PLEASE LOGIN TO KANNADANET.COM FOR REGULAR NEWS-UPDATES




 ಗ್ರಾಮೀಣ  ಸಂಸ್ಕೃತಿ ಉಳಿಸಿ - ಶ್ರೀನಿವಾಸ ಜೋಷಿ
ಹಿಂದಿನ ಕಾಲದಿಂದಲೂ ಹಳ್ಳಿಗರಲ್ಲಿ ಅಡಗಿರುವಂತಹ  ನಾಟಕ ಬೈಲಾಟ, ಜಾತ್ರಾ ಉತ್ಸಾವಗಳಲ್ಲಿ ಆಡುತ್ತಾ ನಮ್ಮ ಸಂಸ್ಕೃತಿ ಉಳಿಸುತ್ತಾ ಬಂದಿದ್ದಾರೆ ಆಕರ್ಷಕ ವೇಷ ಬೂಷಗಳ ಮೂಲಕ ಜನರನ್ನು ರಂಜಿಸುವುದರ ಜೊತೆ ಜೊತೆಗೆ   ಭಾರತಿ ಸಂಸ್ಕೃತಿ ಜನಪದ ಕಲೆಗಳನ್ನು ಪುನರಚೇತನಗೊಳಿಸುತ್ತಿದ್ದಾರೆ.  ಆದರೆ ಆದುನಿಕ ಯುಗದಲ್ಲಿ ಇಂತಹ ಪರಂಪರೆ ಸಿನಿಮಾ ಟಿವಿ ಮಾಧ್ಯದಿಂದಾಗಿ ಮರೆಯಾಗುತ್ತಿರುವುದು ವಿಷಾಧಿನಿಯವೆಂದು ಶ್ರೀನಿವಾಸ ಜೋಷಿ ತಿಳಿಸಿದರು. ಅವರು ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರಾ ಪ್ರಯುಕ್ತ ಶ್ರೀ ಮರಿಯಮ್ಮದೇವಿ ನಾಟ್ಯ ಸಂಘ ಇವರು ಆಯೋಜಿಸಿದ್ದ ಹೆತ್ತರವರ ಕನಸು ಎಂಬ ನಾಟಕದ ಉದ್ಘಾಟಿಸಿ   ಮಾತನಾಡಿದರು. ನಂತರ ತಾಲೂಕ ಪಂಚಾಯತಿ ಸದಸ್ಯ ಮುದೆಗೌಡ ಪಾಟೀಲ. ಕೆ.ಎಮ್.ಎಫ್.ನಿರ್ದೆಶಕ ವೆಂಕನಗೌಡ ಹಿರೆಗೌಡ ಜೋತಿ ಬೆಳಗಿಸಿ  ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಯಲ್ಲನಗೌಡ  ಮಾಲೀಪಾಟೀಲ, ವಹಿಸಿದ್ದರು. ಈ ಸಂದರ್ಭದಲ್ಲಿ ಹನುಮಂತಪ್ಪ ಪೂಜಾರ ಗ್ರಾ.ಪಂ ಸದಸ್ಯರಾದ ಯಂಕಪ್ಪ ಪೂಜಾರ, ದಯಾನಂದ ಪೊಲೀಸಪಾಟೀಲ, ಮೈಲಪ್ಪ ದೇವರಮನಿ, ಹಿರಿಯರಾದ ರಾಮಪ್ಪ ತಿಪ್ಪಣ್ಣನವರ, ಬಸವರಾಜ ಅಂಗಡಿ, ರಾಜು ಹುರಕಡ್ಲಿ, ಮೊಹನ ಪುರೊಹಿತ, ಮಲ್ಲಣ್ಣ ಗುಗ್ರಿ, ಅಂದಪ್ಪ ಬೆಳವಿನಾಳ, ಶಿವರಡ್ಡಿ ಬೂಮಕ್ಕನವರ, ಮಲ್ಲಯ್ಯ ಸಾಲೀಮಠ, ತಿಪ್ಪಣ್ಣ ವಡ್ಡೀನ, ಸೋಮಪ್ಪ ಬೈರಣ್ಣನವರ, ರಾಜ್ಯ ಯುವಪ್ರಶಸ್ತಿ ವಿಜೇತ ಜಗದಯ್ಯ ಸಾಲಿಮಠ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. 
  ದಿನಾಂಕ ೨೬/೦೩/೨೦೧೫ ರಂದು ಶ್ರೀ ಮಾರುತೇಶ್ವರ ರಥೋತ್ಸವ ಕಾರ್ಯಕ್ರಮ ವಿಜೃಂಬಣೆಯಿಂದ ಜರುಗಿತು. ೧೦೮ ಷಟಸ್ಥಲಬ್ರಹ್ಮಿ ಉಜ್ಜಿನಿಪೀಠ ಜಗದ್ಗುರು ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.   ಗ್ರಾಮದ ಹಿರಿಯರಾದ ಹೆಚ್.ಎಲ್.ಹಿರೆಗೌಡ್ರ ಇತರರು ಉಪಸ್ಥಿತರಿದ್ದರು. 
ಮಾರನೇದಿನ ಶ್ರೀ ಮಾರುತೇಶ್ವರನ ಮುಳ್ಳು ಪಲ್ಲಕ್ಕಿ ಉತ್ಸವ ಅಗ್ನಿಕೊಂಡ, ಬ್ಯಾಟಿಗಿಡ, ನೀರುಗೊಂಡ, ಕಾರ್ಯಕ್ರಮ ಜರುಗಿದವು. ಡೊಳ್ಳು, ಭಾಜಾ, ಭಜಂತ್ರಿಯವರೊಂದಿಗೆ ಜಾತ್ರೆ ವಿಜೃಂಬಣೆಯಿಂದ ಜರುಗಿತು.   
ನಿಂಗಪ್ಪ ದೇವರಮನಿ, ಸ್ವಾಗತಿಸಿದರು. ಯಮನೂರಪ್ಪ ಶಾವಂತ್ರಣ್ಣನವರ ನಿರೂಪಿಸಿದರು. ಕನಕಪ್ಪ ದೇವರಮನಿ ವಂದಿಸಿದರು.   

Advertisement

0 comments:

Post a Comment

 
Top