PLEASE LOGIN TO KANNADANET.COM FOR REGULAR NEWS-UPDATES

 ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪರಿಚಾಲಕರಾಗಿ ಕಳೆದ ೧೮ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಭೀಮಣ್ಣ ಮಡಿವಾಳ (೪೧) ಇವರು ಅನಾರೋಗ್ಯದ ಕಾರಣ ನಿನ್ನೆ ನಿಧನರಾದರು. ಬಹುತೇಕ ಎಲ್ಲ ಪಾಲಕರಿಗೆ ಬಹಳ ಚಿರಪರಿಚಿತರಾಗಿದ್ದ ಮತ್ತು ಮಕ್ಕಳ ಅಪಾರ ಪ್ರೀತಿಗೆ ಪಾತ್ರರಾಗಿದ್ದ ಇವರ ನಿಧನದಿಂದ ಶಾಲೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. 

            ಅಗಲಿದ ಭೀಮಣ್ಣನವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ನಂತರ ನಡೆದ ಶೋಕಸಭೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಲಯನ್ ವಿ.ಎಸ್. ಅಗಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಪ್ರಭು ಹೆಬ್ಬಾಳ, ಶಾಲಾ ಪ್ರಾಚಾರ್ಯ ಎ. ಧನಂಜಯನ್ ಭಾಗವಹಿಸಿದ್ದರು. ಭೀಮಣ್ಣನವರ ಭಾವಚಿತ್ರಕ್ಕೆ ಲಯನ್ ಪ್ರಭು ಹೆಬ್ಬಾಳ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಭೀಮಣ್ಣನವರ ವ್ಯಕ್ತಿತ್ವದ ಕುರಿತಾಗಿ ಶಾಲಾ ಪ್ರಾಚಾರ್ಯ ಎ. ಧನಂಜಯನ್, ಶಿಕ್ಷಕರಾದ ಶ್ರೀಮತಿ ಸರೋಜಾ ಬಿ.ವಿ., ಮಹೇಶ ಬಳ್ಳಾರಿ, ಶರಣಗೌಡ ಮಾತನಾಡಿದರು. ಶೋಕಸಭೆಯ ವೇದಿಕೆಯ ಮೇಲೆ ಶಿಕ್ಷಕರಾದ ಶ್ರೀಮತಿ ಕಾಮೇಶ್ವರಿ, ಶ್ರೀಮತಿ ಭಾಗ್ಯಲಕ್ಷ್ಮೀ, ಸಮೀರ ಜೋಶಿ, ಪರಮೇಶ್ವರಯ್ಯ, ವಿ.ಎಸ್. ಕಮ್ಮಾರ, ಅಶೋಕ ಬಳ್ಳಾರಿ ಉಪಸ್ಥಿತರಿದ್ದರು. ಅವರ ನಿಧನದ ನಿಮಿತ್ಯ ಶಾಲೆಗೆ ಒಂದು ದಿನದ ರಜೆ ಘೋಷಿಸಲಾಗಿತ್ತು.

Advertisement

0 comments:

Post a Comment

 
Top