- ಡಾ. ಲಿಂಗಣ್ಣ ಜಂಗಮರ ಹಳ್ಳಿ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಹಾತ್ಮಗಾಂ ಜಯಂತಿ ಪ್ರಯುಕ್ತ ‘ಸ್ವಚ್ಛ ಭಾರತ ಅಭಿಯಾನ’ದ ಆಂದೋಲನ ಮಾಡಿ ದೇಶದ ತುಂಬಾ ಗುಲ್ಲೆಬ್ಬಿಸಿದ್ದಾರೆ. ಅದಕ್ಕೆ ಸಮಾಜದಲ್ಲಿ ಪ್ರತಿ ಸ್ಪಂದನೆಯೂ ಕೂಡ ಜಗತ್ತಿನ ಅದ್ಭುತ ಸಾಧನೆ ಎಂಬಂತೆ ಬಿತ್ತಲಾಗುತ್ತದೆ. ಇಂತಹ ಈ ಹೊತ್ತಲ್ಲಿ ಕೆಲವೊಂದು ಸತ್ಯ ಸಂಗತಿಗಳು ಹಾಗೂ ಬಹುಸಂಖ್ಯಾತರ ಒಡಳಾಲದ ಉರಿಯನ್ನು ಅರ್ಥ ಮಾಡಿಕೊಳ್ಳುವುದೂ ಇಂದಿನ ಆವಶ್ಯಕತೆಯಾಗಿದೆ. ಅಂದರೆ ಈ ಸ್ವಚ್ಛ ಭಾರತದ ಕಲ್ಪನೆಯ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳುವುದು ಸಮಕಾಲೀನ ಅಗತ್ಯವಾಗಿದೆ.
ಮೂಲತಃ ಸ್ವಚ್ಛತೆ ಎನ್ನುವಂತದ್ದೇ ಒಂದು ಸಾಪೇಕ್ಷವಾದ ತಿಳುವಳಿಕೆ. ಅದು ವ್ಯಕ್ತಿಯ ಗ್ರಹಿಕೆಯನ್ನಾಧರಿಸಿ ಬೇರೆ ಬೇರೆ ಅರ್ಥವನ್ನು ಪಡೆದು ಕೊಳ್ಳುತ್ತಿರುತ್ತದೆ. ಕೆಲವರಿಗೆ ಅರಣ್ಯ ನಾಶಮಾಡುವುದು ಸ್ವಚ್ಛತೆಯಾದರೆ, ಇನ್ನು ಹಲವರಿಗೆ ವಿಭೂತಿಗಂಧ ಹಚ್ಚಿಕೊಳ್ಳುವುದು ಸ್ವಚ್ಛತೆಯಾಗುತ್ತದೆ. ಇನ್ನೂ ಕೆಲವರಿಗೆ ಭೂಮಿ ಹಸನೂ ಮಾಡಿ ಬೆಳೆಯುವುದು ಸ್ವಚ್ಛತೆ, ಆದರೆ ಕೆಲವರಿಗೆ ಅದೇ ಕಸವಾಗಿ ಕಾಣುತ್ತಿರುತ್ತದೆ. ಚಮ್ಮಾರನಿಗೆ ಚೆನ್ನಾಗಿ ಚಪ್ಪಲಿಯನ್ನು ಹೊಲೆದು ಧಣಿಗಳಿಗೆ ಕೊಡುವುದು ಸ್ವಚ್ಛತೆಯಾದರೆ, ಆ ಧಣಿಗಳಿಗೆ ಚಮ್ಮಾರನ ದೇಹವೇ ಕಸವಾಗಿ ಕಾಣುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಮೋದಿ ಮಾಡಿರುವ ಅಭಿಯಾನದ ಮೋಡಿ ಯಾವ ದೃಷ್ಟಿಯಿಂದಲೂ ಸ್ವಚ್ಛತಾ ಅಭಿಯಾನವಾಗಲಾರದು. ಏಕೆಂದರೆ ಮೋದಿ ಮತ್ತು ಮೋದಿ ರೋಗ ಪೀಡಿತ ಜನರು ಮಾಡುತ್ತಿರುವ ಸ್ವಚ್ಛತೆ ಅಭಿಯಾನವನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ಅದು ಕೇವಲ ಅಭಿ(ಯಾ) ನಯವೆಂದು ಅತ್ಯಂತ ಸುಲಭವಾಗಿ ಅರ್ಥವಾಗುತ್ತದೆ.ಆರಂಭದಲ್ಲಿ ಅಭಿನಯಕ್ಕೆ ಚಾಲನೆ ಕೊಡುವಾಗ ಮೋದಿಯವರು ಈಗಾಗಲೇ ಸ್ವಚ್ಛಗೊಳಿಸಿರುವ ಸಂಸತ್ ಭವನದ ಮುಂಭಾಗಕ್ಕೆ ಬೇರೆ ಕಡೆಯಿಂದ ಕಸ ತರಿಸಿಕೊಂಡು ಚೆಲ್ಲಿಸಿ ಅದನ್ನು ಗುಡಿಸುವ, ಸ್ವಚ್ಛಗೊಳಿಸುವ ನಾಟಕ ಮಾಡುತ್ತಾರೆ. ಇಂತಹ ಮೋದಿ ಪ್ರದರ್ಶನದ ನಾಟಕದ ರೋಗ ಇಡೀ ಭಾರತಕ್ಕೆ ಹಬ್ಬಿರುವುದು ವಿಪರ್ಯಾಸದ ಸಂಗತಿ. ಮೋದಿಯವರು ದೇಶ ಬಾಂಧವರಿಗೆ ಕರೆ ಕೊಡುತ್ತಾ ‘‘ದೇಶದ ಎಲ್ಲಾ ಪ್ರಜೆಗಳು ವರ್ಷದಲ್ಲಿ ನೂರು ಗಂಟೆ ಸ್ವಚ್ಛತೆಗೆ ಮೀಸಲಿರಿಸಿ’’ ಎಂಬ ಮಾತನ್ನು ಒತ್ತಿ ಹೇಳುತ್ತಾರೆ. ಅದರ ಹಿಂದಿನ ಅರ್ಥವೇನು? ಉಳಿದಂತೆ ಸಾವಿರಾರು ಗಂಟೆಗಳಲ್ಲಿ ಕಸ ಮಾಡುವ ಕೆಲಸ ಮಾಡಬೇಕೆಂಬುದೇ? ಈ ದೇಶದ ಮೇಲ್ವರ್ಗದ ಜನ ಇಲ್ಲಿಯವರೆಗೂ ಜೀವನದಲ್ಲಿ ಒಂದು ಗಂಟೆಯನ್ನು ಸ್ವಚ್ಛಗೊಳಿಸುವುದಕ್ಕೆ ಬಳಸಿಕೊಂಡಿಲ್ಲ ಎನ್ನುವ ಅರ್ಥಗಳಿರಬಹುದೇ? ಇದ್ದರೂ ಇರಬಹುದು. ಇದೆಲ್ಲವನ್ನು ಗ್ರಹಿಸಿದರೆ ಸ್ವಚ್ಛವಾಗಿರುವ ಭಾರತವನ್ನು ಕೆಡಿಸಿ ಇನ್ನಷ್ಟೂ ಕಸ ಮಾಡುವ ಜಾತ್ರೆಯ ಮತ್ತೊಂದು ರೂಪವಾಗಿ ಕಾಣುತ್ತದೆ. ಅಂದರೆ ಈ ದೇಶದ ಎಲ್ಲ ಸಂಪತ್ತನ್ನು, ಅಕಾರ, ಅಂತಸ್ತು, ಸ್ಥಾನಮಾನಗಳೆಲ್ಲವನ್ನು ಅನುಭವಿಸಿ ದೇಶವನ್ನು ಕೆಡಿಸಿ ಕಸ ಮಾಡಿರುವವರು ಯಾವ ಸಂಸ್ಕೃತಿಯ ಪ್ರತಿಪಾದಕರೆಂಬುವುದು ದೇಶದ ಜನತೆಗೆ ತಿಳಿದೇ ಇದೆ. ಸ್ವಚ್ಛಭಾರತ ಅಭಿಯಾನದಲ್ಲಿ ಇಲ್ಲಿಯವರೆಗೂ ಪೊರಕೆ ಯನ್ನು ಅಪಶಕುನ ಎಂದು ಭಾವಿಸಿದ್ದ ಜನರು ಪತ್ರಿಕೆಗಳಿಗೆ, ದೃಶ್ಯಮಾಧ್ಯಮಗಳಿಗೆ, ಪೋಸ್ ಕೊಟ್ಟು ಹಲ್ಲು ಕಿರಿದು ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕೋಸ್ಕರ ಮಾಡುತ್ತಿರುವ ಹಗಲು ನಾಟಕದ ಅಭಿನಯವನ್ನು ಅಭಿಯಾನ ಎಂದು ಪ್ರಚುರಪಡಿಸಲಾಗುತ್ತದೆ.. ಏಕೆಂದರೆ ಸ್ವಚ್ಛಂಧ ಗ್ರಾಮೀಣ ಸಂಸ್ಕೃತಿಯನ್ನು ನಾಶ ಮಾಡಿ ನಾಗರಿಕರಣವನ್ನು ಮಾಡುತ್ತಿರುವವರು ಯಾರು? ನಗರಗಳಲ್ಲಿ ಸೃಷ್ಟಿಯಾಗಿರುವ ಕಸದ ಬೆಟ್ಟಗಳ ನಿರ್ಮಾಣಕ್ಕೆ ಕಾರಣ ಯಾರು? ಹೆಚ್ಚು ಹೆಚ್ಚು ನಗರಗಳ ವಾರಸುದಾರಿಕೆ ಯಾರ ಕೈಯಲ್ಲಿದೆಯೋ ಅವರೇ ಅದರ ಎಲ್ಲಾ ಹೊಣೆಯನ್ನು ಹೊರಬೇಕಾಗುತ್ತದೆ.
ಅಂದರೆ ನೂರಾರು ಶತಮಾನಗಳಿಂದ ಅದೇ ಪೊರಕೆಯನ್ನು ತಮ್ಮ ಮನೆಯ ದೇವರಾಗಿಸಿ ಸದಾ ಕಾಲ ಹಿಡಿದು ಸ್ವಚ್ಛ ಗೊಳಿಸಿದವರು ಈಗಲೂ ಕಸ ಗುಡಿಸಿ ಸ್ವಚ್ಛಗೊಳಿಸುತ್ತಿರುವವರು ತುಳಿತಕ್ಕೊಳಗಾಗಿ ಅಪಮಾನವನ್ನು ಅನುಭವಿಸುತ್ತಿರುವವರು ಯಾರೆಂಬುದನ್ನು ಈ ಸಮಾಜ ಇಲ್ಲಿಯವರೆಗೂ ಅರ್ಥ ಮಾಡಿಕೊಂಡಂತಿಲ್ಲ. ಶೇಕಡಾ 100ರಷ್ಟು ಕಸ ತೊಳೆಯುತ್ತಿರುವವರು ಈ ದೇಶದ ದಲಿತ ಸಮುದಾಯ ಎಂಬುದು ಇಲ್ಲಿಯವರೆಗೂ ಯಾರ ಹೃದಯಕ್ಕೂ ತಿಳಿದಂತೆ ಕಾಣುತ್ತಿಲ್ಲ. ಆದ್ದರಿಂದ ಮೋದಿ ಮತ್ತು ಮೋದಿ ಪೀಡಿತ ಜನರು ಇತ್ತೀಚೆಗೆ ಮಾಡುತ್ತಿರುವ ಸ್ವಚ್ಛತಾ ಅಭಿಯಾನವೆಂಬ ಹಗಲು ನಾಟಕದ ಬಗ್ಗೆ ಅನುಮಾನ ಹುಟ್ಟದೆ ಇರಲಾರದು.
