PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ ಮಾ-೦೧: ಕ್ಷೇತ್ರದ ಕೋಳೂರು ಗ್ರಾಮದಲ್ಲಿ ಹಿರೇಹಳ್ಳಕ್ಕೆ ಅಂದಾಜು ಮೊತ್ತ ೪೭೦೨ ಆಣೆಕಟ್ಟು ಮತ್ತು ಪಿಕಪ್ ಪ್ರಧಾನ ಕಾಮಗಾರಿಗಳ ಯೋಜನೆಯಡಿ  ೧೯೯. ಮೀ ಉದ್ದ, ೪.೨೫ ಮಿ ಸ್ಲ್ಯಾಬ್ ಅಗಲ, ೩.೦೦ ಮೀ ಎತ್ತರದ ೭೩.೮೧ ಎಂಸಿಎಫ್ ಸಾಮಾರ್ಥ್ಯದ ‘ ೫ ಕೋಟಿಗಳ ವೆಚ್ಚದ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ರವರು ಈ ಬ್ಯಾರೇಜ್‌ನಿಂದ ೨೯೮ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸುತ್ತಾ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರು ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು ಕೊಪ್ಪಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಲು ಹೆಚ್ಚು ಸಹಕಾರಿಯಾಗುತ್ತಿದೆ.                                 ಈಗಾಗಲೇ ‘ ೭.೫೦ ಕೋಟಿ ವೆಚ್ಚದ ಯತ್ನಟ್ಟಿ ಸೇತುವೆ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಹಿರೇಸಿಂಧೋಗಿಯ ‘ ೩.೫೦ ಕೋಟಿ ವೆಚ್ಚದ ಚನ್ನಾಳ ಹಳ್ಳದ ಕಾಮಗಾರಿಯು ತೀವ್ರಗತಿಯಲ್ಲಿ ಕಾರ್ಯಾರಂಭಿಸಿದ್ದು ಬರುವ ದಿನಗಳಲ್ಲಿ ಈ ಕಾಮಗಾರಿಗಳು ಮುಕ್ತಯಾವಾಗಲಿವೆ.  ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಉತ್ತಮ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣವಾಗುತ್ತಿದ್ದು ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಶಾಲಾ ಕೊಠಡಿಗಳನ್ನು ಹಂತಹಂತವಾಗಿ ತೆಗೆದುಕೊಂಡು ಗ್ರಾಮಗಳ ಅಭಿವೃದ್ಧಿ ಮಾಡುವೆನೆಂದು ಹೇಳಿದರು.  ಈ ಸಂಧರ್ಭದಲ್ಲಿ ಮಹಾಂತೇಶ ಮೈನಳ್ಳಿ, ಕೇಶವ ರೆಡ್ಡಿ ಮಾದಿನೂರು, ಬಾಳಪ್ಪ ಬಾರಕೇಶ, ಶಿವಣ್ಣ ಹಂದ್ರಾಳ, ವೆಂಕನಗೌಡ ಹೊರತಟ್ನಾಳ, ದೌಲತ್‌ಸಾಬ್, ನಿಂಗಪ್ಪ ಯತ್ನಟ್ಟಿ ದೇವೇಂದ್ರಪ್ಪ ಬಿಸರಹಳ್ಳಿ ಹಾಗೂ ಸೈಟ್ ಸುಪರ್‌ವೈಸರ್ ಪ್ರಿನ್ಸ್ ಉಪಸ್ಥಿತರಿದ್ದರು.

Advertisement

0 comments:

Post a Comment

 
Top