ಸಮೀಪದ ಭಾಗ್ಯನಗರ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಸ್ಥಳೀಯ ಜನತೆ ತೀವ್ರ ತೊಂದರೆ ಎದುರಿಸುತ್ತಿದ್ದು ಶೀಘ್ರವೇ ಮೂಲಸೌಕರ್ಯ ಕಲ್ಪಿಸಲು ಮುಂದಾಗುವಂತೆ ಕನ್ನಡ ಕ್ರಾಂತಿ ದೀಪ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾ ಘಟಕವು ಇಲ್ಲಿನ ಶಾಸ್ತ್ರೀ ಕಾಲೋನಿಯಿಂದ ಗ್ರಾಮ ಪಂಚಾಯತವರೆಗೆ ಪ್ರತಿಭಟನೆ ಮೂಲಕ ತೆರಳಿ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಕಡುಬಡವರಿಗೆ ನಿವೇಶನ ಆಶ್ರಯ ಮನೆ ಕಲ್ಪಿಸಬೇಕು. ಓಜನಹಳ್ಳಿ ರಸ್ತೆಯಲ್ಲಿನ ಮಿನಿ ನೀರಿನ ಟ್ಯಾಂಕ್ ಪೈಪಲೈನ್ ಕಾರ್ಯ ಪೂರ್ಣಗೊಳಿಸುವುದು ಹಾಗೂ ಪುರುಷ ಸಾರ್ವಜನಿಕ ಶೌಚಾಲಯ ನಿರ್ಮಾಣ. ಗ್ರಾಮ ಮಧ್ಯದಲ್ಲಿರುವ ಮಧ್ಯ ಮಾರಾಟವನ್ನು ಬೇರೆಡೆ ಸ್ಥಳಾಂತರಿಸುವುದು. ಶಾಸ್ತ್ರಿ ಬಡಾವಣೆಯಲ್ಲಿ ಚರಂಡಿ ನಿರ್ಮಾಣ, ಸೂಕ್ತ ಫಲಾನುಭವಿಗಳನ್ನು ಆಯ್ಕೆಗೊಳಿಸಿ ನಿವೇಶನ ಹಾಗೂ ಆಶ್ರಯ ಮನೆ ನೀಡುವುದು. ಆಯ್ಕೆಗೊಂಡವರಿಗೆ ಮರುಆಯ್ಕೆಗೊಳ್ಳದಂತೆ ಸೂಕ್ತ ಕ್ರಮಕೈಗೊಳ್ಳುವುದು. ಗ್ರಾಮದ ಎಲ್ಲಾ ರಸ್ತೆಗಳ ಡಾಂಬರೀಕರಣ ಹಾಗೂ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವುದು ವಿವಿಧ ಮೂಲಕ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ರವಿ ಎನ್. ಕದಂ, ರಾಜ್ಯ ಉಪಾಧ್ಯಕ್ಷ ದೇವೆಂದ್ರಪ್ಪ ಇಟಗಿ, ರಾಜ್ಯ ಉಪಾಧ್ಯಕ್ಷ ದೇವೆಂದ್ರಪ್ಪ ಇಟಗಿ, ರಾಜ್ಯ ಕಾರ್ಯದರ್ಶಿ ಡಿ.ಡಿ. ಪಾಟೀಲ್, ರಾಜ್ಯ ಸಹ ಕಾರ್ಯದರ್ಶಿಗಳಾದ ಮುರುಳಿ ದತ್ತುವಾಡ, ಸುನೀಲ ನಟ್ಟೂರು, ರಾಜ್ಯ ಜನರಲ್ ಸೆಕ್ರಟರಿ ಲಕ್ಷ್ಮಣ ರಾಠೋಡ, ಜಿಲ್ಲಾ ಗೌರವಾಧ್ಯಕ್ಷ ಮಹಿಬೂಬಸಾಬ, ಜಿಲ್ಲಾಧ್ಯಕ್ಷ ಮಂಜುನಾಥ ಕಿನ್ನಾಳ, ತಾಲೂಕಾಧ್ಯಕ್ಷ ಜಗದೀಶ ಬಂಡಿ, ಉಪಾಧ್ಯಕ್ಷ ಯಲ್ಲಪ್ಪ ಕಿನ್ನಾಳ, ಯಲಬುರ್ಗಾ ತಾಲೂಕ ಮಹಿಳಾ ಅಧ್ಯಕ್ಷೆ ಮಂಜುಳಾ ಭರಮಪ್ಪ ಸೇರಿದಂತೆ ಅನೇಕರು ಪ್ರತಿಭಟನೆಯ ನೇತೃತ್ವವಹಿಸಿದ್ದರು. ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
0 comments:
Post a Comment