ಕೊಪ್ಪಳ, ಮಾ : ಬೀದಿ ಬದಿ ವ್ಯಾಪಾರಸ್ಥರಿಗೆ ಯಾವುದೇ ಸಮಸ್ಯೆಗಳು ಬಂದಲ್ಲಿ ತಕ್ಷಣ ಸ್ಪಂದಿಸುತ್ತೇನೆ. ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದರೆ ಅವರನ್ನು ಏಕಾಎಕಿಯಾಗಿ ಬುಲ್ಡೋಜರ್ ತೆಗೆದುಕೊಂಡು ಬಂದು ತೆಗೆಸುತ್ತಾರೆ. ಈ ಸಮಸ್ಯೆಗಳು ಮುಂದೆ ಬರಲಾರದ ಹಾಗೆ ನಾವೇಲ್ಲಾ ಹೋರಾಡಿ ರಕ್ಷಣೆ ಮಾಡಿಕೊಳ್ಳುತ್ತೇವೆ ಎಂದು ಶ್ರೀ ಗವಿಸಿದ್ದೇಶ್ವರ ಬೀದಿ ಬದಿ ವ್ಯಾಪಾರಸ್ಥರ ಹಿತರಕ್ಷಣಾ ಸಂಘದ ಅಧ್ಯಕ್ಷ ಮಖಬೂಲ್ ಹೂಗಾರ ಹೇಳಿದರು.
ಅವರು ಜೆ.ಪಿ. ಮಾರುಕಟ್ಟೆಯಲ್ಲಿ ನಗರಸಭೆಯಿಂದ ಜೀವನೋಪಾಯ ಯೋ
ಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎ. ಗಫಾರ್ ಮಾತನಾಡಿ, ಕೇಂದ್ರ ಸರಕಾರ ಬೀದಿ ಬದಿ ವ್ಯಾಪಾರ ಮಾಡಲು ಕಾಯ್ದೆ ತಂದಿದೆ. ಬೀದಿ ವ್ಯಾಪಾರಸ್ಥರಿಗೆ ಮುನ್ಸಿಪಾಲ್ಟಿ, ಪೊಲೀಸ್‌ರಿಂದ ಕಿರುಕುಳ ಆಗದಂತೆ ಕಾನೂನಿನಲ್ಲಿ ರಕ್ಷಣೆ ಒದಗಿಸಲಾಗಿದೆ. ಇನ್ನೂ ಮುಂದೆ ನೆಮ್ಮದಿಯಿಂದ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಸರಕಾರ ಗುರುತಿನ ಚೀಟಿ ನೀಡುತ್ತಿದೆ ಎಂದು ಹೇಳಿದರು.
ಶ್ರೀ ಗವಿಸಿದ್ದೇಶ್ವರ ಬೀದಿ ಬದಿ ವ್ಯಾಪಾರಸ್ಥರ ಹಿತರಕ್ಷಣಾ ಸಂಘದ ಉಪಾಧ್ಯಕ್ಷ ಗವಿಸಿದ್ಧಪ್ಪ ಹೂಗಾರ ಮಾತನಾಡಿ, ಬೀದಿ ಬದಿ ವ್ಯಾಪಾರ ಮಾಡುವವರು ಒಕ್ಕಟ್ಟಾದರೆ ನಾವು ಗಟ್ಟಿಯಾದ ಸಂಘಟನೆ ರಚಿಸಿಕೊಂಡು ಯಾವುದೇ ತೊಂದರೆಯಾದರೆ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ನಿಂಬಿಹಣ್ಣು ವ್ಯಾಪಾರಿ ನಿಂಗಪ್ಪ ದೊಡ್ಡಮನಿ, ಹುಸೇನ್ ಬಾಷ್ ಗೊಂಡಬಾಳ ಮುತಾಂದವರು ಉಪಸ್ಥಿತರಿದ್ದರು.
0 comments:
Post a Comment