PLEASE LOGIN TO KANNADANET.COM FOR REGULAR NEWS-UPDATES



ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೬೫ ನೇ ಗಣರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೊಪ್ಪಳ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭು ಹೆಬ್ಬಾಳ ಭಾರತದ ಸಂವಿಧಾನದ ಹಿಂದೆ ಅನೇಕ ವರ್ಷಗಳ ಕಠಿಣ ಶ್ರಮವಿದೆ, ನಮ್ಮ ಹಿರಿಯರು ಆಡಳಿತದ ಹಿತಕ್ಕೋಸ್ಕರ ಸಂವಿಧಾನವನ್ನು ಶ್ರಮವಹಿಸಿ ರಚಿಸಿದ್ದಾರೆ. ಸಂವಿಧಾನವು ಕೊಟ್ಟಂತಹ ಮೌಲ್ಯಗಳನ್ನು ದೇಶದ ಅಭಿವೃದ್ಧಿಗಾಗಿ ಸದುಪಯೋಗಪಡಿಸಿಕೊಂಡು, ಮುಂದಿನ ಪೀಳಿಗೆಯ ಜಾಗೃತಿ ದೇಶದ ಮುನ್ನಡೆಗೆ ಸಹಕಾರಿಯಾಗಲಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಿನ್ನಾಳ ಕಲೆಯ ಮೂಲಕ ನಾಡಿನಾದ್ಯತ ಹೆಸರಾಗಿರುವ ಸೋಮಣ್ಣ ಚಿತ್ರಗಾರರವರನ್ನು ಲಯನ್ಸ್ ಕ್ಲಬ್ ಮತ್ತು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ತಮ್ಮ ನುಡಿಗಳಲ್ಲಿ ಅವರು ಕಿನ್ನಾಳ ಕಲೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಣರಾಜ್ಯೋತ್ಸವದ ನಿಮಿತ್ಯ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯ ಮೇಲೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಲಯನ್ ವಿ.ಎಸ್. ಅಗಡಿ, ಕಾರ್ಯದರ್ಶಿ ಲಯನ್ ಬಸವರಾಜ ಬಳ್ಳೊಳ್ಳಿ, ಲಯನ್ ಅಭಯ್ ಕುಮಾರ, ಲಯನ್ ಸುರೇಶ ಸಂಚೇತಿ, ಲಯನ್ ಶ್ರೀನಿವಾಸ ಗುಪ್ತಾ, ಲಯನ್ ಶಾಂತಣ್ಣ ಮುದಗಲ್, ಶಾಲಾ ಪ್ರಾಚಾರ್ಯ ಎ. ಧನಂಜಯನ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ೮ ನೇ ತರಗತಿಯ ಮಕ್ಕಳಿಂದ ’ತಾಯೇ ನಿನ್ನ ಮಡಿಲೇ ನಮಗೆ ಭೂಷಣ’ ಎನ್ನುವ ದೇಶಭಕ್ತಿ ಗೀತೆಯ ಪಿರಮಿಡ್ ನೃತ್ಯ ಎಲ್ಲರ ಗಮನ ಸೆಳೆಯಿತು.
ಕು. ಸುಷ್ಮಾ ಆರಂಭದಲ್ಲಿ ಸ್ವಾಗತಿಸಿದರೆ, ಕು. ರಂಜಿತಾ ಮತ್ತು ಕು. ಅಮೃತಾ ಕಾರ್ಯಕ್ರಮ ನೆರವೇರಿಸಿದರು. ಕೊನೆಯಲ್ಲಿ ಕು. ಶ್ರೀನಿಧಿ ಡಂಬಳ ವಂದಿಸಿದರು.

Advertisement

0 comments:

Post a Comment

 
Top