PLEASE LOGIN TO KANNADANET.COM FOR REGULAR NEWS-UPDATES


ಮುಂಬೈ,   ಲೋಕಪಾಲಕ್ಕಾಗಿ ಆಗ್ರಹಿಸಿ ಹೊಸದಾಗಿ ಆಂದೋಲನ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಇಂದು ಹೇಳಿದ್ದಾರೆ. ಅದೇ ವೇಳೆ, ವಿದೇಶಗಳಲ್ಲಿ ಶೇಖರಿಸಿಡಲಾಗಿರುವ ಕಪ್ಪು ಹಣವನ್ನು ಮರಳಿ ದೇಶಕ್ಕೆ ತರುವಲ್ಲಿ ನರೇಂದ್ರ ಮೋದಿ ಸರಕಾರದ ವೈಲ್ಯವನ್ನು ಅವರು ಟೀಕಿಸಿದ್ದಾರೆ. ತಮ್ಮನ್ನು ವಂಚಿಸಿದ ಸರಕಾರಕ್ಕೆ ಜನರು ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.
‘‘ಲೋಕಪಾಲ ಕಾಯ್ದೆಗೆ ರಾಷ್ಟ್ರಪತಿ ಸಹಿ ಹಾಕಿ 365 ದಿನಗಳು ಕಳೆದರೂ ಮೋದಿ ಸರಕಾರ ಅದನ್ನು ಇನ್ನೂ ಜಾರಿಗೆ ತಂದಿಲ್ಲ. ಜನರಿಗೆ ನೀಡಿದ ಆಶ್ವಾಸನೆಗಳನ್ನು ಮೋದಿ ಸರಕಾರ ಈಡೇರಿಸಿಲ್ಲ’’ ಎಂದು ಮಹಾರಾಷ್ಟ್ರದ ಅಹ್ಮದ್‌ನಗರ್ ಜಿಲ್ಲೆಯ ತನ್ನ ಊರು ರಾಲೆಗಣ್ ಸಿದ್ಧಿಯಲ್ಲಿ ಗುರುವಾರ ಸಂಜೆ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದರು.
‘‘ಭ್ರಷ್ಟಾಚಾರದ ವಿಷಯದಲ್ಲಿ ಸರಕಾರ ಗಂಭೀರವಾಗಿಲ್ಲ.
ಹಾಗಾಗಿಯೇ ಲೋಕಪಾಲ, ಭೂಸ್ವಾೀನ ಕಾಯ್ದೆ ಮತ್ತು ಕಪ್ಪು ಹಣದ ವಿಷಯದಲ್ಲಿ ಮತ್ತೊಮ್ಮೆ ಚಳವಳಿ ನಡೆಸಲಾಗುವುದು’’ ಎಂದು ಹಝಾರೆ ನುಡಿದರು.
‘‘ಬಿಜೆಪಿ ಅಕಾರಕ್ಕೆ ಬಂದರೆ 100 ದಿನಗಳಲ್ಲಿ ಕಪ್ಪು ಹಣವನ್ನು ಮರಳಿ ತರಲಾಗುವುದು ಹಾಗೂ ಪ್ರತಿ ನಾಗರಿಕನ ಹೆಸರಿನಲ್ಲಿ ತಲಾ 15 ಲಕ್ಷ ರೂ. ಮೊತ್ತವನ್ನು ಠೇವಣಿ ಇಡಲಾಗುವುದು ಎಂಬುದಾಗಿ ಲೋಕಸಭಾ ಚುನಾವಣೆಯ ವೇಳೆ ಜನರಿಗೆ ಭರವಸೆ ನೀಡಲಾಗಿತ್ತು. ಆದರೆ, ಈಗ ನೋಡಿದರೆ, 15 ರೂ.ಯೂ ಬಂದಿಲ್ಲ’’ ಎಂದರು.
 ‘‘ತಮ್ಮನ್ನು ವಂಚಿಸಿರುವುದು ಜನರ ಗಮನಕ್ಕೆ ಬಂದಿದೆ. ಈಗ ಅವರು ಕಾಂಗ್ರೆಸ್‌ಗೆ ಕಲಿಸಿದ ರೀತಿಯಲ್ಲೇ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೂ ಪಾಠ ಕಲಿಸಲಿದ್ದಾರೆ. ಭ್ರಷ್ಟಾಚಾರದ ವಿರುದ್ಧ 2011ರಲ್ಲಿ ನಡೆದ ಚಳವಳಿಯ ಬಳಿಕ ಜನತೆ ಎಚ್ಚೆತ್ತಿದ್ದಾರೆ’’ ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಅಭಿಪ್ರಾಯಪಟ್ಟರು.
 ಅದೇ ವೇಳೆ, ಭ್ರಷ್ಟಾಚಾರ ವಿರೋ ಹೋರಾಟದಲ್ಲಿ ತನ್ನ ಅನುಯಾಯಿಗಳಾಗಿದ್ದ ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಮತ್ತು ಬಿಜೆಪಿಯ ಕಿರಣ್ ಬೇಡಿ ನಡುವಿನ ರಾಜಕೀಯ ಜಿದ್ದಿನ ಬಗ್ಗೆ ಯಾವುದೇ ಹೇಳಿಕೆ ನೀಡಲು 77 ವರ್ಷ ವಯಸ್ಸಿನ ಹೋರಾಟಗಾರ ನಿರಾಕರಿಸಿದರು. ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕೇಜ್ರಿವಾಲ್ ಮತ್ತು ಬೇಡಿ ತಮ್ಮ ತಮ್ಮ ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿದ್ದಾರೆ. ‘‘ನಾನು ಈ ವಿಷಯಗಳ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ಇತರ ವಿಷಯಗಳ ಬಗ್ಗೆ ಕೇಳಿ, ದೇಶದ ಬಗ್ಗೆ ಕೇಳಿ. ಒಬ್ಬ ಅರವಿಂದ್ ಅಥವಾ ಒಬ್ಬ ಕಿರಣ್ ಮುಖ್ಯವಲ್ಲ’’ ಎಂದಷ್ಟೇ ಹೇಳಿದರು.

Advertisement

0 comments:

Post a Comment

 
Top