PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ;೧೫. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಹಾಗೂ ಜಿಲ್ಲಾ ವಕೀಲರ ಸಂಘ, ಕೊಪ್ಪಳ ದ.ಭಾ.ಹಿಂ.ಪ್ರಚಾರ ಸಭಾ  ಕಾನೂನು ಮಹಾವಿದ್ಯಾಲಯದ ರಾಷ್ಟೀಯ ಸೇವಾ ಯೋಜನಾ ಘಟಕ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಂಘ ಉದ್ಘಾಟನೆ ಹಾಗೂ ಶಿಕ್ಷಣದ ಹಕ್ಕು ಕುರಿತು ವಿಶೇಷ ಉಪನ್ಯಾಸ" ಹಮ್ಮಿಕೊಳ್ಳಲಾಯಿತು .
           ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ   ಬಸವರಾಜ.ಎಸ್.ಸಪ್ಪಣ್ಣವರ್ ಜಿಲ್ಲಾ ಮತ್ತು ಸತ್ರ ನ್ಯಾಯಾಶರು ಹಾಗೂ ಅಧ್ಯಕ್ಷರು,  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ  ಇವರು ಕಾರ್ಯಕ್ರಮ ಉದ್ಘಾಟಿಸಿ ಕಾನೂನು ವೃತ್ತಿ ಅತ್ಯಂತ ಮಹತ್ವದ ವೃತ್ತಿ ಆದರೆ ವಕೀಲರು ನ್ಯಾಯಾಲಯಕ್ಕೆ ಪ್ರವೇಶ  ಪಡೆದ ತಕ್ಷಣ ಹಣ ಗಳಿಸುವ ವಿಚಾರ ಮಾಡದೆ ವೃತ್ತಿಯ ಕಡೆ ಗಮನ ಹರಿಸುವುದು ಸೂಕ್ತ  ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಲಿಯುವುದು ಬೇರೆ ಆದರೆ ನ್ಯಾಯಾಲಯದಲ್ಲಿ ಪ್ರಾಯೋಗಿಕವಾಗಿವ ಎದುರಿಸಬೇಕಾಗುವುದೇ ಬೇರೆಯಾಗಿರುತ್ತದೆ. ವಿದ್ಯಾರ್ಥಿಗಳು ಈ ೩ ವರ್ಷದ ಕಾನೂನು ಪದವಿಯನ್ನು ಪಡೆದರೂ ಮತ್ತೇರಡು ವರ್ಷ ತಮ್ಮ ಹಿರಿಯ ವಕೀಲರ ಹತ್ತಿರ ವಿದ್ಯಾರ್ಥಿಗಳಾಗಿ ಕಲಿಯುವುದು ಬಹಳಷ್ಟು ಇರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.  ಮುಖ್ಯಅತಿಥಿಗಳಾಗಿ ಆಗಮಿಸಿದ   ಬಿ.ದಶರಥ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯಾದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಇವರು ಕಾನೂನು ಸೇವೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೋಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು ಇನ್ನೋರ್ವ ಅತಿಥಿಗಳಾಗಿ  ಆಗಮಿಸಿದ  .ಬಿ.ಪಾನಘಂಟಿ ಅಧ್ಯಕ್ಷರು, ಜಿಲ್ಲಾ ವಕೀಲರು ಸಂಘ, ಕೊಪ್ಪಳ.ಮಾತನಾಡುತ್ತಾ ಕೊಪ್ಪಳ ಭಾಗದ ವಿದ್ಯಾರ್ಥಿಗಳಿಗೆ ಈ ಕಾನೂನು ಕಾಲೇಜು ವರದಾನವಾಗಿದ್ದು ಕಾನೂನು ಕಾಲೇಜಿನ ಕೊರತೆಯನ್ನು ಇದು ನಿಗಿಸಿದೆ. ಇಂದಿನ ದಿನಮಾನಗಳಲ್ಲಿ ಕಾನೂನಿನ ಮಹತ್ವ ಈ ಹಿಂದಿನ ದಿನಗಳಿಗಿಂತಲೂ ಹೆಚ್ಚಾಗಿದ್ದು ನ್ಯಾಯವಾದಿಗಳ ಪಾತ್ರ ಬಹಳ ಮಹತ್ವದ್ದಾಗಿದೆ ಎಂದರು. ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಕನಿಷ್ಟ ಜ್ಞಾನವಿರಬೇಕು. ಕಾನೂನನ್ನು ನಾವು ಗೌರವಿಸಿದರೆ ಕಾನೂನು ನಮ್ಮನ್ನು ಗೌರವಿಸುತ್ತದೆ. ಇನ್ನೋರ್ವ ಅತಿಥಿಗಳಾಗಿ  ಆಗಮಿಸಿದ ಬಿ. ಶರಣಪ್ಪ. ಜಿಲ್ಲಾ ಸರ್ಕಾರಿ ವಕೀಲರು ಮಾತನಾಡಿ ಕಾನೂನಿನ ನಿರ್ಲಕ್ಷತೆಯು ಕ್ಷಮಾರ್ಹವಲ್ಲ ಹಿಟ್ಟಿನಿಂದ ಹಿಡಿದೂ ಸಾಯುವ ವರೆಗೂ ಕಾನೂನಿನ ಅವಶ್ಯಕ್ತೆ ಇದೆ. ಇನ್ನೋರ್ವ ಅತಿಥಿಗಳಾಗಿ  ಆಗಮಿಸಿದ ಶ್ರೀ ರಾಜಶೇಖರ ಮಾಲಿಪಾಟೀಲ್ ಮಾತನಾಡುತ್ತಾ  ವಕೀಲರ ವೃತ್ತಿಯಲ್ಲಿ ಪರಿಶ್ರಮವೂ ಇರುತ್ತದೆ. ಪರಿಶ್ರಮದ ಜೊತೆಗೆ ಹೆಸರನ್ನೂ ತರುವ ವೃತ್ತಿ ಇದಾಗಿದೆ ವೃತ್ತಿಯ ಜೊತೆಗೆ ಒಳ್ಳೆಯ ಪ್ರವೃತ್ತಿಯನ್ನು ಬೆಳಸಿಕೊಂಡಾಗ ವೃತ್ತಿಯಲ್ಲಿ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು. ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಕೆ.ನಾಗಬಸಯ್ಯ ಹಿರಿಯ ಉಪನ್ಯಾಸಕರು ದ.ಭಾ.ಹಿಂ.ಪ್ರಚಾರ ಸಭಾ  ಕಾನೂನು ಮಹಾವಿದ್ಯಾಲಯ ಕೊಪ್ಪಳ ಶಿಕ್ಷಣದ ಹಕ್ಕು ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಾಗೂ ಕಾರ್ಯಕಾರಿ ಸಮಿತಿಯ ಸದಶ್ಯರು ದ.ಭಾ.ಹಿಂ.ಪ್ರಚಾರ ಸಭಾ, ಧಾರವಾಡದ ಡಾ. ಕೆ. ಬಿ. ಬ್ಯಾಳಿ ಮಾತನಾಡುತ್ತಾ ನಮ್ಮ ಸಂಸ್ಥೆಯು ಗಾಂಧಿಜಿಯವರಿಂದ ಸ್ಥಾಪನೆಯಾಗಿದ್ದು ಈ ಭಾಗದಲ್ಲಿ ಕಾನೂನು ಸೇವೆಯನ್ನು ಕಾನೂನು ಕಾಲೇಜಿನ ಮೂಲಕ ಕಾನೂನು ಕಾಲೇಜು ಸಮಾಜಕ್ಕೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ನೀಡಿದೆ ಎಂದು ಹೇಳಿದರು.  ಇದೆ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ಬಸವರಾಜ.ಎಸ್.ಸಪ್ಪಣ್ಣವರ್ ಜಿಲ್ಲಾ ಮತ್ತು ಸತ್ರ ನ್ಯಾಯಾಶರು ಹಾಗೂ ಆರ್.ಬಿ.ಪಾನಘಂಟಿ ಅಧ್ಯಕ್ಷರು, ಜಿಲ್ಲಾ ವಕೀಲರು ಸಂಘ, ಕೊಪ್ಪಳ ಹಾಗೂ  ಎಂ.ಎ.ವಲಿ ಸಾಹೇಬ್ ಸಂಸ್ಥಾಪಕರು ಅನ್ಮೋಲ್ ಸೇನಾ ಇವರಿಗೆ ಕಾರ್ಯಕ್ರಮದಲ್ಲಿ  ಸನ್ಮಾನಿಸಲಾಯಿತು.ಮಹಾಲಕ್ಷ್ಮಿ ಪ್ರಾರ್ಥಿಸಿದರು ಡಾ.ಬಿ.ಎಸ್.ಹನಸಿ ಪ್ರಾಚಾರ್ಯರು, ಸ್ವಾಗತಿಸಿದರು,  ಎಸ್.ಎಮ್. ಪಾಟೀಲ್  ಪರಿಚಯಿಸಿದರು. ಸಾವಿತ್ರಿ ಮರೆಬಾಳ ನಿರೂಪಿಸಿದರು,ಪ್ರಧಾನ ಕಾರ್ಯದರ್ಶಿ ಕಳಕನಗೌಡ ಪಾಟೀಲ್ ವಂದಿಸಿದರು ಕಾನೂನು ಸಂಘದ ಪ್ರವರ್ತಕ ಹಾಗೂ ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮಾದಿಕಾರಿಯಾದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ   ಬಸವರಾಜ್ ಎಸ್.ಎಂ,ಉಪನ್ಯಾಸಕರಾದ ಶ್ರೀಮತಿ ಉಷಾದೇವಿ ಹಿರೇಮಠ, ಹಾಗೂ ಸಿಬ್ಬಂದಿ ವರ್ಗ, ಸೇರಿದಂತೆ ಪ್ರಧಾನ ಕಾರ್ಯದರ್ಶಿ, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top