PLEASE LOGIN TO KANNADANET.COM FOR REGULAR NEWS-UPDATES

 ರಾಜ್ಯದಲ್ಲಿ ಕಳೆದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ರಾಜ್ಯದ ಸ್ಲಂಮೊರ್ಚಾದ ನಿವಾಸಿಗಳಿಗೆ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿತ್ತು, ಆದರೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ರದ ಕಾಂಗ್ರೇಸ್  ಸರ್ಕಾರ ಗ್ರಾಮೀಣ ಮಟ್ಟದಲ್ಲೀಯೂ ಸಹ ವಾಸಿಸುವಂತಹ ಸ್ಲಂ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಡಿತ ಗೊಳಿಸಲಾಗಿದ್ದು  ಇದನ್ನು ವಿರೋಧಿಸಿ ಇದೇ ತಿಂಗಳು ೨೨ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸದ ಎದರು ರಾಜ್ಯ ಸ್ಲಂಮೊರ್ಚಾದ ಪಧಾದೀಕಾರಿಗಳು, ಕಾರ್ಯಕರ್ತರು ಧರಣಿ ನಡೆಸಲಿದ್ದಾರೆ ಎಂದು ಸ್ಲಂ ಮೊರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ ಹಾಲಸಮುದ್ರ ತಿಳಿಸಿದರು.
ಅವರು ನಗರದ ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಸ್ಲಂ ಮೊರ್ಚಾದ ಜಿಲ್ಲಾ ಕಾರ್ಯಕರಣಿ ಸಭೆಯಲ್ಲಿ ಪಾಲ್ಗೋಂಡು ಮಾತನಾಡಿ ಕೊಪ್ಪಳ ಜಿಲ್ಲೆಯಿಂದ ನೂರಾರು ಕಾರ್ಯಕರ್ತರು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ನಿವಾಸದ ಎದರು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ  ಕೊಪ್ಪಳ ಸ್ಲಂ ಮೊರ್ಚಾ ಮಂಡಳಿಗಳಿಗೆ ಪಧಾದಿಕಾರಿಗಳ ಆಯ್ಕೆಯನ್ನು ನಡೆಸಲಾಯಿತು 
ಗೌರವ ಅಧ್ಯಕ್ಷರಾಗಿ ವಿರಣ್ಣ ಹೊನ್ನುಂಗರ, ಅಧ್ಯಕ್ಷರಾಗಿ ವಿರುಪಾಕ್ಷಪ್ಪ ನೇಲಜೆರಿ, ಉಪಾಧ್ಯಕ್ಷರಾಗಿ ವಿರೇಶ ಅಂಗಡಿ, ಪಾಶಾ ಕುಲಮಿ, ಪ್ರಧಾನ, ಕಾರ್ಯದರ್ಶಿಯಾಗಿ ವಿರೇಶ ಶಶಿಧರಸ್ವಾಮಿ ಎಸ್ ಮಠದ,  ಸಂಘಟನಾ ಕಾರ್ಯದರ್ಶಿಯಾಗಿ ಶಿವಯ್ಯ  ಮುಕಂದಯ್ಯ ಹಿರೇಮಠ , ಸಹ ಕಾರ್ಯದರ್ಶಿಯಾಗಿ ರವಿಕುಮಾರ ಕಲಾಲ, ಆಕಾಶ ಬೆಲ್ಲದ, ಸೇರಿದಂತೆ ಇನ್ನು ಇತರರು ನೇಮಕಗೊಂಡರು 
ಇಂದು ನಡೆದ ಸಭೆಯಲ್ಲಿ  ಜಿಲ್ಲಾಧ್ಯಕ್ಷ ಕೆ.ಅಂಬಣ್ಣ, ಶರಣಪ್ಪ ಎಸ್ ಸೊಪಿ, ಉಪಾಧ್ಯಕ್ಷ ಪ್ರಭು ಗಾಳಿ, ನಾಮದೇವ ಜಕ್ಕಲಿ, ವೀರಣ್ಣ ಹೊನ್ನುಂಗರ, ವಿರುಪಾಕ್ಷಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು ಎಂದು ಮಾಧ್ಯಮ ಪ್ರತಿನಿಧಿ ಪರಮಾನಂದ ಯಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Advertisement

0 comments:

Post a Comment

 
Top