. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಸಣ್ಣ ನೀರಾವರಿ ಸಚಿವರಾದ ಶಿವರಾಜ ತಂಗಡಗಿ ೪೪ ನೇ ಹುಟ್ಟುಹಬ್ಬ ನಿಮಿತ್ಯ ನಗರದ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಬ್ರೆಡ್ ನೀಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮವನ್ನು ಯುವಚೇತನ ಶ್ರೀ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ೪೪ ನೇ ವಸಂತಕ್ಕೆ ಕಾಲಿಟ್ಟ ತಂಗಡಗಿಯವರು ನೂರ್ಕಾಲ ಬಾಳಲಿ ಅವರಿಂದ ಸಮಾಜಕ್ಕೆ ಇನ್ನಷ್ಟು ಹಾಗೂ ಅವರ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಲಿ ಎಂದು ಶುಭ ಕೋರಿದರು.
ಕಾರ್ಯಕ್ರಮವನ್ನು ಜಿಲ್ಲಾ ಸರ್ಜನ್ ಡಾ|| ಬಿ. ಎಸ್. ಲೋಕೇಶ ರೋಗಿಗಳಿಗೆ ಹಣ್ಣು ಬ್ರೆಡ್ ನೀಡಿ ಆರಂಭಿಸಿದರು. ಈ ಸಂದರ್ಭದಲ್ಲಿ ಶಿವರಾಜ ತಂಗಡಗಿ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಕಾಂಗ್ರೆಸ್ ಎಸ್. ಸಿ. ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ, ವೀರಕನ್ನಡಿಗ ಸಂಘದ ಶಿವಾನಂದ ಹೊದ್ಲೂರ, ರಾಮು ಪೂಜಾರ, ಶ್ರೀಕಾಂತ ರಾಜನಾಳ, ರಮೇಶ ಭೋವಿ, ಸುಧಾಕರ, ಆನಂದ ಗೊಂಡಬಾಳ, ಹನುಮಂತ ವಾಲ್ಮೀಕಿ ಡಂಬ್ರಳ್ಳಿ ಇನ್ನಿತರರು ಇದ್ದರು.
ಸಚಿವರ ಹುಟ್ಟು ಹಬ್ಬ: ರೋಗಿಗಳಿಗೆ ಹಾಲು-ಹಣ್ಣು ವಿತರಣೆ
ಕೊಪ್ಪಳ, ಜೂ.೧೦: ರಾಜ್ಯ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರ ೪೭ ನೇ ಹುಟ್ಟುಹಬ್ಬದ ನಿಮಿತ್ಯ ಇಂದು ಇಲ್ಲಿನ ಜಿಲ್ಲಾ ಆಸ್ಪತ್ರೆಯ ಓಳರೋಗಿಗಳಿಗೆ ಬೋವಿ ಸಮಾಜದ ವತಿಯಿಂದ ಹಾಲು-ಹಣ್ಣು, ಬ್ರೇಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಸತ್ಯಪ್ಪ ಬೋವಿ, ಜಿಲ್ಲಾ ಸಂಚಾಲಕ ನಿಂಗಪ್ಪ ಬೋವಿ, ಯಮನೂರಪ್ಪ ಕೊಪ್ಪಳ, ಶರಣಪ್ಪ ಹೆಚ್. ನಾಯಕ, ಶಿವಮೂರ್ತಿ ಡಿ., ಗೌರವಾಧ್ಯಕ್ಷ ರೇವಣಪ್ಪ, ಗಾಳೆಪ್ಪ ಗಂಗಾವತಿ, ಯಂಕಪ್ಪ ನಾಗನೂರು, ಕರಿಯಪ್ಪ ಗೌರಿಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.
0 comments:
Post a Comment