ಕೊಪ್ಪಳ, ೧೩- ಶ್ರೀ ಕ್ಷೇತ್ರ ಕರ್ಕಿಹಳ್ಳಿ ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಪ್ರವಾಸಿಗರ ಅನು ಕೂಲಕ್ಕಾಗಿ ೨೫ ಲಕ್ಷ ರೂ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಿಸುವುದಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಶನಿವಾರದಂಉ ಶ್ರೀ ಮೃತ್ಯುಂಜಯೇಶ್ವರ ರಥೋತ್ಸವದ ನಂತರ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದರು.
ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಶ್ರೀ ಚಿದಂಬರೇಶ್ವರ ಕೃಪೆಯಿಂದ ಭಕ್ತರ ಸಂಖ್ಯೆ ಹೆಚ್ಚುತ್ತಿದೆ ಶ್ರೀ ಕ್ಷೇತ್ರಕ್ಕೆ ಅಗಮಿಸುವ ಭಕ್ತರಿಗೆ ಸರ್ವ ಸೌಲಭ್ಯ ಒದಗಿಸಲು ಬದ್ಧವಿರುವುದಾಗಿ ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕರ್ಕಿಹಳ್ಳಿ ಶ್ರೀ ಸುರೇಶ ಪಾಟೀಲ್ ವಹಿಸಿದ್ದರು. ತಾ.ಪಂ. ಸದಸ್ಯರಾದ ಅಮರೇಶ ಉಪಲಾಪುರ ಸೇರಿದಂತೆ ಅನೇಕ ಮುಖಂಡರು ಗ್ರಾಮದ ಹಿರಿಯರು ಭಾಗವಹಿಸಿದ್ದರು.
ಜಾತ್ರಾ ಮಹೋತ್ಸವ ಅಂಗವಾಗಿ ಮಹಾದ್ವಾರ ಉದ್ಘಾ ಟಿಸಿ ಹಾಗೂ ಶ್ರೀ ಮೃತ್ಯುಂಜ ಯೇಶ್ವರನಿಗೆ ಬಂಗಾರದ ಕಳಸಾರೋಹಣ ಹಾಗೂ ಮಧ್ಯಾಹ್ನ ಸಹಸ್ರಾರು ಭಕ್ತರ ಮಧ್ಯ ರಥೋತ್ಸವದ ಅನ್ನಸಂತರ್ಪಣೆ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ಜರುಗಗಿದವು
0 comments:
Post a Comment