PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ವನಮಹೋತ್ಸವ ಕಾರ್ಯಕ್ರಮದದಲ್ಲಿಂದು ಸಿದ್ಧೇಶ್ವರ ನಗರ, ಬೇಲ್ದಾರಕಾಲನಿ, ಕಾಳಿದಾಸನಗರ, ಬಿ.ಟಿ.ಪಾಟೀಲನಗರ, ವಿಕಾಸನಗರ, ಪೋಲಿಸಕಾಲನಿ, ಸತ್ಯಧ್ಯಾನಪುರಬಡಾವಣೆ ಗಳಲ್ಲಿ  ಒಟ್ಟು ೮ ಟ್ರ್ಯಾಕ್ಟರ್ ಸಸಿಗಳನ್ನು ವಿತರಿಸಲಾಯಿತು.  ಶ್ರೀಗವಿಮಠ , ವನಶ್ರೀಟ್ರಸ್ಟ, ಜಿಲ್ಲಾಡಳಿತ, ಅರ








ಣ್ಯ ಇಲಾಖೆ, ನಗರಸಭೆ, ಹಾಗೂ ಪರಿಸರ ಪ್ರಿಯಸಂಘಟಣೆಗಳ ಅಡಿಯಲ್ಲಿ ಜರುಗಲಿರುವ ಈ ಕಾರ್ಯಕ್ರಮ ಇಂದು ೩ ನೇ ದಿನಕ್ಕೆ ಪಾದಾರ್ಪಣೆ ಮಾಡಿದೆ.  ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ಜೊತೆ  ಶಾಸಕರಾದ ರಾಘವೇಂದ್ರ ಹಿಟ್ನಾಳ್  ಭಾಗಿಯಾಗಿದ್ದರು. ಪ್ರತಿಯೊಬ್ಬರೂ ಪೂಜ್ಯ ಶ್ರೀಗಳ ಪಾದಕ್ಕೆ ವಂದಿಸುತ್ತಾ ಧನ್ಯತಾಭಾವದಿಂದ ಸಸಿಗಳನ್ನು ಪಡೆದುಕೊಂಡು ಸ್ವಯಂ ನೆಡುವಲ್ಲಿ ನಿರತರಾದರು.ಪ್ರತಿ ವಾರ್ಡಗಳಲ್ಲೂ ಪೂಜ್ಯ ಶ್ರೀಗಳ ಜೊತೆ ಪುರ ಪ್ರಮುಖರು, ರಾಜಕೀಯ ಧುರೀಣರು ಜೊತೆಗೂಡಿ ಸಹಕರಿಸುತ್ತಿದ್ದರು. ಕಾಳಿದಾಸ ಹೈಸ್ಕೂಲ್ ಹಾಗೂ ಶ್ರೀಗವಿಸಿದ್ಧಶ್ವರ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್ / ಎನ್.ಸಿ.ಸಿ ವಿದ್ಯಾರ್ಥಿಗಳು ಮೊದಲಾದವರು ಭಾಗವಹಿಸಿದ್ದರೆಂದು ಡಾ ಪ್ರಕಾಶ ಬಳ್ಳಾರಿ ತಿಳಿಸಿದ್ದಾರೆ.
ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಭಕ್ತರ ಮೇಲಿನ ಪ್ರೀತಿ:
ಕೊಪ್ಪಳ : ವನಮಹೋತ್ಸವ ಕಾರ್ಯಕ್ರಮದದಲ್ಲಿಂದು ಸಿದ್ಧೇಶ್ವರ ನಗರ, ಬೇಲ್ದಾರಕಾಲನಿ, ಕಾಳಿದಾಸನಗರಗಳಲ್ಲಿ ಸಸಿ ವಿತರಣೆಯ ಸಮಯದಲ್ಲಿ  ಭಕ್ತ ಜನರಿಗೆ ಸಸಿಗಳನ್ನು ಪಡೆದುಕೊಂಡ  ಮೇಲೆ  ಚೆನ್ನಾಗಿ  ಬೆಳೆಸಬೇಕೆಂದು ಆಶಿರ್ವಚನ ಮಾಡುತ್ತಿದ್ದರು. ಹಾಗೆಯೇ ಗುಡಾರ ನಿವಾಸಿಗಳಲ್ಲಿರುವ ಮಕ್ಕಳನ್ನು ಕಂಡು ಮಕ್ಕಳನ್ನು ಶಾಲೆಗೆ ಕಳುಹಿಸಿರಿ. ಯಾವುದೇ ಕಾರಣಕ್ಕೂ ಶಾಲೆ ಬಿಡಿಸಬಾರದೆಂದು ಪಾಲಕರಿಗೆ  ಹಿತವಚನ ನುಡಿಯುತ್ತಿದ್ದರು. ಸಸಿಗಳನ್ನು ನೆಡಲು ಭಕ್ತಜನರು ಪೂಜ್ಯ ಶ್ರೀಗಳಿಗೆ ಮೊರೆ ಹೋಗುತ್ತಿದ್ದಾಗ ಶ್ರೀಗಳು ಅಲ್ಲಿರುವ ವಯೋವೃದ್ದರನ್ನು ಸ್ವತಹ ಕೈಹಿಡಿದು ಕರೆತಂದು ಅವರ ಕೈಯಿಂದ ಸಸಿಗಳನ್ನು ನೆಡಸುತ್ತಿದ್ದರು.  ಪ್ರತಿ ವಾರ್ಡುಗಳಲ್ಲಿ ಶ್ರೀಗಳ ದರ್ಶನ ಪಡೆಯಲು ಅಪಾರ ಜನಸ್ತೋಮ ಬರುತ್ತಲೇ ಇರುತ್ತಿತ್ತು. ಎಲ್ಲರನ್ನು  ಪ್ರೀತಿಯಿಂದ ಕಂಡು ಆಶಿರ್ವಚನಗೈಯುತ್ತಿದ್ದರು. 

Advertisement

0 comments:

Post a Comment

 
Top