PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ  ೨೯ : ಪ್ರತಿಯೊಬ್ಬರಿಗೂ ಸ್ವಾವಲಂಬಿ ಜೀವನ ಅಗತ್ಯವಾದುದು. ಆತ್ಮ ವಿಶ್ವಾಸ ಮತ್ತು ಪರಿಶ್ರಮವಿದ್ದರೆ ಏನನ್ನಾದರೂ ಸಾಧಿಸಬಹುದು. ಹೈದರಾಬಾದ್-ಕರ್ನಾಟಕ ಹಿಂದುಳಿದ ಭಾಗವೇನೋ ನಿಜ. ಆದರೆ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಸಮರ್ಪಕವಾಗಿ ಉಪಯೋಗಿಸಿಕೊಂಡರೆ ಕೇವಲ ೧೦ ವರ್ಷಗಳಲ್ಲಿ ಮುಂದುವರಿದ ಭಾಗಗಳಿಗೆ ಸಮನಾಗಿ ನಿಲ್ಲುತ್ತೇವೆ. ವಿವೇಕಾನಂದ ಶಾಲೆಯು ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುತ್ತಿದೆ. ವಿದ್ಯಾರ್ಥಿಗಳು ಸಾಧನೆಗಾಗಿ ಹಾತೊರೆಯಬೇಕು ಎಂದು ಮೌಲ್ಯಯುತವಾದ ಹಕ್ಕಿಯ ಕಥೆಯನ್ನು ಉದಾಹರಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಅವರು ನಿನ್ನೆ ನಡೆದ ಸ್ವಾಮಿ ವಿವೇಕಾನಂದರ ೧೫೦ ನೇ ಜನ್ಮ ದಿನಾಚರಣೆ ಮತ್ತು ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೩೬ ನೇ ಶಾಲಾ ವಾರ್ಷಿಕೋತ್ಸವದ ಸಂಜೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಈ ಮೇಲಿನಂತೆ ನುಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ ಶ್ರೀ ಚೈತನ್ಯಾನಂದ ಸ್ವಾಮೀಜಿ ಮಾತನಾಡುತ್ತ ವಿವೇಕಾನಂದರ ಸದ್ಗುಣ, ವಿಚಾರಗಳನ್ನು ಮಕ್ಕಳು ಜೀವನದಲ್ಲಿ ಅಳವಡಿಸಿಕೊಂಡರೆ, ಯಾವ ಸಾಧನೆಯೂ ಕಷ್ಟವಾಗಲಾರದು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಶಾಲೆಯ ಆರಂಭದ ದಿನದಿಂದ ಇಂದಿನವರೆಗೆ, ಒಂದೂ ದಿನ ಗೈರು ಹಾಜರಾಗದೇ ಇರುವ ೨೦ ವಿದ್ಯಾರ್ಥಿಗಳಿಗೆ ಮತ್ತು ಕಳೆದ ೪ ವರ್ಷಗಳಿಂದ ಸತತವಾಗಿ ಒಂದು ದಿನವೂ ಸಹ ಗೈರುಹಾಜರಾಗದೇ ಇರುವ ಸಮ್ರೀನ್ ಎನ್ನುವ ವಿದ್ಯಾರ್ಥಿನಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಈ ಇಬ್ಬರೂ ಮುಖ್ಯ ಅತಿಥಿಗಳಾದ ಜಿಲ್ಲಾಧಿಕಾರಿಗಳು ಮತ್ತು ಚೈತನ್ಯಾನಂದ ಸ್ವಾಮೀಜಿಯವರನ್ನು ಲಯನ್ಸ್ ಕ್ಲಬ್ ಮತ್ತು ವಿವೇಕಾನಂದ ಶಾಲೆಯ ಪರವಾಗಿ ಲಯನ್ಸ್ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಲಯನ್ ಬಸವರಾಜ ಬಳ್ಳೊಳ್ಳಿ, ಲಯನ್ ಜವಾಹರ್ ಜೈನ್ ಮತ್ತು ಇತರ ಲಯನ್ ಸದಸ್ಯರು ಮತ್ತು ಶಾಲಾ ಪ್ರಾಚಾರ್ಯ ಎ. ಧನಂಜಯನ್, ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಬಿ.ವಿ. ಸರೋಜಾ ಸನ್ಮಾನಿಸಿದರು.
