ಕೊಪ್ಪಳ- 11- ನಗರದ ಶ್ರೀಮಲಿಯಮ್ಮದೇವಿ ದೇವಸ್ಥಾನದಲ್ಲಿ ಇಂದು ದಿನಾಂಕ ೧೧-೦೧-೨೦೧೬ ಸಂಜೆ ೪ ಗಂಟೆಗೆ ಎನ್.ಎಸ್.ಎಸ್. ವಾರ್ಷಿಕ ಶಿಬಿರ ೨೦೧೬ ಉದ್ಘಾಟನೆಯಾಯಿತು. ನಗರಸಭೆ ಅಧ್ಯಕ್ಷೆ ಶೀಮತಿ ಬಸಮ್ಮ ಹಳ್ಳಿಗುಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪೌರಾಯುಕ್ತ ರಮೇಶ ಪಟ್ಟೇದಾರ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ವಿದ್ಯಾರ್ಥಿಗಳಲ್ಲಿ ನಾಯಕತ್ವಗುಣಗಳನ್ನು ಬೆಳೆಸಿಕೊಳ್ಳಲು ಇಂತಹ ಶಿಬಿರಗಳುಅವಶ್ಯ. ರಕ್ತವಿಲ್ಲದ ದೇಹ ಹೇಗೆ ಬದುಕಲು ಸಾಧ್ಯವಿಲ್ಲವೋ ಹಾಗೆಯೇ ಸ್ವಚ್ಛತೆಯ
ಅರಿವಿಲ್ಲದೇ ನಾವು ಬದುಕಲಾರೆವು. ಪರಿಸರವನ್ನು ಶುಭ್ರವಾಗಿಡುವ, ಸ್ವಚ್ಚತೆಯನ್ನು
ಇಟ್ಟುಕೊಳ್ಳುವ ಅರಿವು ನಮ್ಮದಾಗಬೇಕು. ಅಂದಾಗ ಮಾತ್ರ ಉತ್ತಮ ಆರೋಗ್ಯಪೂರ್ಣ ಸಮಾಜ
ನಿರ್ಮಾಣವಾಗಬಲ್ಲದು ಎಂದರು. ಮತ್ತೊಬ್ಬ ಅತಿಥಿಗಳಾಗಿ ಪದವಿ ಕಾಲೇಜಿನ ಪ್ರಾಂಶುಪಾಲ
ಎಂ.ಎಸ್ ದಾದ್ಮಿ ಮಾತನಾಡಿದರು. ಅಧ್ಯಕ್ಷತೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ
ಪರೀಕ್ಷಿತರಾಜ ವಹಿಸಿ ಸೇವಾ ಮನೋಭಾವನೆಯನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ
ಕರೆಕೊಟ್ಟರು. ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಯೋಜನಾ ಅಧಿಕಾರಿಗಳಾದ ಬಿ.ಶ್ರೀನಿವಾಸ,
ಸಹಾಯಕ ಶಿಬಿರಾಧಿಕಾರಿಗಳಾದ ಬಿ.ಎನ್.ತಳವಾರ, ಸಂತೋಷಗೌಡ, ಮೊದಲಾದವರು
ಉಪಸ್ಥಿತರಿದ್ದರು.
Subscribe to:
Post Comments (Atom)
0 comments:
Post a Comment