ಕೊಪ್ಪಳ : ಖಜಾನೆ ಇಲಾಖೆಯೊಂದಿಗಿನ ಎಲ್ಲ ಬಗೆಯ ಬಿಲ್ಲುಗಳ ಸಲ್ಲಿಕೆ, ಚೆಕ್ ವಿತರಣೆ ಕುರಿತ ಎಲ್ಲ ವ್ಯವಹಾರಗಳನ್ನು ಸಂಪೂರ್ಣ ಗಣಕೀಕರಣ ವ್ಯವಸ್ಥೆಯಲ್ಲಿ ಕೈಗೊಳ್ಳುವ ಖಜಾನೆ-೨ ಯೋಜನೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮಾಹಿತಿಯನ್ನು ಕೂಡಲೆ ಸಲ್ಲಿಸುವಂತೆ ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ್ ಹಳ್ಯಾಳ್ ಸೂಚನೆ ನೀಡಿದ್ದಾರೆ.
ಖಜಾನೆ-೨ ಯೋಜನೆಯಡಿ ಎಲ್ಲ ಇಲಾಖೆಗಳ ಬಟವಾಡೆ ಮತ್ತು ಹಣ ಸೆಳೆಯುವ ಅಧಿಕಾರಿಗಳು ಬಿಲ್ಲುಗಳನ್ನು ಕಂಪ್ಯೂಟರ್ ಮೂಲಕವೇ ತಯಾರಿಸಿ, ಆನ್‌ಲೈನ್ ಮೂಲಕವೇ ಖಜಾನೆಗೆ ಸಲ್ಲಿಸುವ ಯೋಜನೆ ಇದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ತಮ್ಮ ಕಚೇರಿ ಮುಖ್ಯಸ್ಥರು, ವಿಷಯ ನಿರ್ವಾಹಕರು, ಅಧೀಕ್ಷಕರು, ಬಿಲ್ಲುಗಳನ್ನು ಖಜಾನೆಗೆ ತಂದುಕೊಡುವ ಸಿಬ್ಬಂದಿಗಳ ವಿವರವನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಕೂಡಲೆ ಜಿಲ್ಲಾ ಖಜಾನೆಗೆ ಸಲ್ಲಿಸಬೇಕು. ನಿಗದಿತ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಜಿಲ್ಲಾ ಖಜಾನೆ ಸಿಬ್ಬಂದಿಯನ್ನು ಸಂಪರ್ಕಿಸಬೇಕು ಎಂದು ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ್ ಹಳ್ಯಾಳ್ ತಿಳಿಸಿದ್ದಾರೆ.
0 comments:
Post a Comment