ಇನ್ನೊಂದು ಮುಖ್ಯ ಸಂಗತಿ ಎಂದರೆ ಸಮಾಜದ ಎಲ್ಲ ಸಂಪತ್ತನ್ನು ತಮ್ಮ ವಶದಲ್ಲಿ ಇರಿಸಿಕೊಂಡು ಅನುಭವಿಸುತ್ತಿರುವ ಸೋಮಾರಿ ಜನರು ಶತಮಾನಗಳಿಂದ ಮಾಡಿರುವಂತಹ ಬೌದ್ಧಿಕ ಕಸವನ್ನು ತಮ್ಮ ಬೆವರಿನ ಹೊಳೆ ಹರಸಿ ಸ್ವಚ್ಛಗೊಳಿಸಿರುವ ಶೋಷಿತರು ಯಾವುದೇ ಪತ್ರಿಕೆಗಳಿಗೆ, ಮಾಧ್ಯಮಗಳ ಕಣ್ಣಿಗೆ ಕಾಣುವುದಿಲ್ಲವೇ? ಏಕೆಂದರೆ ಮಾಧ್ಯಮದವರ ಜಾತಿ ಕಣ್ಣು ಕೂಡ ಕಸವಾಗಿದೆ. ಕಸಮಾಡು ವುದೆ ನಾಗರಿಕತೆ ಎಂದು ಭಾವಿಸಿ ಕಸ ತೊಳೆಯುವ ದಲಿತರನ್ನು ಅನಾಗರಿಕರೆಂದು ದೂರವಿರಿಸಿರುವ ರೀತಿ ತಮ್ಮ ಮೆದುಳೆ ಕಸವಾಗಿರುವುದರ ಪ್ರತೀಕವಾಗಿರುತ್ತದೆ.
ಈ ದೇಶದ ಮೂಲಭೂತವಾದಿ ಜನರು ಮಾಡಿರುವ ಶತಶತಮಾನಗಳ ಕಸವನ್ನು ತೊಳೆಯುವುದರಲ್ಲಿಯೇ ತಮ್ಮ ಇಡೀ ಜೀವನವನ್ನು ಸವೆಸಿ ಕಸದಲ್ಲಿ ಕಸವಾಗಿ ದೇಶವನ್ನು ಸ್ವಚ್ಛಗೊಳಿಸಿರುವ ಯಶೋಗಾಥೆ ಮಾಧ್ಯಮಗಳ ಕಣ್ಣು ತೆರೆಸಿಲ್ಲವೇ? ಇದು ಕೂಡ ಮಾಧ್ಯಮದ ಕ್ಯಾಮೆರಾ ಕಣ್ಣೂ ಜಾತಿ ಕಸದಲ್ಲಿ ಮುಚ್ಚಿಹೋಗಿರುವುದರ ಪರಿಣಾಮ.
