PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ: ಮಾ. . ನಗರದ ಹಸನ್ ರಸ್ತೆಯಲ್ಲಿರುವ ಹಜ್ರತ್ ಸೈಯ್ಯದಿನಾ ಅಬೂಬಕರ ಸಿದ್ದೀಖ್ (ರ.ಅ) ಮಸೀದಿಯಲ್ಲಿ ಧಾರ್ಮಿಕ ಬೇಸಿಗೆ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ತರಬೇತಿ ಶಿಬಿರದಲ್ಲಿ ಕುರ್‌ಆನ್ ವ್ಯಾಕರಣ ಬದ್ದವಾಗಿ ಪಠಿಸುವ ತರಬೇತಿ ನೀಡುವುದಲ್ಲದೆ ನಲವತ್ತು ಹದೀಸ್‌ಗಳು, ದುಆಯೇಂ, ವಜೂ, ಗುಸಲ್, ನಮಾಝ್ ನಿರ್ವಹಿಸುವ ಪದ್ದತಿ, ಧಾರ್ಮಿಕ ಪ್ರಾಥಮಿಕ ಹಂತದ ತಿಳುವಳಿಕೆ, ಅದರ್ಶ ನಡುವಳಿಕೆ ಸೇರಿದಂತೆ ಎಲ್ಲಾ ಸಮುದಾಯಗಳೊಂದಿಗೆ ಸೌಹಾರ್ದ ವ್ಯಕ್ತಿತ್ವ ರೂಪಿಸುವ ತರಬೇತಿ ನೀಡಲಾಗುತ್ತದೆ. 
ಹಜ್ರತ್ ಸೈಯ್ಯದಿನಾ ಅಬೂಬಕರ್ ಸಿದ್ದೀಖ್ (ರ.ಅ) ಮಸೀದಿಯ ವ್ಯವಸ್ಥಾಪಕ ಸಮೀತಿಯಿಂದ ಸುಮಾರು ಎಂಟು ವರ್ಷಗಳಿಂದ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಕಳೆದ ಬಾರಿ ಇನ್ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ೪೦ ದಿನಗಳ ಶಿಬಿರದ ಕೊನೆಯಲ್ಲಿ ಪರೀಕ್ಷೆ ನಡೆಸಿ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ಹಾಗೂ ಬಹುಮಾನಗಳನ್ನು ನೀಡಲಾಗುತ್ತದೆ. 
ನಲವತ್ತು ದಿನಗಳ ಶಿಬಿರಕ್ಕೆ ತಮ್ಮ ಮಕ್ಕಳಿಗೆ ಕಳುಹಿಸಿ ಧಾರ್ಮಿಕ ಹಾಗೂ ಜಗತ್ತಿನ ಯಶಸ್ವಿಗೆ ಪಾಲಕರು ರಹದಾರಿಯಾಗಬೇಕು. ಎಪ್ರಿಲ್ ೧ ರಿಂದ ಪ್ರವೇಶ ಪ್ರಾರಂಭಗೊಳ್ಳಲಿದೆ. ಶಿಬಿರದಲ್ಲಿ ಪ್ರತಿದಿನ ಬೆಳಿಗ್ಗೆ ೯.೦೦ ಗಂಟೆಯಿಂದ ಪ್ರಾರಂಭಗೊಂಡು ೧೨.೩೦ಕ್ಕೆ ಮುಕ್ತಾಯಗೊಳ್ಳಲಿದೆ. ಹೆಚ್ಚಿನ ಮಾಹಿತಿಗೆ ಹಜ್ರತ್ ಸೈಯ್ಯದಿನಾ ಅಬೂಬಕರ್ ಸಿದ್ದೀಖ್ (ರ.ಅ) ಮಸೀದಿಯ ಖತೀಬ್ -ಎ-ಇಮಾಮ್ ಮಹಮ್ಮದ್ ಜಹುರ್ ಅಹ್ಮದ್ ಮೊ. ೯೭೪೧೩೭೪೭೨೮ ಇವರನ್ನು ಸಂಪರ್ಕಿಸಲು ಕೋರಲಾಗಿದೆ. 

Advertisement

0 comments:

Post a Comment

 
Top