ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಕೇಸರಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮರಕುಂಬಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ಕ್ಷೌರ ಮಾಡುವಲ್ಲಿ ಉದ್ಭವಿಸಿದ ಸಮಸ್ಯೆ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆಯುತ್ತ ನಡೆದಿದೆ. ಇಷ್ಟಾದರೂ ತನ್ನದೇ ಕ್ಷೇತ್ರದ ಇಂಥ ಗಂಭೀರ ಸಮಸ್ಯೆ ಕುರಿತು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡದ ಹಾಗೂ ಸ್ಥಳಕ್ಕೆ ಭೇಟಿ ನೀಡದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಯವರ ನಿರ್ಲಕ್ಷ್ಯಧೋರಣೆಯನ್ನು ಜಿಲ್ಲಾ ಪಿಯುಸಿಎಲ್ ಘಟಕ ಖಂಡಿಸುತ್ತದೆ.
ಈ ಕುರಿತಂತೆ ಪಿಯುಸಿಎಲ್ ಸತ್ಯಶೋಧನಾ ತಂಡ ಜು.೧೨ರಂದು ಮರಕುಂಬಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯ ಎರಡೂ ಕಡೆಯ ಜನರನ್ನು ಸಂಪರ್ಕಿಸಿ ಮಾತನಾಡಿದಾಗ ಭಯದ ವಾತಾವರಣವಿದ್ದು ಬೂದಿ ಮುಚ್ಚಿದ ಕೆಂಡದಂತಿದ್ದು ಮತ್ತೆ ಯಾವಾಗ ಯಾವ ರೂಪದಲ್ಲಿ ಸ್ಫೋಟಗೊಳ್ಳುವುದೋ ಹೇಳಲಿಕ್ಕೆ ಬಾರದಂತಿದೆ.
ದಲಿತರು ಶತಶತಮಾನದಿಂದ ಶೋಷಣೆಗೆ ಒಳಗಾಗುತ್ತಲೇ ಬಂದಿದ್ದಾರೆ. ನಾಯಿ ಕುರಿಗಳ ಕೂದಲು ಕತ್ತರಿಸುವ ಮನುಷ್ಯ ತನ್ನಂತೆಯೇ ಇರುವ ಮನುಷ್ಯನ ಕ್ಷೌರ ಮಾಡದೆ ಅಸ್ಪೃಶ್ಯತೆ ಆಚರಿಸುವದು ಅಮಾವೀಯ. ಇದು ಮಾನವ ಹಕ್ಕು ಉಲ್ಲಂಘಟನೆಯೂ ಹೌದು. ಇದನ್ನು ಪೋಲೀಸರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಲಾಗಿತ್ತಾದರೂ ಮತ್ತೊಂದು ಪ್ರಕರಣ ಅದರಲ್ಲಿ ಸೇರಿಕೊಂಡು ಎರಡೂ ಕಡೆಯ ಜನ ಯಾವಾಗ ಏನಾಗುವುದು ಎನ್ನುವ ಆತಂಕದಲ್ಲಿದ್ದಾರೆ. ಈ ವಾತಾವರಣವನ್ನು ಆದಷ್ಟು ಬೇಗ ತಿಳಿಗೊಇಸಲು ಆಗ್ರಹಿಸುತ್ತೇವೆ. ಮರಕುಂಬಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಉಪಾಧ್ಯಕ್ಷ ಅಲ್ಲಾಗಿರಿರಾಜ್ ಖಜಾಂಚಿ ರಾಜಾಬಕ್ಷಿ ಎಚ್.ವಿ.,ಕಾರ‍್ಯದರ್ಶಿ ಸಿರಾಜ್ ಬಿಸರಳ್ಳಿ ಸದಸ್ಯರಾದ ಜೆ.ಭಾರದ್ವಾಜ, ಬಸವರಾಜ ಶೀಲವಂತರ ಉಪಸ್ಥಿತರಿದ್ದರು.
0 comments:
Post a Comment