ಇಷ್ಟಕ್ಕೂ ಸ್ವಚ್ಛತಾ ಅಭಿಯಾನ ಆರಂಭಿಸಿದ ಮೇಲ್ನೋಟದ ಉದ್ದೇಶ ಅಪ್ರತಿಮ ದೇಶ ಭಕ್ತ, ಸ್ವಾತಂತ್ರ ಸೇನಾನಿ ರಾಷ್ಟ್ರಪಿತ ಗಾಂೀಜಿಯವರ ಜನ್ಮ ದಿನದ ನೆನಪಿಗಾಗಿ ಎಂದು ಹೇಳುವ ಆತ್ಮವಂಚನೆಯ ಜನ ಗಾಂ ಜೀವನದ ಹೋರಾಟದ ದಾರಿಗಳನ್ನಾದರೂ ಅರ್ಥಮಾಡಿಕೊಂಡಿದ್ದಾರೆಯೇ ಖಂಡಿತಾ ಆ ದಾರಿಯ ಪರಿಚಯವೇ ಇರಲಾರದೇನೋ! ಗ್ರಾಮ ಭಾರತದ ಅಭಿವೃದ್ಧಿಯೇ ದೇಶದ ಸಮಗ್ರ ಅಭಿವೃದ್ಧಿ ಎಂದು ನಂಬಿದ್ದ ಗಾಂೀಜಿಯ ನೆನಪಿಗಾಗಿ ಆರಂಭಿಸಿದ ಇವರು ಮಹಾನಗರಗಳಿಗೆ, ನಗರೀಕರಣಕ್ಕೆ ಯಾಕೆ ಪ್ರಾಧಾನ್ಯತೆ ಕೊಡುತ್ತಾರೆ? ಎಂಬುದು ಅರ್ಥವಾಗುತ್ತಿಲ್ಲ. ಗುಡಿಕೈಗಾರಿಕೆಗಳಿಗೆ ಒತ್ತುಕೊಟ್ಟು ಬಹುಜನರ ಅಭಿವೃದ್ಧಿಯನ್ನು ಬಯಸಿದ ಗಾಂ ತತ್ವಕ್ಕೆ ಮಸಿ ಬಳಿದು ವಿದೇಶಿ ಮೂಲದ ಬಹು ರಾಷ್ಟ್ರೀಯ ಕಂಪೆನಿಗಳಿಗೆ ರತ್ನಗಂಬಳಿ ಹಾಸುವುದರ ಮೂಲಕ ದೇಶವನ್ನು ಕಂಪೆನಿಗಳಿಗೆ ಒತ್ತೆ ಇಡುವ ನೀತಿ ಗಾಂಗೆ ಕೊಡುವ ಮಾರ್ಯಾ ದೆಯೇ? ಇವರು ದೇಶೀಯ ಮಂತ್ರವನ್ನು ಪಠಿಸುತ್ತಾ ಅಂತರ್ಯದಲ್ಲಿ ಹಣ ಕೇಂದ್ರಿತ ಅಭಿವೃದ್ಧಿಯನ್ನು ಜಪ ಮಾಡುತ್ತಿರುವ ಇವರ ಮೆದುಳಿನ ಕಸ ತೊಳೆಯುವವರು ಯಾರು? ಬಹುತ್ವದ ಏಳ್ಗೆಯಲ್ಲಿಯೇ ಸಾಮರಸ್ಯವನ್ನು ಸಾಸಿ ಬೋಸಿದ ಗಾಂಯ ಮಾನವೀ ಯತೆಯನ್ನು ಕೊಂದು ಸಂಘಃರ್ಷವನ್ನು ಬಿತ್ತಿ ಏಕ ಸಂಸ್ಕೃತಿಯನ್ನು ಒತ್ತಾಯ ಪೂರ್ವಕವಾಗಿ ಹೇರಲು ಹೊರಟಿರುವ ಷಡ್ಯಂತ್ರದ ಕಸವನ್ನು ಸ್ವಚ್ಛಗೊಳಿಸುವವರು ಯಾರು?
ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಗಾಂಗೆ ಜನ್ಮದಿನದ ನೆಪದಲ್ಲಿ ಮಾಡ ಬೇಕಾಗಿರುವ ಗೌರವಕ್ಕಿಂತ ಜಡ ಆಲೋಚನೆ ಗಳಿಂದ ಅಪಮಾನವನ್ನು ಮಾಡುವ ತಂತ್ರಗಾರಿಕೆಯಿದೆಯೆಂಬಂತೆ ಕಾಣುತ್ತದೆ. ಮಹಾತ್ಮಗಾಂಯನ್ನು ಬದುಕಲು ಬಿಡದೆ ಅವರ ಗುಂಡಿಗೆಗೆ ಗುಂಡಿಕ್ಕಿ ಕೊಂದ ದೇಶಭಕ್ತರೆಂಬ ದೇಶಭ್ರಷ್ಟರು ಗಾಂ ಇಲ್ಲದ ಈ ಶತಮಾನದಲ್ಲಿ ಅವರ ನಿಜತ್ವಗಳನ್ನು ಕೊಲ್ಲುವುದಕ್ಕೆ ಪ್ರಯತ್ನ ಮಾಡುತ್ತಿರುವಂತೆ ಕಾಣುತ್ತದೆ.
