪ್ರೌಢಶಾಲಾ ಸಹ ಶಿಕ್ಷಕರ ಸಂWವು ಹಮ್ಮಿಕೊಂಡಿರುವ ಕಾರ್ಯಗಾರದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿ ಕಾರ‍್ಯಗಾರದಲ್ಲಿ ಭಾಗವಹಿಸಿದ ಸರ್ವ ಶಿಕ್ಷಕರು ಉತ್ತಮ ತರಬೇತಿ ಪಡೆದುಕೊಳ್ಳಲು ತಿಳಿಸಿದರು. ಜಾಕೀರ ಹುಸೇನ ಕುಕನೂರು ಉಪಾಧ್ಯಕ್ಷರು ರಾಜ್ಯ ಘಟಕ ಬೆಂಗಳೂರು ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಂಘವು ಕೇವಲ ಹಕ್ಕಿಗಾಗಿ ಹೋರಾಡದೆ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಗುಣ ಮಟ್ಟದ ಶಿಕ್ಷಣಕ್ಕಾಗಿ ಪ್ರಮಾಣಿಕ ಚಿಂತನೆಯನ್ನು ಮಾಡುತ್ತಿದೆ ಎಂದರು. ಮುಖ್ಯ ಅತಿಥಿಗಳಾದ ವೀರಬಸಪ್ಪ ಪಟ್ಟಣಶೆಟ್ಟರ ಕಾರ್ಯಗಾರವನ್ನು ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಲಿಂಗಯ್ಯ ಕಲ್ಮಠ, ವೀರಬಸಪ್ಪ ಶೆಟ್ಟರ ಭಾಗವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷರಾದ ಹೆಚ್ ಎಸ್ ಶಿವರಡ್ಡಿ, ಮಾತನಾಡುತ್ತಾ ಉಪನಿರ್ದೆಶಕರ ಕಛೇರಿಯಲ್ಲಿ ಕಾರಣಾಂತರಗಳಿಂದ ವಿಳಂಬವಾಗಿರುವ ಕಡತಗಳನ್ನು ತುರ್ತು ವಿಲೇವಾರಿಗೆ ಆಗ್ರಹಿಸದರು ಹಾಗೂ ತಾಲೂಕ ಘಟಕದ ಅಧ್ಯಕ್ಷರಾದ ಎಸ್.ಬಿ.ಕುರಿ ಮಾತನಾಡಿ ಶಿಕ್ಷಕರಿಗೆ ಅತ್ಯವಶ್ಯಕವಾಗಿ ಬೇಕಾಗಿದ್ದ ಕಾರ‍್ಯಗಾರವನ್ನು ಹಮ್ಮಿಕೊಳ್ಳಲು ಪ್ರೋತ್ಸಾಹಿಸಿದ ಸರ್ವರನ್ನು ಜ್ಞಾಪಿಸಿಕೊಳ್ಳುವುದರ ಜೋತೆಗೆ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಇದೇ ರೀತಿ ಕೋರಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮೇಶ ಪೂಜಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಪ್ಪಳ ಇವರು ಅಧ್ಯಕ್ಷಿಯ ನುಡಿಗಳನ್ನಾಡುತ್ತಾ ಕಾರ್ಯಗಾರದಲ್ಲಿ ಪಡೆದುಕೊಂಡು ಹೋಗುವ ಎಲ್ಲಾ ಮಾಹಿತಿಗಳನ್ನು ಶಾಲಾ ಕೊಠಡಿಗಳಲ್ಲಿ ತಪ್ಪದೇ ಅನುಷ್ಠಾನಕ್ಕೆ ತರಬೇಕೆಂದು ತಿಳಿಸಿದರು. ಮುಂಬರುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಉತ್ತಮ ರೀತಿಯಲ್ಲಿ ಬರುವಂತೆ ಶ್ರಮಿಸಲು ಶಿಕ್ಷಕರಿಗೆ ಕರೆನೀಡಿದರು. ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಪ್ಪ ಕುದರಿ, ದೇವರಡ್ಡಿ ಡಂಬ್ರಳ್ಳಿ, ಇವರು ಎಲ್ಲಾ ಶಿಕ್ಷಕರಿಗೂ ಸರಳ ರೀತಿಯಲ್ಲಿ ತಿಳಿಯುವಂತೆ ಸಿ.ಸಿ.ಇ ತರಬೇತಿ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದ ಪ್ರಾರ್ಥನೆಯನ್ನು ಶಾಲಾ ಬಾಲಕಿಯರಿಂದ ಮೂಡಿಬಂತು. ತಾಲೂಕ ಸಂಘದ ಖಜಾಂಚಿ ಹಾಗೂ ಉಪಾಪ್ರಾಂಶುಪಾಲರಾದ ಯಲ್ಲಪ್ಪ.ಬಿ.ಬಂಡಿ ಯವರು ಸರ್ವರನ್ನು ಸ್ವಾಗತಿಸಿದರು. ತಾಲೂಕಿನ ಪ್ರಧಾನ ಕಾರ್ಯದರ್ಶಿಗಳಾದ ಮಾರ್ತಂಡರಾವ್ ದೆಸಾಯಿಯವರು ಸರ್ವರನ್ನು ವಂಧಿಸಿದರು. ಪತ್ತಿನ ಸಹಕಾರಿ ಸಂಘದ ಖಜಾಂಚಿಗಳಾದ ರಾಮಣ್ಣ ಬಾರಕೇರವರು ಕಾರ್ಯಕ್ರಮವನ್ನು ನಿರೂಪಿಸದರು.
0 comments:
Post a Comment