ಕೊಪ್ಪಳ-28- ಮಹಿಳೆ ಅಡುಗೆ ಮನೆಗೆ ಸೀಮಿತವಾಗದೆ ಸ್ವಾವಲಂಬಿ ಜೀವನ ನಡೆಸಬೇಕಾದರೆ ಮಕ್ಕಳ ಶಿಕ್ಷಣ, ಮದುವೆ, ಮನೆಯ ಜವಾಬ್ದಾರಿ ನಿಭಾಯಿಸಿ, ಸ್ವ ಶಕ್ತರಾಗಿ ಬೆಳೆಯಬೇಕಾದರೆ ಆರ್ಥಿಕ ಹೊರೆ ನೀಗಿಸಬೇಕಾದರೆ ಸ್ವ-ಸಹಾಯ ಸಂಘಗಳು ಸಹಕಾರಿಯಾಗಲಿವೆ. ಎಂದು ಕೊಪ್ಪಳ ತಾಲೂಕ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ರುದ್ರಪ್ಪ ಬಡಿಗೇರ ಹೇಳಿದರು. ಅವರು ಕೊಪ್ಪಳ ತಾಲೂಕಿನ ಕಾತರಕಿ-ಗುಡ್ಲಾನೂರ ಗ್ರಾಮದಲ್ಲಿ ತಾಲೂಕ ವಿಶ್ವಕರ್ಮ ಸಮಾಜ ಹಾಗೂ ವಿಶ್ವಕರ್ಮ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಕಾಳಿಕಾದೇವಿ ಮಹಿಳಾ ಸ್ವ-ಸಹಾಯ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿ
ದರು. ಈ ಸಂದರ್ಭದಲ್ಲಿ ಶ್ರೀ ನಾಗಮೂರ್ತಿ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ಶೇಖರಪ್ಪ ಬಡಿಗೇರ, ವಿಶ್ವಕರ್ಮ ಸಮಾಜದ ದೇವೇಂದ್ರಪ್ಪ ಕಮ್ಮಾರ, ಜಿಲ್ಲಾ ಮಹಿಳಾ ಸಂಘಟನಾ ಕಾರ್ಯದರ್ಶಿ ಶಾರದಾ ಮನ್ನಾಪುರ, ಹಿರಿಯರಾದ ಚಿದಾನಂದಪ್ಪ ಬಡಿಗೇರ, ಗ್ರಾ.ಪಂ.ಸದಸ್ಯೆ ಶಶಿಕಲಾ ಫಕೀರೇಶ ಕಮ್ಮಾರ, ಸಂಘದ ಪ್ರತಿನಿಧಿ ಸುಧಾ ಬಡಿಗೇರ ಇತರರು ವೇದಿಕೆ ಮೇಲೆ ಇದ್ದರು. ರಾಜ್ಯ ಯುವ ಪ್ರಶಸ್ತಿ ವಿಜೇತ ಜಗದಯ್ಯ ಸಾಲಿಮಠ ಜಾನಪದ ಮತ್ತು ಲಾವಣಿ ಗೀತೆಗಳನ್ನು ಹಾಡಿ ಜನ-ಮನ ತಣಿಸಿದರು. ಶಾರದಾ ಬಡಿಗೇರ ಪಾರ್ಥಿಸಿದರೆ, ಗ್ರಾಮದ ವಿಶ್ವಕರ್ಮ ಸಮಾಜದ ಅಧ್ಯಕ್ಷ ಫಕೀರೇಶ ಕಮ್ಮಾರ ಸ್ವಾಗತಿಸಿದರು. ಪರಮೇಶ ಬಡಿಗೇರ ನಿರೂಪಿಸಿದರು ಕಾಳಪ್ಪ ಬಡಿಗೇರಿ ವಂದಿಸಿದರು.

ವಿಶ್ವಕರ್ಮ ನಿಗಮದಿಂದ ಯಾವುದೆ ಸಹಾಯ ನಮಗೆ ದೊರೆತಿಲ್ಲ ಮತ್ತು ಅದರಿಂದ ಯಾವುದೇ ಆಶ್ರಯ ಯೋಜನೆ ಮತ್ತು ಇನ್ ಇತರ ಮಾಹಿತಿ ನಮಗೆ ತಿಳಿದಿರುವದಿಲ್ಲ ಮತ್ತು ಅದರಿಂದ ನಮಗೆ ಏನು ಗೊತ್ತಿಲನದಂತೆ ಆಗಿದೆದಯವಿಟ್ಟು ನಮಗೆ ಮಾಹಿತಿ ನೀಡಬೇಕೆಂದು ಕೇಳಿಕೊಳ್ಳುತ್ತೆವೆ
ReplyDeletePlz help this one
ReplyDelete