ಕೊಪ್ಪಳ ೧೩:- ಕೊಪ್ಪಳ ನಗರ ಶ್ರೀನಂದೀಶ್ವರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೇಹಾ ಸಾಂಸ್ಕೃತಿಕ ವೇದಿಕೆಯಿಂದ ಭಾವಗೀತೆ ಸ್ಪರ್ಧೆ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿಯವರು ಮಾತನಾಡುತ್ತ ಭಾವಗೀತೆ ಮತ್ತು ಸುಗಮ ಸಂಗೀತಗಳು ಜನರನ್ನು ಅತ್ಯಂತ ಮಂತ್ರಮುಗ್ಧರನ್ನಾಗಿಸುತ್ತವೆ. ಸಂಗೀತಕ್ಕೆ ಅಗಾಧ ವಾದ ಶಕ್ತಿಯಿದೆ, ಸಂಗೀತದಿಂದ ಮನುಷ್ಯನಿಗೆ ಶಾಂತಿ ನೆಮ್ಮದಿ ಆಯುಷ್ಯ ಕೂಡಾ ವೃದ್ಧಿಸುತ್ತದೆ. ಇಂಥಹ ಮಹತ್ವಪೂರ್ಣವಾದ ಸಂಗೀತದ ಭಾವಗೀತ ಸ್ಪರ್ಧೇಗಳ ಮೂಲಕ ವಿದ್ಯಾರ್ಥಿಗಳಲ್ಲಿ ಭಾವಗೀತೆಗಳ ಪ್ರಜ್ಞೆ - ಕಾಳಜಿಗಳನ್ನು ಮೂಡಿಸುವುದು ಅತ್ಯಂತ ಶ್ಲಾಘನೀಯವಾದದ್ದು. ಇಂಥಹ ವೈಶಿಷ್ಟ್ಯ ಪೂರ್ಣವಾದ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ನಡೆಯಲಿ ಎಂದು ಆಶಿಸಿದರು.
ಉಪನ್ಯಾಸವನ್ನು ನೀಡಿದ ಮಂಜುನಾಥ ಡೊಳ್ಳಿನ ಅವರು ಕೊಪ್ಪಳ ಜಿಲ್ಲೆಯ ಭಾವಗೀತೆ ಮತ್ತು ಸುಗಮ ಸಂಗೀತಗಳು ನಡೆದು ಬಂದ ದಾರಿ ಕುರಿತು ಸಮಗ್ರವಾಗಿ ಮಾತನಾಡಿದರು. ಭಾವಗೀತೆಯಲ್ಲಿ ಭಾವಗಳು ಹಾಡಿನ ಜನತೆಯ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತಾಗಲು ಮೂಲ ಕಾರಣೀಕರ್ತರು ಗಾಯಕರು. ಒಬ್ಬ ಕವಿಯ ಬರಹವು ಹೊರ ಪ್ರಪಂಚಕ್ಕೆ ಪ್ರಸಾರವಾಗಬೇಕಾದರೆ, ಗಾಯಕರಿಂದ ಮಾತ್ರ ಸಾಧ್ಯ. ಕೊಪ್ಪಳ ಜಿಲ್ಲೆಯು ಜಾನಪದ ಭಾವಗೀತೆ, ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಚ್ಚು ಸಾಧನೆಗಳ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ಭಾವಗೀತೆ ಹಾಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಬೆಳಗಿಸಬೇಕೆಂದು ಕರೆನೀಡಿದರು.
ಅತಿಥಿಗಳಾದ ಡಾ|| ರಾಜೇಂದ್ರ ಗಡಾದ, ಜಿ. ಎಸ್. ಗೋನಾಳ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ನೇಹಾ ಸಾಂಸ್ಕೃತಿಕ ವೇದಿಕೆಯ ಅಧಕ್ಷರಾದ ಮಹಾಂತೇಶ ಮಲ್ಲನಗೌಡರ ವಹಿಸಿದರು ಪ್ರಾಸ್ತಾವಿಕವಾಗಿ ರಾಕೇಶ ಕಾಂಬ್ಳೇಕರ್ ಮಾತನಾಡಿದರು. ನಿರೂಪ
ಣೆಯನ್ನು ಸುರೇಶ ಕುಂಬಾರ, ಸ್ಪರ್ಧೆಯನ್ನು ವಿಜಯಶ್ರೀ, ಎನ್, ಪ್ರತಿಭಾ ಬೆಲ್ಲದ ನೇರವೇರಿಸಿದರು. ವಂದನಾರ್ಪಣೆ ದಿವ್ಯ ಭಾರತಿ ಇವರು ನಡೆಸಿಕೊಟ್ಟರು. ಕಾರ್ಯಕ್ರಮದ ವೇದಿಕೆಯ ಮೇಲೆ, ಶ್ರೀನಿವಾಸ ಚಿತ್ರಗಾರ, ಗವಿಸಿದ್ದಪ್ಪ ತಳಕಲ್ಲ ಆನಂದ ಹಳ್ಳಿಗುಡಿ, ಶಾಲೆಯ ಅಧ್ಯಕ್ಷರಾದ ಶಿವಪ್ಪ ಶೆಟ್ಟರ ಮಂಜುನಾಥ ಗೊಂಡಬಾಳ, ರಮೇಶ ಮಾದಿನೂರು, ವಹಿಸಿಕೊಂಡಿದ್ದರು.
ಭಾವಗೀತೆ ಸ್ಪರ್ಧೇಯಲ್ಲಿ ಭಾಗವಹಿಸಿದ ಹಿರಿಯರ ವಿಭಾಗದಿಂದ ಪ್ರಥಮ ಬಹಮಾನ ಅಕ್ಷತಾ ಬಣ್ಣದಬಾವಿ, ದ್ವಿತೀಯ ಪ್ರೀಯಾ ಪುರಂದರ, ತೃತೀಯ ಶರಣು ಪಡೆದರು.
ಕಿರಿಯರ ವಿಭಾಗದಿಂದ ಪ್ರಥಮ ಪ್ರದೀಪ್, ದ್ವಿತೀಯ ಶ್ವೇತಾ ಪದಕಿ, ತೃತೀಯ ತೇಜಸ್ವಿನಿಯವರು ಪಡೆದರು. ಪ್ರಮಾಣ ಪತ್ರದ ಜೋತೆಗೆ ನಗದು ಬಹುಮಾನವನ್ನು ವಿತರಿಸಲಾಯಿತ್ತು.
ನಿರ್ಣಾಯಕರಾಗಿ ಯಮನೋರಪ್ಪ ಭಜಂತ್ರಿ, ಪರಶುರಾಮ ಬಣ್ಣದ,ಮತ್ತು ಚನ್ನಯ ಹಿರೇಮಠ ಭಾಗವಹಿಸಿದ್ದರು, ಯಂದು ಶಾಲೆಯ ಸಂಗೀತ ಶಿಕ್ಷಕರಾದ ಸಾಹೇಬಗೌಡ ಪತ್ರಿಕಾ ವರದಿ ನಿಡಿದರು
0 comments:
Post a Comment