PLEASE LOGIN TO KANNADANET.COM FOR REGULAR NEWS-UPDATES


-ಅಮ್ಜದ್ ಪಟೇಲ್
ಕೊಪ್ಪಳ. ಮಹಿಳಾ ಸಬಲೀಕರಣಕ್ಕೆ ವಿಶೇಷವಾಗಿ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ನೂತನ ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಅಭಿಪ್ರಾಯಪಟ್ಟರು.
ಅವರು ಭಾನುವಾರ ಸಂಜೆ ನಗರದ ೩ನೇ ವಾರ್ಡಿನ ನಿರ್ಮಿತಿ ಕಾಲೋನಿಯಲ್ಲಿ ಆಯೋಜಿಸಲಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ವರ್ಷ ೩ನೇ ವಾರ್ಡಿನ ನಿರ್ಮಿತಿ ಕೇಂದ್ರ ಕಾಲೋನಿಯಲ್ಲಿ ಸ್ಥಾಪನೆಯಾದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘಗಳು ಇದೀಗ ಒಂದೇ ವರ್ಷದಲ್ಲಿ ಸುಮಾರು ೧೯ ಸಂಘಗಳನ್ನು ಸ್ಥಾಪಿಸಲಾಗಿದೆ. 
ಮುಖ್ಯವಾಗಿ ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡುವ ಉದ್ದೇಶ
ದಿಂದ ಸ್ಥಾಪನೆಯಾಗಿರುವ ಈ ಸಂಸ್ಥೆಗಳಿಂದ ಮಹಿಳೆಯರು ತಮ್ಮ ಆರ್ಥಿಕ ಅಭಿವೃದ್ಧಿಪಡಿಸಿಕೊಳೂವುದರ ಜೊತೆಗೆ ತಮ್ಮ ಕುಟುಂಬಗಳನ್ನು ಮುನ್ನಡೆಸಲೂ ಸಹ ಸಬಲರಾಗಿರುವುದು ನಮಗೆ ಅತೀವ ಸಂತಷ ತಂದಿದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನ ನಡೆಸುವ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಅತ್ಯವಶ್ಯಕವಾಗಿದ್ದು, ಮಹಿಳೆಯರು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲು ಮುಂದಾಗುವಂತೆ ಕರೆ ನೀಡಿದ ಅವರು ಮುಖ್ಯವಾಗಿ ಮಹಿಳಾ ಸಬಲೀಕರಣಕ್ಕೆ ಸ್ಪಂದಿಸುವ ಇಂತಹ ಸಾಮಾಜಿಕ ಸೇವಾ ಸಂಸ್ಥೆಗಳ ಕಾರ್ಯ ತುಂಬಾ ಶ್ಲ್ಯಾಘನೀಯ ಎಂದು ಪ್ರಶಂಸಿದರು.
ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಸಿದ್ದಪ್ಪ ಹೊಸಮನಿ, ಜಾಫರಸಾಬ ಗೊಂಡಬಾಳ, ಅಕ್ಬರಸಾಬ ಪೊಲೀಸ್‌ಮನಿ, ಶ್ರೀಕಾಂತ ಜಾಧವ್, ಶಾಕೀರ ಹುಸೇನ್, ಜ್ಞಾನ ಪರಿಶೋದಕಿ ಸುಮಾವತಿ, ಸೇವಾ ಪ್ರತಿನಿಧಿ ಗೀತಾ ಜಾಧವ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ಮುಮ್ತಾಜ್ ಶಾಕೀರಹುಸೇನ್, ಲಕ್ಷ್ಮೀ ಕಿನ್ನಾಳ, ಗಾಯತ್ರಿ ಹೊಸಮನಿ, ಖಾದರಬೀ ಮತ್ತಿತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top