ವೇದಿಕೆಯ ಮೇಲೆ ಲಯನ್ ಅಭಯ್ ಕುಮಾರ ಮೆಹತಾ, ಲಯನ್ ಶಾಂತಣ್ಣ ಮುದಗಲ್, ಲಯನ್ ಮಹೇಶ ಮಿಟ್ಟಲಕೋಡ, ಲಯನ್ ರಾಜೇಂದ್ರ ಜೈನ್, ಲಯನ್ ಚಂದ್ರಕಾಂತ ತಾಲೆಡಾ, ಪ್ರಾಚಾರ್ಯ ಎ. ಧನಂಜಯನ್ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳ ಪರಿಚಯವನ್ನು ಶಿಕ್ಷಕರಾದ ಎಸ್.ಸಿ. ಹಿರೇಮಠ ಮತ್ತು ಚೈತನ್ಯಾನಂದ ಸ್ವಾಮೀಜಿಯವರ ಪರಿಚಯವನ್ನು ರಾಜು ಮಾಯಾಚಾರಿ ನೆರವೇರಿಸಿದರು. ಆರಂಭದಲ್ಲಿ ಕು. ರಾಗಿಣಿ, ಕು. ವಿಭಾ, ಕು. ಭಾಗ್ಯ ಪ್ರಾರ್ಥಿಸಿದರೆ, ಶಾಲಾ ವಿದ್ಯಾರ್ಥಿನಿಯರ ಪ್ರತಿನಿಧಿ ಕು. ಪ್ರಿಯಾ ಪುರಂದರೆ ಸ್ವಾಗತಿಸಿದರು. ಪ್ರಾಚಾರ್ಯರಾದ ಎ. ಧನಂಜಯನ್ ಶಾಲಾ ವಾರ್ಷಿಕ ವರದಿ ವಾಚನ ಮಾಡಿದರು. ಶಾಲಾ ವಿದ್ಯಾರ್ಥಿಗಳ ಪ್ರತಿನಿಧಿ ಕು. ರಾಜ್ ಗಂಗಲ್ ವಂದಿಸಿದರು. ಕು. ನಿವೇದಿತಾ, ಕು. ಗಾಯತ್ರಿ, ಕು. ರಶ್ಮಿ, ಕು. ಸಮ್ರೀನ್ ಮತ್ತು ಕು. ಮದನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಮನ ರಂಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇದಕ್ಕೂ ಮುಂಚಿನ ಮುಂಜಾನೆಯ ಶಾಲಾ ವಾರ್ಷಿಕ ಕ್ರೀಡಾ ದಿನೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಪ್ಪಳ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ವೈ. ಸುದರ್ಶನ್‌ರಾವ್ ಮತ್ತು ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯ ದೈಹಿಕ ಶಿಕ್ಷಕ ಪ್ರಭುಸ್ವಾಮಿ ಹಿರೇಮಠ ಇವರನ್ನು ಸನ್ಮಾನಿಸಲಾಯಿತು. ಶಾಲಾ ವಾರ್ಷಿಕ ಕ್ರೀಡಾ ವರದಿ ವಾಚನವನ್ನು ಶಾಲಾ ದೈಹಿಕ ಶಿಕ್ಷಕರಾದ ಡಿ.ಎಚ್. ಕುರಿ, ಅತಿಥಿಗಳ ಪರಿಚಯವನ್ನು ಇನ್ನೋರ್ವ ದೈಹಿಕ ಶಿಕ್ಷಕ ಟಿ.ಆರ್. ಬೆಲ್ಲದ್ ಮತ್ತು ಮಾರುತಿ ಚಾಮಲಾಪುರ ನೆರವೇರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ೪೦೦ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Advertisement

0 comments:

Post a Comment

 
Top