ಕೊಪ್ಪಳ-09- ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ ಹೆಚ್ಚಿಗೆ ಇದ್ದು, ಸ್ವ-ಸಹಾಯ ಸಂಘಗಳ ಮೂಲಕ ಸ್ವ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸದೃಢರಾಗುವಲ್ಲಿ ಸ್ವ-ಸಹಾಯ ಸಂಘಗಳ ಪಾತ್ರ ಗಣನೀಯವಾಗಿದ್ದು ಹಲವಾರು ಸ್ವ-ಸಹಾಯ ಸಂಘಗಳು ಸೇರಿ ಸಹಕಾರ ಸಂಘಗಳನ್ನು ರಚನೆ ಮಾಡಿಕೊಂಡು ಅದರ ಮೂಲಕ ಹೆಚ್ಚಿನ ಆರ್ಥಿಕ ಸೌಲತ್ತನ್ನು ಪಡೆದು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹಾಗೂ ಮಹಿಳಾ ಸಬಲೀಕರಣಕ್ಕೆ ಸಹಕಾರ ಕ್ಷೇತ್ರ ಹೆಬ್ಬಾಗಿಲಾಗಿದ್ದು ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ ಹೆಚ್ಚಿಗೆ ಇದ್ದು ಸಂಘಗಳಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸುವ ನಿಷ್ಠೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿಗೆ ಇದ್ದು ಸ್ವ-ಸಹಾಯ ಸಂಘಗಳ ಮಾದರಿಯಲ್ಲೇ ಹತ್ತಾರು ಸ್ವ-ಸಹಾಯ ಸಂಘಗಳು ಸೇರಿ ಸಹಕಾರ ಸಂಘವನ್ನು ರಚನೆ ಮಾಡಿಕೊಂಡು ಅದರ ಮೂಲಕ ಹೆಚ್ಚಿನ ಸೌವಲತ್ತನ್ನು ಪಡೆದು ಸಹಕಾರ ಕ್ಷೇತ್ರದ ಲಾಭ ಪಡೆಯಬೇಕೆಂದು ಕರೆ ನೀಡಿದರು. ೦೯ರಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ., ಹ್ಯಾಟಿ ಹಾಗೂ ಸಹಕಾರ ಇಲಾಖೆ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹ್ಯಾಟಿ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಕೊಪ್ಪಳ ತಾಲೂಕಿನ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಸ್ವ-ಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಮಾನ್ಯ ಶ್ರೀ ಶೇಖರಗೌಡ ಮಾಲಿಪಾಟೀಲ. ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇವರು ಉದ್ಘಾಟಿಸಿ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ, ಅಮರೇಶ ಉಪಲಾಪೂರ ರವರು ಮಾತನಾಡುತ್ತಾ ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರು ಹೆಚ್ಚು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯವಾಗಿದ್ದು, ಕಿನ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅನೇಕ ಸ್ವ-ಸಹಾಯ ಸಂಘಗಳನ್ನು ರಚನೆ ಮಾಡಿ ಆರ್ಥಿಕ ಸಹಾಯ ಸೌಲಭ್ಯ ನೀಡಿ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಕಿನ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಿಲ್ಲೆಯಲ್ಲಿ ಮಾದರಿ ಸಹಕಾರ ಸಂಘವಾಗಿದ್ದು ಎಲ್ಲಾ ಸಹಕಾರಿಗಳು ನಮ್ಮ ಸಂಘಕ್ಕೆ ಭೇಟಿ ನೀಡಲು ಕರೆನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಹ್ಯಾಟಿ ಇದರ ಅಧ್ಯಕ್ಷರಾದ ಶ್ರೀಮತಿ ಲಲಿತಾ ಬಸವರಾಜ ಬಹದ್ದೂರ ಬಂಡಿ. ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ, ಲಕ್ಷ್ಮವ್ವ ದೇವಪ್ಪ ಪೂಜಾರ. ಸದಸ್ಯರು, ತಾಲೂಕಾ ಪಂಚಾಯತ್, ಕುಣಕೇರಿ., ಹನುಮಪ್ಪ ಲಕ್ಷ್ಮವ್ವ ಚುಕ್ಕನಕಲ್. ಅಧ್ಯಕ್ಷರು, ಗ್ರಾಮ ಪಂಚಾಯತ್, ಬಹದ್ದೂರ ಬಂಡಿ., ಸುರೇಶ ಮಾದಿನೂರು. ನಿರ್ದೇಶಕರು, ಕೆ.ಓ.ಎಫ್. ಬೆಂಗಳೂರು., ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷರಾದ, ಹನುಮಪ್ಪ ಉಪ್ಪಾರ., ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರುಗಳಾದ, ಶಕುಂತಲಾ ಹೆಚ್. ಹುಡೇಜಾಲಿ, ತೋಟಪ್ಪ ಕಾಮನೂರು, ನೀಲಕಂಠಯ್ಯ ಹಿರೇಮಠ, ಗವಿಸಿದ್ದೇಶ ಹುಡೇಜಾಲಿ, ಸಿ.ಹೆಚ್. ಸತ್ಯನಾರಾಯಣ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರಾದ, ಗವಿಸಿದ್ದಯ್ಯ ಬಿ. ಶಶಿಮಠ., ಬಹದ್ದೂರ ಬಂಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ, ಖಾಸಿಂಬೀ ಮಹಿಬೂಬಹುಸೇನ್., ಮುದ್ದಾಬಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ, ಪಂಪಣ್ಣ ಹಳ್ಳಿಗುಡಿ., ಗ್ರಾಹಕರ ಸಹಕಾರ ಸಂಘದ ನಿರ್ದೇಶಕರಾದ ಸು
ಭಾಶ ಹೆಚ್. ಕಲಾಲ., ಹ್ಯಾಟಿ ಗ್ರಾಮ ಪಂಚಾಯತ್ ಸದಸ್ಯರುಗಳಾದ, ನಿಂಗನಗೌಡ ಪೊ||ಪಾಟೀಲ., ಪತ್ರೇಮ್ಮ ಮಲ್ಲಯ್ಯ ನೀರಲಗಿ ಹಿರೇಮಠ., ವೀಶಾಲಾಕ್ಷೀ ನಿಂಗಪ್ಪ ಪಚ್ಚಿ., ಚಂದ್ರು ಹನುಮಪ್ಪ ಕಿನ್ನೂರಿ. ಜಿಲ್ಲಾ ಸಹಕಾರ ಯೂನಿಯನ್ನಿನ ಗವಿಸಿದ್ದಯ್ಯ ಎಸ್. ಹಿರೇಮಠ ಹಾಗೂ ಅನುಪಮ ಬಿ. ಅವಣ್ಣೆವರ ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳು ಕುರಿತು ಮಂಜುನಾಥ. ಕೃಷಿ ಮೆಲ್ವೀಚಾರಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಕೊಪ್ಪಳ. ಹಾಗೂ ರಾಜಶೇಖರ ಹೊಸಮನಿ. ವ್ಯವಸ್ಥಾಪಕರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಇವರುಗಳು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶರಣಬಸಪ್ಪ ಕಾಟ್ರಳ್ಳಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಅತಿಥಿಗಳನ್ನು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ತೋಟಪ್ಪ ಕಾಮನೂರ ರವರು ಸ್ವಾಗತಿಸಿದರು. ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ, ಗವಿಸಿದ್ದೇಶ ಹುಡೇಜಾಲಿ ಯವರು ವಂದಿಸಿದರು.
0 comments:
Post a Comment