PLEASE LOGIN TO KANNADANET.COM FOR REGULAR NEWS-UPDATES

      ಕೊಪ್ಪಳ: ತಾಲೂಕಿನ ದದೇಗಲ್ ಗ್ರಾಮದಲ್ಲಿ ಡಿ.೭ರಿಂದ ೯ರವರೆಗೆ ಶ್ರೀ ಜಗದ್ಗುರು ಸದ್ಧಾರೂಢ ಮಹಾಸ್ವಮಿಗಳ ೨೩ನೇ ಜಾತ್ರಾ ಮಹೋತ್ಸವ, ಶ್ರೀ ಸದ್ಗುರು ಸೋಮಲಿಂಗ ಮಹಾಸ್ವಾಮಿಗಳ ೯ನೇ ವರ್ಷದ ಪುಣ್ಯರಾಧನೆ ಹಾಗೂ ಸಾಮೂಹಿಕ ವಿವಾಹಗಳು ಜರುಗಲಿವೆ.
     ಡಿ.೭ರಿಂದ ಜಾತ್ರೆ ಆರಂಭವಾಗಲಿದ್ದು, ಡಿ.೯ರಂದು ಸಾಮೂಹಿಕ ವಿವಾಹಗಳು ನಡೆಯಲಿವೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ಹಂಪಿ ಹೇಮಕೂಟ ಶ್ರೀ ಶಿವರಾಮ ಅವಧೂತ ಆಶ್ರಮದ ಶ್ರೀ ವಿದ್ಯಾನಂದ ಭಾರತಿ ಸ್ವಾಮೀಜಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಶಿವರಾಮಗೌಡ, ಶಾಸಕರಾದ ಸಂಗಣ್ಣ ಕರಡಿ, ಈಶಣ್ಣ ಗುಳಗಣ್ಣವರ, ಹಾಲಪ್ಪ ಆಚಾರ, ಜಿ.ಪಂ.ಅಧ್ಯಕ್ಷ ಕೆ.ರಾಘವೇಂದ್ರ ಹಿಟ್ನಾಳ, ಜಿ.ಪಂ.ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ, ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಮುಖಂಡರಾದ ಪ್ರದೀಪಗೌಡ ಮಾಲಿಪಾಟೀಲ, ಶಾಂತಣ್ಣ ಮುದಗಲ್, ಅಂದಣ್ಣ ಅಗಡಿ, ಈಶಪ್ಪ ಮಾದಿನೂರ, ಸುರೇಶ ದೇಸಾಯಿ, ಎಚ್.ಎಲ್.ಹಿರೇಗೌಡ್ರ ಇತರರು ಭಾಗವಹಿಸಲಿದ್ದಾರೆ

Advertisement

0 comments:

Post a Comment

 
Top