PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಗ್ರಾಮೀಣ ಪ್ರದೇಶದ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಚೈತನ್ಯತುಂಬುವಲ್ಲಿ ಸಂಜೀವಿನಿ ಯೋಜನೆಯಡಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಗ್ರಾಮ ವಾಸ್ಥವ್ಯದ ಮೂಲಕ ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಯ ಪರಿಕಲ್ಪನೆ ದೇಶದಲ್ಲೆ ಮಹಿಳೆಯರ ಅಭಿವೃದ್ದಿಗೆ ಮಾದರಿಯಾಗಿದೆ. ಮಹಿಳೆ ಇಂದು ಮಹಿಳೆಯಾಗಿ ಉಳಿಯದೆ, ಬೆಂಕಿಯಕಿಡಿಯಾಗಿಎಲ್ಲಾ ಕ್ಷೇತ್ರಗಳಲ್ಲು ಸಶಕ್ತರಾಗಿ ಹೊರಹೊಮ್ಮಿ,ಆರ್ಥಿಕ ಸಬಲತೆ ಸಾಧಿಸಿ ಬಲಾಢ್ಯರಾಷ್ಟ್ರ ನಿರ್ಮಾಣಕ್ಕೆ ಕಾರಣರಾಗಬೇಕೆಂದು ಗ್ರಾ.ಪಂ ಅಧ್ಯಕ್ಷ ಹೊನ್ನೂರಸಾಬ ಭೈರಾಪುರ ಹೇಳಿದರು. 
    ಗ್ರಾ.ಪಂ ಸಮುದಾಯ ಭವನದಲ್ಲಿ ನಡೆದ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ತಾ.ಪಂ ಮತು ಗ್ರಾ.ಪಂ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಸಂಜೀವಿನಿ ವಾರ್ಡಒಕ್ಕೂಟದ ೧೫ ದಿನಗಳ ಗ್ರಾಮ ವಾಸ್ತವ್ಯದ ಸಮಾರೋಪ ಸಮಾರಂಭ ಹಾಗೂ ಜನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರ ಸಬಲೀಕರಣಕ್ಕೆ ಸಂಜೀವಿನಿ ಯೋಜನೆ ಸಹಕಾರಿಯಾಗಿದ್ದು ಮಹಿಳೆಯರು ಹೆಚ್ಚಿನರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. 
ಈ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕ ಹೆಚ್.ಡಿ ನಟರಾಜ ಮಾತನಾಡಿ ಸಂಜೀವಿನಿ ಯೋಜನೆಯು ಸ್ವ ಸಹಾಯ ಸಂಘಗಳ ಅಭಿವೃಧ್ಧಿಗಾಗಿ ಸುತ್ತು ನಿದಿ, ಬಡ್ಡಿ ಸಹಾಯಧನ, ಸಮುದಾಯ ಬಂಡವಾಳ ನಿಧಿ ನೀಡುವುದರಜೊತೆಗೆ ಕೃಷಿ ಕೃಷಿಯೇತರ ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡು ಆರ್ಥಿಕ ಸ್ವಾಲಂಬಿಗಳಾಗಿ ತಮ್ಮಆದಾಯವನ್ನು ಹೆಚ್ಚಿಸಿಕೊಳ್ಳವುದಕ್ಕೆ ಅನುಕೂಲ ಕಲ್ಪಿಸುತ್ತದೆಎಂದರು.
 ಈ ಸಂಧರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕ ಕಾಶಿನಾಥ ಕಣಿಗೇರಿ ಮಾತನಾಡಿ, ಸಂಜೀವಿನಿ ಯೋಜನೆಯಡಿ ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ೧೫ ದಿನಗಳ ಕಾಲ ಗ್ರಾಮದಲ್ಲಿ ವಿವಿಧಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಆ ಮೂಲಕ ವಾರ್ಡ ಮಟ್ಟದಒಕ್ಕೂಟ ಹಾಗೂ ಗ್ರಾ.ಪಂ ಮಟ್ಟದ ಒಕ್ಕೂಟವನ್ನು ರಚಿಸುವ ಮೂಲಕ ಮಹಿಳೆಯರು ತಮ್ಮ ಬಡತನ ನಿರ್ಮೂಲನೆಗಾಗಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್‌ರವರ ಶಿಕ್ಷಣ ಸಂಘಟನೆ ಹೋರಾಟ ಎಂಬ ತತ್ವದಡಿಇಂದು ಮಹಿಳೆಯರು ಸಂಘಗಳ ಮೂಲಕ ಸಂಘಟಿತರಾಗಿ ಸಂಜೀವಿನಿ ಯೋಜನೆಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸಧೃಡರಾಗಿ ಬದುಕು ರೂಪಿಸಿಕೊಳ್ಳಬೇಕೆಂದು ತಿಳಿಸಿದರು. 
ಈ ಸಂಧರ್ಭದಲ್ಲಿ ಭಾಗ್ಯನಗರ ಗ್ರಾ.ಪಂ ಸದಸ್ಯರಾದ ಸುರೇಶ, ಗಂಗಮ್ಮ, ತಾಲೂಕಕಾರ್ಯಕ್ರಮ ವ್ಯವಸ್ಥಾಪಕರಾದ ಸಾಬಣ್ಣ, ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಶಂಕ್ರಮ್ಮ, ಪುಷ್ಪ, ಸುವರ್ಣ, ಕವಲೂರುರೇಣುಕ, ಅಳವಂಡಿ ಪಕ್ರುಮ, ಗುಡದಳ್ಳಿ ಕವಿತಾಇದ್ದರು. ಈ ಕಾರ್ಯಕ್ರಮವನ್ನುತಾಲೂಕು ವಲಯ ಮೇಲ್ವಿಚಾರಕ ಬಿ.ಆರ್.ಪ್ರಸನ್ನಕುಮಾರ ಸ್ವಾಗತಿಸಿ ನಿರೂಪಿಸಿದರು.    

Advertisement

0 comments:

Post a Comment

 
Top