ಕಸದಲ್ಲಿ ಎರಡು ಮಾದರಿಗಳಿವೆ ಈ ದೇಶದ ನೆಲ, ಜಲ, ಗಾಳಿ, ಸಂಪತ್ತುಗಳನ್ನು ತಮ್ಮ ಆೀನದಲ್ಲಿರಿಸಿ ಕೊಂಡು ಎಡಬಿಡದೆ ಅನುಭವಿಸಿ ಮಾಡಿರುವ ಭೌತಿಕ ಕಸ ಒಂದು ಮಾದರಿ ಯಾದರೆ, ಈ ನೆಲದ ಮೂಲ ನಿವಾಸಿ ದ್ರಾವಿಡ ಮೂಲದ ಆದಿ ಜನರನ್ನು ಜಾತಿ, ದೇವರು, ಧರ್ಮ, ಕರ್ಮಗಳೆಂಬ ಸುಳ್ಳುಗಳಿಂದ ಬಿಂಬಿಸಿ ಶೋಷಣೆ ಮಾಡುತ್ತಿರುವುದು ಇನ್ನೊಂದು ಮಾದರಿಯ ಕಸ. ಎರಡು ಬಗೆಯ ಕಸವೂ ವಿಶ್ವದೆದುರು ಭಾರತವನ್ನು ತಲೆತಗ್ಗಿಸುವಂತೆ ಮಾಡಿದೆ. ಜಾತಿ ಕಸ ಮಾಡಿರುವ ಇನ್ನೂ ಮಾಡುತ್ತಿರುವ ಅನಾಹುತಗಳು ಮಾನಹಾನಿ, ಜೀವಹಾನಿಯನ್ನು ಇನ್ಯಾವ ವಿಶ್ವಯುದ್ಧಗಳೂ ಮಾಡಿರಲಾರೆವು. ಪ್ರಜಾತಂತ್ರ ಭಾರತದ ನೆತ್ತಿಯ ಮೇಲೆ ಜಾತಿ ಕಸ ಕೊಳೆತು ನಾರುತ್ತಿದೆ. ಇಂತಹ ವಿಶ್ವವೇ ಅಸಹ್ಯಪಟ್ಟುಕೊಳ್ಳುವ, ದೇಶವೇ ನಾಚಬೇಕಾಗಿರುವ ಜಾತಿಯ ಕಸವನ್ನು ತೊಳೆದು ದೇಶ ರಕ್ಷಣೆಗೆ ಗುಡಿಸಿ ಸ್ವಚ್ಛಗೊಳಿಸಿ ಜಾತಿ ಅಂಟುರೋಗದಿಂದ ಪಾರು ಮಾಡಬೇಕಾಗಿದೆ.
