PLEASE LOGIN TO KANNADANET.COM FOR REGULAR NEWS-UPDATES

ಹೊಸದಿಲ್ಲಿ, ನ.30: ಮಾಜಿ ಪ್ರಧಾನಿ ಇಂದ್ರಕುಮಾರ್ ಗುಜ್ರಾಲ್ (ಐ.ಕೆ.ಗುಜ್ರಾಲ್) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.

ಅವರಿಗೆ 92 ವರ್ಷ ವಯಸ್ಸಾಗಿತ್ತು. 1990ರ ದಶಕಾಂತ್ಯದಲ್ಲಿ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿದ್ದ ಐ.ಕೆ.ಗುಜ್ರಾಲ್, ಕಳೆದ ಒಂದು ವರ್ಷದಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ಅವರು, ಕೆಲವು ದಿನಗಳ ಹಿಂದೆ ತೀವ್ರ ಹೃದಯ ಸೋಂಕಿಗೆ ಒಳಗಾಗಿದ್ದರು. ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದೇಹದ ಬಹುಅಂಗಗಳ ವೈಫಲ್ಯದ ಪರಿಣಾಮವಾಗಿ ಇಂದು ಮಧ್ಯಾಹ್ನ 3:27 ಗಂಟೆಗೆ ಕೊನೆಯುಸಿರು ಎಳೆದರು ಎಂದು ಮೂಲಗಳು ತಿಳಿಸಿವೆ.

ಹೊಸದಿಲ್ಲಿಯ ಸಮೀಪ ಶನಿವಾರ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರ ವಿಭಜನೆಯ ಬಳಿಕ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ ಐ.ಕೆ.ಗುಜ್ರಾಲ್, 50ರ ದಶಕದಲ್ಲಿ ಎನ್‌ಡಿಎಂಸಿಯ ಉಪಾಧ್ಯಕ್ಷರಾಗಿ ಸಾರ್ವಜನಿಕ ಬದುಕು ಆರಂಭಿಸಿದ್ದರು. ಬಳಿಕ ಕೇಂದ್ರ ಸಚಿವರಾದುದಲ್ಲದೆ ಯುಎಸ್‌ಎಸ್ ಆರ್ ನಲ್ಲಿ ಭಾರತದ ರಾಯಭಾರಿಯೂ ಆಗಿ ಸೇವೆ ಸಲ್ಲಿಸಿದ್ದರು.

1980ರ ದಶಕಾಂತ್ಯದಲ್ಲಿ ಕಾಂಗ್ರೆಸ್ ತ್ಯಜಿಸಿ ಜನತಾದಳ ಸೇರಿದ್ದ ಐ.ಕೆ.ಗುಜ್ರಾಲ್, 1989ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾದ ಗುಜ್ರಾಲ್, ದೇವೇಗೌಡ ನೇತ್ವತ್ವದ ಸಂಯುಕ್ತ ರಂಗ ಸರಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1997ರಲ್ಲಿ ಕಾಂಗ್ರೆಸ್ ದೇವೇಗೌಡ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂದೆೆಗೆದುಕೊಂಡಾಗ ಪ್ರಧಾನಿ ಹುದ್ದೆಗೆ ಭಡ್ತಿ ಪಡೆದಿದ್ದರು.

Advertisement

0 comments:

Post a Comment

 
Top