PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ದಾವಣಗೆರೆಯಲ್ಲಿ ಖಾಸಗಿ ಸುದ್ದಿವಾಹಿನಿ ಛಾಯಾಗ್ರಾಹಕ ಜಯಂತ ಮೇಲಿನ ಹಲ್ಲೆ ಖಂಡಿಸಿ ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರು ನಗರದ ಜಿಲ್ಲಾಡಳಿತ ಭವನದ ಮುಂದೆ ಸೋಮವಾರ ಪ್ರತಿಭಟಿಸಿದರು.
          ವಸತಿ ಶಾಲೆಯೊಂದರಲ್ಲಿ ನಡೆಯುತ್ತಿದೆ ಎನ್ನಲಾಗಿದ್ದ ಅಕ್ರಮಗಳ ಬಗ್ಗೆ ವರದಿ ಮಾಡಲು ಹೋಗಿದ್ದಾಗ ಸಂಸ್ಥೆ ವಿಜಯಲಕ್ಷಿಹಾಗೂ ಮತ್ತವರ ಬೆಂಬಲಿಗರು ಛಾಯಾಗ್ರಾಹಕ ಮತ್ತು ವರದಿಗಾರರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಪ್ರಕರಣ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, ಪತ್ರಿಕಾ ಸ್ವಾತಂತ್ರ್ಯ ಧಮನ ಮಾಡುವ ಹುನ್ನಾರವಾಗಿದೆ. ಸಚಿವರೊಬ್ಬರು ಹಲ್ಲೆ ನಡೆಸಿರುವ ಆರೋಪಿಗಳ ಬೆಂಬಲಕ್ಕೆ ನಿಂತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದು ನೈತಿಕತೆ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
           ವಿಜಯಲಕ್ಷ್ಮಿತನ್ನ ಸಹಚರ ಗೂಂಡಾಗಳನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ. ಹಲ್ಲೆಗೊಳಗಾದ ಛಾಯಾಗ್ರಾಹಕ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಆದಾಗ್ಯೂ ಪ್ರಮುಖ ಆರೋಪಿಯನ್ನು ಬಂಽಸುವಲ್ಲಿ ಪೋಲೀಸರು ವಿಫಲರಾಗಿದ್ದಾರೆ. ಸ್ಥಳೀಯ ಸಚಿವರೊಬ್ಬರುಒತ್ತಡ ತಂತ್ರ ಅನುಸರಿಸುತ್ತಿರುವುದರಿಂದ ಪ್ರಮುಖ ಆರೋಪಿಯ ಬಂಧನವಾಗುತ್ತಿಲ್ಲ ಎಂದು ಪ್ರತಿಭಟನಾನಿರತರು ದೂರಿದರು.     
          ಈಚೆಗೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ವರದಿ ಮಾಡಲು ಹೋಗಿದ್ದಾಗ ಮಾಧ್ಯಮ ಪ್ರತಿನಿಽಗಳ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳು ಈಚೆಗೆ ಹೆಚ್ಚುತ್ತಿವೆ. ಹಲ್ಲೆ ನಡೆಸಿದವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳದಿರುವುದು ಪ್ರಕರಣಗಳು ಮರುಕಳಿಸುವುದಕ್ಕೆ ಮುಖ್ಯ ಕಾರಣವಾಗಿದೆ. ಹಲ್ಲೆ ಪ್ರಕರಣಗಳನ್ನು ತಡೆಗಟ್ಟಲು ಸರಕಾರ ಕಾನೂನಿಗೆ ತಿದ್ದುಪಡಿ ತರಬೇಕಿದೆ. ಹಲ್ಲೆ ನಡೆಸಿದವರನ್ನು ಕೂಡಲೇ ಬಂಽಸಿ, ತ್ವರಿತ ವಿಚಾರಣೆ ಮಾಡುವ ಕಾನೂನು ಜಾರಿಯಾಗಬೇಕಿದೆ ಎಂದು ಆಗ್ರಹಿಸಿದರು.  
           ಈ ಮೊದಲು ನಗರದ ಮೀಡಿಯಾ ಕ್ಲಬ್ ಕಛೇರಿಯಲ್ಲಿ ಸಭೆ ನಡೆಸಿ ಘಟನೆಯನ್ನು ಖಂಡಿಸಿದ ಸದಸ್ಯರು ಆರೋಪಿಗಳನ್ನು ಕೂಡಲೇ ಬಂಽಸುವಂತೆ ಒತ್ತಾಯಿಸಿದರು. ನಂತರ ಜಿಲ್ಲಾಸ್ಪತ್ರೆಯಿಂದ ಜಿಲ್ಲಾಡಳಿತ ಭವನದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹಲ್ಲೆ ನಡೆಸಿದ ವಿಜಯಲಕ್ಷ್ಮಿ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಽಕಾರಿ ಆರ್.ಆರ್.ಜನ್ನು ಆಗಮಿಸಿ, ಮನವಿ ಸ್ವೀಕರಿಸಿದರು.
             ಈ ಸಂದರ್ಭದಲ್ಲಿ ಮೀಡಿಯಾ ಕ್ಲಬ್ ಅಧ್ಯಕ್ಷ ಸೋಮರೆಡ್ಡಿ ಅಳವಂಡಿ, ಗೌರವಾಧ್ಯಕ್ಷ ಶರಣಪ್ಪ ಬಾಚಲಾಪೂರ, ಸದಸ್ಯರಾದ ಗಂಗಾಧರ ಬಂಡಿಹಾಳ್, ಮಹೇಶಗೌಡ ಭಾನಾಪೂರ, ನಾಭಿರಾಜ್ ದಸ್ತೇನವರ್, ಸಮೀರ್ ಪಾಟೀಲ್, ಮೌನೇಶ ಬಡಿಗೇರ, ಶರಣಬಸವ ಹುಲಿಹೈದರ್, ದೊಡ್ಡೇಶ ಎಲಿಗಾರ್, ಶಂಕರ್ ಕೊಪ್ಪದ, ಅಶೋಕ ಕುಮಾರ್, ಮಾರುತಿ ಕಟ್ಟಿಮನಿ, ಶಿವರಾಜ್ ನುಗಡೋಣಿ, ಬಸವರಾಜ್ ಶೀಲವಂತರ್, ಭರತ್ ಕಂದಕೂರ, ಶ್ರೀಪಾದ್ ಅಯಾಚಿತ್, ತಿಪ್ಪನಗೌಡ ಮಾಲಿಪಾಟೀಲ್, ಶರಣಪ್ಪ ಕೊತಬಾಳ, ಸತೀಶ ಬಿ.ಮುರಾಳ, ಜಗದೀಶ್ ಕುಂಬಾರ, ಪರಶುರಾಮ್ ನಾಯಕ್ ಇದ್ದರು. 

Advertisement

0 comments:

Post a Comment

 
Top