PLEASE LOGIN TO KANNADANET.COM FOR REGULAR NEWS-UPDATES


ಮುಸ್ಲಿಂ ಶಾದಿಮಹಲ್ ಚುನಾವಣೆ ರದ್ದತಿ ವಿಷಯದಲ್ಲಿ  ಶಾಸಕರ ಹೆಸರು ದುರ್ಬಳಕೆಗೆ ಅಕ್ಬರ ಪಾಷಾ ಪಲ್ಟನ ಸೇರಿ ಹಲವರಿಂದ ತೀವ್ರ ಖಂಡನೆ 

ಕೊಪ್ಪಳ-೧೫, ಮುಸ್ಲಿಂ ಸಮಾಜದ ಮುಖಂಡನೆಂದು ಹೇಳಿಕೊಂಡು ಪೀರಾಸಾಬ ಬೆಳಗಟ್ಟಿ ಸೇರಿದಂತೆ ಕೆಲ ಅವರ ಸಂಗಡಿಗರು ಸೇರಿಕೊಂಡು ಪತ್ರಿಕೆ ಹೇಳಿಕೆ ನೀಡಿ ವಿನಾಃ ಕಾರಣ ಕೊಪ್ಪಳದ ಶಾಸಕರ ಹೆಸರಗೆ ಕಪ್ಪು ಚುಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಯಾವೊಬ್ಬ ಕಾಂಗ್ರೇಸ್ ಕಾರ್ಯಕರ್ತನಾಗಲಿ ಶಾಸಕರಾಗಲಿ ಯಾರೊಬ್ಬರಿಗೂ ಧಮಿಕಿ ಹಾಕಿರುವುದಿಲ್ಲ ಹಾಗೂ ಚುನಾವಣಾ ಅಧಿಕಾರಿಗಳಿಗೆ ಒತ್ತಡ ಹೇರಿರುವುದಿಲ್ಲ, ಮುಸ್ಲಿಂ ಶಾಹದಿಮಹಲ್ ವಕ್ಫ್ ಸಮಿತಿಯ ಆಸ್ತಿಯಾಗಿದ್ದು ಇದರಲ್ಲಿ ಯಾರದೆ ಹಸ್ತಕ್ಷೇಪ ನಡೆಯುವುದಿಲ್ಲ ಎಂದು ಕಾಂಗ್ರಸ್ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಸೇರಿದಂತೆ ಹಲವು ಕಾಂಗ್ರೆಸಿಗರು ತೀವ್ರವಾಗಿ ಖಂಡಿಸಿದ್ದಾರೆ.
    
ಈ ಕುರಿತು ಹೇಳಿಕೆ ನೀಡಿದ ಅವರು ನಮ್ಮ  ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರಿಗೆ  ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿರುವ ಇವರು ಮುಸ್ಲಿಂ ಸಮಾಜದ ಮುಖಂಡರು ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ ಮುಸ್ಲಿಂ ಸಮಾಜಕ್ಕೆ ಹಿಟ್ನಾಳ ಕುಟುಂಬದ ಕೊಡುಗೆ ಎನೆಂಬುದು ಸಮಾಜದ ಪ್ರತಿಯೊಬ್ಬರಿಗೆ ಮಾಹಿತಿ ಇದೆ, ಶಾಸಕರಾಗಲಿ ಅವರ ತಂದೆಯವರಾಗಲಿ ಮುಸ್ಲಿಂ ಸಮುದಾಯವನ್ನು ಒಗ್ಗೂಡಿಸಿದ ಅನೇಕ ಜೀವಂತ ಉದಾಹರಣೆಗಳಿವೆ, ಈ ಡೋಂಗಿ ಸಮಾಜದ ಮುಖಂಡರ ಮಾತಿಗೆ ಯಾರು ಒಪ್ಪುವದಿಲ್ಲ, ಯುವ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರ ಅಭಿವೃದ್ದಿ ಸಹಿಸದ ಇವರು ಮುಸ್ಲಿಂ ಸಮುದಾಯದಲ್ಲಿ ಗೊಂದಲ ಸೃಷ್ಟಿಸಲು ಹತಾಶ ಪ್ರಯತ್ನ ಮಾಡುತಿದ್ದಾರೆ. ಇಂತಹ ಹೇಳಿಕೆಗಳನ್ನು ಇನ್ನೂ ಮುಂದೆ ನಿಲ್ಲಿಸದಿದ್ದರೆ ಸಮಾಜದಲ್ಲಿ ಛಿಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ, ಈಗಾಗಲೆ ಒಮ್ಮೆ ಶಾಸಕರ ಹೆಸರನ್ನು ದುರ್ಬಳಕೆ ಮಾಡಲು ಹೊರಟಾಗ ತೀವ್ರ ಮುಖಭಂಗ ಅನುಭವಿಸಿರುವ ಇವರು ಇನ್ನಾದರೂ ಇವರಿಗೆ ಸೃಷ್ಟಿಕರ್ತನು ಒಳ್ಳೆಯ ಬುದ್ದಿ ಕೊಡಲೆಂದು ಒಬ್ಬ ಕಾಂಗ್ರೇಸಿಗನಾಗಿ ಆಶೀಸುತ್ತೇನೆ. ಮುಸ್ಲಿಂ ಸಮಾಜದ ಎಲ್ಲಾ ಮುಖಂಡರು ಹಾಗೂ ಸಮಾಜದ ಹಿರಿಯರು ಇವರ ಬೇಜಾವಾಬ್ದಾರಿ ಹೇಳಿಕೆಗೆ ತೀರ್ವವಾಗಿ ಖಂಡಿಸಿ ಇಂತಹ ಕುತಂತ್ರಿಗಳ ಮೇಲೆ ಸೂಕ್ತಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಬೇಕು ಗೊಂದಲದ ಹೇಳಿಕೆ ನೀಡುವ ಇವರು ಯಾರು ಮುಸ್ಲಿಂ ಸಮಾಜದಲ್ಲಿ ಇವರ ಸ್ಥಾನಮಾನ ವೇನು ಎಂಬುದು ಮೊದಲು ಅರಿತು ಕೊಳ್ಳಬೇಕಾಗಿದೆ ಸಮಾಜದಲ್ಲಿದ್ದುಕೊಂಡು ಸಮಾಜಕ್ಕೆ ಕಪ್ಪುಚುಕ್ಕೆ ತರುವಂಹತ ಕೆಲಸಮಾಡುವ ಇಂತವರ ಮಾತಿಗೆ ಯಾರೂ ಕಿವಿಗೊಡಬೇಡಿ ಇಂತವರನ್ನು ಮಟ್ಟಹಾಕಲು ಒಗ್ಗಟ್ಟಾಗಿ  ಮುಂದಾಗಿ  ಎಂದು  ಕಾಂಗ್ರೆಸ್ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಸೇರಿದಂತೆ ಹಲವು ಹಿರಿಯ ಮುಸ್ಲಿಂ ಮುಖಂಡರು ಮತ್ತು ಕಾಂಗ್ರೆಸ್ಸಿಗರು ಕರೆ ನೀಡಿದ್ದಾರೆ.

Advertisement

0 comments:

Post a Comment

 
Top