ಕೊಪ್ಪಳ-23- ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯಂಗವಾಗಿ ಬನದ ಹುಣ್ಣಿಮೆಯ ನಾಳೆ ದಿನಾಂಕ ೨೪-೦೧-೨೦೧೬ ರಂದು ಸಂಜೆ ೬ ಗಂಟೆಗೆ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮ ಜರುಗಲಿದೆ. ಇದು ಕೋಟೆ ಮಠದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳ ಮೂಲಕ ಗವಿಮಠ ತಲುಪವದು. ಶ್ರೀ ಗವಿಮಠದ ೧೧ ಪೀಠಾಧೀಶರಾಗಿದ್ದ ಜ|| ಗವಿಸಿದ್ದೇಶ್ವರ ಮಹಾಸ್ವಾಮಿಗಳವರು ಶ್ರೀ ಗವಿಮಠಕ್ಕೇ ಆಗಮಿಸುವ ಪೂರ್ವದಲ್ಲಿ ಕೊಪ್ಪಳದ ಜಡೇಗೌಢರ ಮನೆಯಲ್ಲಿ ಲಿಂಗಾನುಷ್ಠಾನ ನಿರತರಾಗಿದ್ದರು. ಶ್ರೀಗವಿಮಠಕ್ಕೆ ಬರುವ ಪೂರ್ವದಲ್ಲಿ ಗೌಡರ ಧರ್ಮಪತ್ನಿಯವರಿಗೆ ತಮ್ಮ ಜಡೆಯನ್ನೇ ತೆಗೆದುಕೊಟ್ಟರು ಅಂದಿನಿಂದ ಆ ಮನೆತನಕ್ಕೆ ಜಡೇಗೌಡ್ರ ಎಂಬ ಹೆಸರು ಬಂದಿತು. ಈ ಕಾರಣಕ್ಕಾಗಿ ಶ್ರೀ ಗವಿಮಠದಲ್ಲಿ ಪೂಜೆಗೊಂಡ ಗವಿಸಿದ್ದೇಶ್ವರ ಮೂರ್ತಿಯನ್ನು ಜಡೇಗೌಡರ ಮನೆಯಲ್ಲಿ ಮೂಹುರ್ತಗೊಳಿಸಿ ಪೂಜಾಧಿಗಳನ್ನು ಸಲ್ಲಿಸಿದ ತರುವಾಯ ಭಾಜಾ-ಭಜಂತ್ರಿಗಳೊಂದಿಗೆ ಪಲ್ಲಕ್ಕಿಯನ್ನು ಕೊಪ್ಪಳದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮುಖಾಂತರ ಶ್ರೀ ಗವಿಮಠಕ್ಕೆ ತರುವದು ಸತ್‌ಸಂಪ್ರದಾಯ. ಜಡೇಗೌಡರ ಮನೆಯಲ್ಲಿಯೇ ಪೂಜಾದಿಗಳನ್ನು ತೀರಿಸಿಕೊಂಡು ಬಂದ ಗವಿಸಿದ್ದೇಶ್ವರನನ್ನು ಪುನಃ ಆ ಮನೆಯಿಂದಲೇ ಆಮಂತ್ರಿಸುವ ಹಾಗೂ ಕರೆತರುವ ಹಿನ್ನಲೆಯು ಇದರಲ್ಲಿ ಅಳವಟ್ಟಿದೆ. ಸಾವಿರಾರು ಭಕ್ತಾಧಿಗಳು ಇದರಲ್ಲಿ ಭಾಗವಹಿಒಸುತ್ತಾರೆ.
ಶ್ರೀಗವಿಸಿದ್ಧೇಶ್ವರ ರಥದ ಕಳಸದ ಮೆರವಣಿಗೆ ಹಾಗೂ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿ.
ಕೊಪ್ಪಳ-23- ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಅಂಗವಾಗಿ ಬನದ ಹುಣ್ಣಿಮೆಯ ದಿನ ನಾಳೆ ದಿನಾಂಕ ೨೪-೦೧ -೨೦೧೬ ರಂದು ರವಿವಾರ ಸಂಜೆ ೬ ಗಂಟೆಗೆ ಹಲಗೇರಿ ಗ್ರಾಮದ ಸದ್ಭಕ್ತರಾದ ಲಿಂ. ಶ್ರೀ ವೀರನಗೌಡರು ಲಿಂಗನಗೌಡ ಪಾಟೀಲ ಮತ್ತು ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಪಾಟೀಲರ ಮನೆಯಿಂದ ಶ್ರೀ ಗವಿಸಿದ್ಧೇಶ್ವರ ರಥದ ಮೇಲಿನ ಕಳಸವು ಭಾಜಾ-ಭಜಂತ್ರಿ, ಭಜನೆ, ಡೊಳ್ಳು-ಕುಣಿತ, ನಂದಿಕೋಲಿನೊಂದಿಗೆ ಸಾವಿರ ಸಾವಿರ ಭಕ್ತರಾದಿಯಾಗಿ ಕೊಪ್ಪಳದ ಶ್ರೀಮಠಕ್ಕೆ ಬರುತ್ತದೆ. ಈ ಮೆರವಣಿಗೆಯಲ್ಲಿ ಹಲಗೇರಿ ಗ್ರಾಮದ ಸದ್ಭಕ್ತರು ಹಾಗೂ ಗೌಡರ ಮನೆತನದವರು ಭಾಗವಹಿಸುತ್ತಾರೆ. ಮಾರ್ಗ ಮಧ್ಯದಲ್ಲಿ ಪಲ್ಲಕ್ಕಿ ಮಹೋತ್ಸವದ ಮೆರವಣಿಗೆಯನ್ನು ಕೂಡಿಕೊಂಡು ಹೊರಟು, ನಂತರ ರಾತ್ರಿ ಹೊತ್ತು ಗವಿಮಠ ತಲುಪವದು. ಪಲ್ಲಕ್ಕಿ ಮಹೋತ್ಸವ ಮತ್ತು ಕಳಸೋತ್ಸವ ಭಕ್ತಿ-ಭಾವಗಳ ಸಮ್ಮಿಲನವಾಗಿರುತ್ತದೆ. ಹಿರಿ-ಕಿರಿಯರೆನ್ನದೇ ಊರ ಬಹುದೊಡ್ಡ ಹಬ್ಬವಾಗಿ, ಆರಾಧ್ಯದೈವ ಶ್ರೀ ಗವಿಸಿದ್ಧೇಶ್ವರನ ಜೈಕಾರದ, ಭಕ್ತಿಪೂರ್ವಕ ಘೋಷಣೆಗಳು ಮುಗಿಲು ಮುಟ್ಟುತ್ತಿರುತ್ತವೆ. ಮಾರ್ಗದ ಎಡ-ಬಲಕ್ಕೂ ದೈವಾರಾಧನೆಗೆ ಸಾಕ್ಷಿಯಾಗಿ ಜನಜಾತ್ರೆಯೇ ನೆರೆದಿರುತ್ತದೆ. ಸದ್ಭಕ್ತರು ಮಹಾರಥೋತ್ಸವದ ಕಳಸ ಹಾಗೂ ಶ್ರೀ ಗವಿಮಠದ ಗೋಪುರಕ್ಕೆ ಏರಿಸಿದ ಐದು ಕಳಸಗಳನ್ನು ನೋಡಿ ಪುಳಕಿತರಾಗುತ್ತಾರೆ. ಇದೇ ದಿವಸ ಸಾಯಂಕಾಲ ಮುದ್ದಾಬಳ್ಳಿಯ ಭೋಜಗೌಡ ಪಾಟೀಲರ ಇವರ ಮನೆಯಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯು ಮೆರವಣಿಗೆಯಿಂದ ಹೊರಟು ಶ್ರೀಗವಿಮಠಕ್ಕೆ ಬರುತ್ತದೆ. ನಂತರ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಪ್ರಸಾದ ಪಡೆದು ತಮ್ಮ ಗ್ರಾಮಕ್ಕೆ ತೆರಳುತ್ತಾರೆ.
ಉದ್ಯೋಗಮೇಳ.
ಕೊಪ್ಪಳ-23- ನಗರದ ಶ್ರೀಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಬೃಹತ್ ಉದ್ಯೋಗಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗಮೇಳದಲ್ಲಿ ಶಾಲೆ ತೊರೆದವರು ಅಲ್ಲದೇ ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಜೆ.ಓ.ಸಿ, ಡಿಪ್ಲೋಮಾ, ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಭಾಗವಹಿಸಬಹುದು. ಉದ್ಯೋಗದ ಆಕಾಂಕ್ಷಿಗಳು ಮೊದಲು ತಮ್ಮ ಹೆಸರನ್ನು ಜಾತ್ರೆ ಆವರಣದಲ್ಲಿ ಪೋಲಿಸ್ ಚೌಕಿಯ ಪಕ್ಕದಲ್ಲಿ ತೆರೆದಿರುವ ನೊಂದಣಿ ಕೇಂದ್ರದಲ್ಲಿ ನೊಂದಾಹಿಸಬೇಕು. ಈಗಾಗಲೇ ಆ ನೊಂದಣಿ ಕಾರ್ಯ ಪ್ರಾರಂಭವಾಗಿದೆ. ಹೆಸರು ನೊಂದಾಯಿಸಿದ ಅಭ್ಯರ್ಥಿಗಳು ಕಡ್ಡಾಯವಾಗಿ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ದಿನಾಂಕ ೩೧-೦೧-೨೦೧೬ ರವಿವಾರ ಬೆಳಿಗ್ಗೆ ೯ ರಿಂದ ಜರುಗಲಿರುವ ಕೌಶಲ್ಯ ತರಬೇತಿಯಲ್ಲಿ ಭಾಗವಹಿಸಬೇಕು. ನಂತರ ದಿನಾಂಕ ೦೬-೦೨-೨೦೧೬ ಮತ್ತು ೦೭-೦೧ -೨೦೧೬ ರಂದು ಜರುಗಲಿರುವ ಬೃಹತ್ ಉದ್ಯೋಗಮೇಳದಲ್ಲಿ ಭಾಗವಹಿಸಬಹುದು. ವಿಶೇಷವೆಂದರೆ ಈ ಉದ್ಯೋಗ ಮೇಳದಲ್ಲಿ ೪೦ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಉದ್ಯೋಗದ ಪತ್ರವನ್ನು ನೀಡಲಾಗುವದು. ಮೊದಲು ಹೆಸರು ನೊಂದಾಯಿಸಿದ ೫೦೦೦ ಉದ್ಯೋಗಾಕಾಂಕ್ಷಿಗಳಿಗೆ ಮಾತ್ರ ಪ್ರವೇಶ ಸೀಮಿತವಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ ೯೮೪೫೦೦೨೨೫೯, ೯೮೮೦೨೬೪೭೫೧ ಸಂಪರ್ಕಿಸಬಹುದೆಂದು ಶ್ರೀಗವಿಮಠದ ತಿಳಿಸಿದೆ.

0 comments:
Post a Comment