ಈ ಎಲ್ಲಾ ಬಗೆಯ ಕಸವನ್ನು ಈಗಾಗಲೇ ಮಾಡಿರುವವರೆ, ಈಗಲೂ ಮಾಡುತ್ತಿರು ವವರೇ ಇಂದು ಕೂಡ ೆಟೋಗಾಗಿ ಪೋಸ್ ಕೊಡುವ ಹುಚ್ಚಿನ ಮೋಜಿಗಾಗಿ ಪೊರಕೆ ಹಿಡಿದು ಮಾಧ್ಯಮಗಳ ಮುಂದೆ ನಿಲ್ಲುತ್ತಿರುವುದನ್ನು ಪ್ರಜ್ಞಾವಂತರಾದವರು ಯಾರದರೂ ನೋಡಿದಾದರೆ ಅದೇ ಪೊರಕೆಯನ್ನು ಕಿತ್ತುಕೊಂಡು ಅಟ್ಟಾಡಿಸಿಕೊಂಡು ಹೊಡೆಯಬೇಕೆನಿಸುತ್ತದೆ. ಯಾಕೆಂದರೆ ಅದೇ ತೊಳೆಯುವ ಕೆಲಸವನ್ನು ಅನಾದಿ ಕಾಲದಿಂದ ಮಾಡುತ್ತಿರುವ ಜನರು ಕಸವಾಗಿ ಬದುಕುತ್ತಿದ್ದಾರೆ. ಅವರ ಜೀವನವನ್ನು ಉದ್ಧರಿಸುವ ಕನಿಷ್ಠ ಕಾಳಜಿ ಇಲ್ಲದೆ ಸ್ವಚ್ಛ ಭಾರತ ಕಟ್ಟುವ ಪ್ರಯತ್ನ ಅವರ ಮೆದುಳು ಕಸವಾಗಿರುವುದರ ಪ್ರತೀಕ ಅಲ್ಲದೇ ದೇವಾಸ್ಥಾನಗಳಿಗೆ ಇಂದು ಕೂಡ ದಲಿತರಿಗೆ ಪ್ರವೇಶ ಕೊಡದೆ ಮತಾಂಧರಾಗಿರುವವರು, ಪಾಪಪ್ರಜ್ಞೆಯಿಲ್ಲದೆ ದೇಶಭಕ್ತಿಯ ಮಂತ್ರವನ್ನು ಜಪಿಸುತ್ತಿದ್ದಾರೆ. ಜಾತಿ ವ್ಯವಸ್ಥೆಯನ್ನು ಜಟಲೀಕರಿತ್ತಿರುವುದು, ಶ್ರೀಮಂತ- ಬಡವರ ನಡುವಿನ ಅಂತರ ಹೆಚ್ಚುಮಾಡುತ್ತಿರವವರು, ಮತಾಂಧತೆಯನ್ನು ಬಿತ್ತುತ್ತಿರುವವರು, ಕೋಮು ಸಂಘರ್ಷಕ್ಕೆ ಪ್ರೋತ್ಸಾಹ ಮಾಡುತ್ತಿರುವವರು, ಮಹಿಳಾ ಶೋಷಣೆ ಮಾಡುವಂತಹ ಬೌದ್ಧಿಕ ಕಸವನ್ನು ಗುಡಿಸಬೇಕಾಗಿದೆ. ಅದನ್ನು ಬಿಟ್ಟು ಕೇವಲ ೆಟೋಕ್ಕಾಗಿ ಪೋಸು ಕೊಟ್ಟು ಕಸ ಗುಡಿಸುವ ಇನ್ನಷ್ಟು ಕಸ ಸೇರಿಸಿ ಕಸ+ ಕಸ ಸೇರಿ ಇಡೀ ದೇಶವೇ ಕಕ್ಕಸ ಆಗುವ ಸಂಭವವೇ ಹೆಚ್ಚು. ಇದು ತುಂಬಾ ಅಪಾಯಕಾರಿಯಾಗಿರುವ ಸಂಗತಿ. ಇನ್ನಾದರೂ ಇಂತಹ ಜನ ನೇತ್ಯಾತ್ಮಕ ದೇಶ ಕಟ್ಟುವ ಕೆಲಸಗಳಲ್ಲಿ ತೊಡಗಿಸಿಕೊಂಡರೆ ದೇಶದ ಭವಿಷ್ಯ ಸ್ವಚ್ಛಗೊಳ್ಳುವುದರ ಮೂಲಕ ಒಳ್ಳೆಯ ದಾರಿಯಲ್ಲಿ ಸಾಗಬಹುದು.
0 comments:
Post a Comment