ಜಿಲ್ಲಾಡಳಿತ ಕೊಪ್ಪಳ, ಬಸವಜಯಂತಿ ಉತ್ಸವ ಸಮಿತಿ ಕೊಪ್ಪಳ, ಬಸವಾನುಯಾಯಿ ಸಂಘ ಸಂಸ್ಥೆಗಳು ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ ೨೧.೦೪.೨೦೧೫ ಮಂಗಳವಾರದಂದು ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮ ಆಚರಿಸಲಾಗುವುದು. ಅಂದು ಬೆಳಿಗ್ಗೆ ೯.೦೦ ಗಂಟೆಗೆ ಶ್ರೀ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಭಾವಚಿತ್ರ ಪೂಜೆ ಮತ್ತು ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ. ಸಂಜೆ ೪.೦೦ ಗಂಟೆಗೆ ಶ್ರೀ ಬಸವಣ್ಣನವರ ಭಾವಚಿತ್ರ ಮೆರವಣಿಗೆಯು ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದಿಂದ ಜವಾಹರ ರಸ್ತೆಯ ಮೂಲಕ, ಆಝಾದ ಸರ್ಕಲ್, ಕಿತ್ತೂರು ಚೆನ್ನಮ್ಮ ಸರ್ಕಲ್, ಶ್ರೀ ಅಂಬೇಡ್ಕರ ಸರ್ಕಲ್‌ದಿಂದ ಶ್ರೀ ಗವಿಮಠದ ಆವರಣ ತಲುಪುವುದು. ಸಂಜೆ ೬.೦೦ ಗಂಟೆಗೆ ಶ್ರೀ ಗವಿಮಠದ ಆವರಣದಲ್ಲಿ ಬಸವಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಮ.ನಿ.ಪ್ರ.ಸ್ವ. ಜಗದ್ಗುರು ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ವಹಿಸಲಿದ್ದಾರೆ. ಬಸವ ಗೋಷ್ಠಿಯ ಚಿಂತನೆಯನ್ನು ಶ್ರೀ ಶಂಕರ ದೇವನೂರು ಮುಖ್ಯ ಇಂಜನಿಯರ್ ಕರ್ನಾಟಕ ವಿದ್ಯುತ್ ನಿಗಮ ಬೆಂಗಳೂರು ಇವರು ಆಗಮಿಸಿ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀಮತಿ ಸವಿತಾ ನಡಕಟ್ಟಿ, ಮುಖ್ಯಸ್ಥರು ಬಸವಕೇಂದ್ರ, ಧಾರವಾಡ ಆಗಮಿಸಲಿದ್ದಾರೆ. ವಚನ ಗಾಯನ, ವಚನ ನೃತ್ಯ ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಬಸವ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಬಸವರಾಜ ಬಳ್ಳೊಳ್ಳಿ ಮನವಿ ಮಾಡಿದ್ದಾರೆ.
ಬಸವ ಜಯಂತಿ ಉತ್ಸವ

0 comments:
Post a Comment