PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ  : ನಗರದ ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ದಿನಾಂಕ ೨೮/೦೨/೨೦೧೫ ರಂದು ಶನಿವಾರ  ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಇಲ್ಲಿನ ಸಭಾ ಭವನದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಚಾರ್ಯ ಎಸ್.ಎಲ್ ಮಾಲಿಪಾಟೀಲ ನೆರವೇರಿಸಿ ಮೂಲವಿಜ್ಞಾನದ ಮಹತ್ವ ಮತ್ತು ತಂತ್ರಜ್ಞಾನ ಬೆಳವಣಿಗೆಯ ಮಹತ್ವ ತಿಳಿಸುತ್ತಾ ಖ್ಯಾತ ವಿಜ್ಞಾನಿ ಸರ್ ಸಿ.ವಿ ರಾಮನ್ ಅವರ ಎತ್ತರಕ್ಕೆ  ವಿದ್ಯಾರ್ಥಿಗಳು ಏರುವ ಅವಶ್ಯವಿದೆಯೆಂದರು.
              ಇದೇ ಸಮಯದಲ್ಲಿ ಭೌತಶಾಸ್ತ್ರ ಮುಖ್ಯಸ್ಥ ಬಿ.ಡಿ ಕೇಶವನ್ ಇವರಿಂದ  ರಾಮನ್ ಪರಿಮಾಣ ಎಂಬ ವಿಷಯದಡಿ ಉಪನ್ಯಾಸ ಜರುಗಿತು. ರಸಾಯನ ಶಾಸ್ತ್ರ  ವಿಷಯದ ಮುಖ್ಯಸ್ಥರಾದ ಮನೋಹರ ದಾದ್ಮಿ ಇವರಿಂದ ಕೆಮಿಕಲ್ ಮ್ಯಾಜಿಕ್ ಎಂಬ ಆಕರ್ಷಕವಾದ  ವಿಭಿನ್ನ ಪ್ರಯೋಗಗಳನ್ನು ಪ್ರಯೋಗ ತೋರಿಸಿ ನಂತರ ಅದರ ಹಿಂದಿನ ಸತ್ಯಾಸತ್ಯೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ  ವಿನೂತನ ಕಾರ್ಯಕ್ರಮ ಜರುಗಿ ಪ್ರಶಂಸೆಗೆ ಕಾರಣವಾಯಿತು. ನಂತರ ವಿಜ್ಞಾನ ವಿಷಯದಡಿ ಭಾಷಣ ಹಾಗೂ ಕ್ವಿಜ್ ಸ್ಪರ್ಧೆ ಜರುಗಿಸಿ ಬಹುಮಾನ ವಿತರಿಸುವ ಕಾರ್ಯಕ್ರಮ ನಡೆಯಿತು. ಪ್ರೊ.ಕೆ ರಾಘವೇಂದ್ರರಾವ್, ಪ್ರೊ. ಪ್ರತಾಪ್ ಬಾಬುರಾವ್ ಇದ್ದರು. ವಿದ್ಯಾರ್ಥಿನಿ ಶಕುಂತಲಾ ಇವರು ಖ್ಯಾತ ವಿಜ್ಞಾನಿಗಳ ಮಹೋನ್ನತ ಹೇಳಿಕೆಗಳನ್ನು ತಿಳಿಸಿದರು. ನಿರೂಪಣೆ ಸಿ.ಸಾಗರ್, ವಂನಾರ್ಪಣೆ ಓಪ್ರಕಾಶ, ಪ್ರಾರ್ಥನೆ ಸೌಮ್ಯ ಹೂಗಾರ ನೆರವೇರಿಸಿದರು.   

Advertisement

0 comments:

Post a Comment

 
Top