ಗೋವಾ ರಾಜ್ಯದ ಬೈನಾ ಬೀಚನಲ್ಲಿ ಹೆಚ್ಚಾಗಿ ಕನ್ನಡಿಗರೇ ವಾಸಮಾಡುತ್ತಿದ್ದು ಅವರು ಆರ್ಥಿಕವಾಗಿ ದುರ್ಬಲರಾಗಿರುವುದರಿಂದ ಹಲವಾರು ಕುಟುಂಬಗಳು ದುಡಿಮೆ ಅರಸಿ ಹೋದವರು ಅಲ್ಲೆ ನೆಲೆ ಕಂಡುಕೊಂಡಿರುವುದರಿಂದ. ಅಲ್ಲಿ ಯಾವುದೇ ಅನ್ಯ ಉದೇಶದಿಂದ ಅಸುರಕ್ಷತೆ ಎಂಬ ಕಾರಣ ಒಡ್ಡಿ ವಾಸಮಾಡುತ್ತಿರುವ ಕನ್ನಡಿಗರ ಮನೆಗಳನ್ನು ದ್ವಂಸ ಗೊಳಿಸಿರುವುದು ವಿಷಾದನೀಯ ಸಂಗತಿಯಾಗಿದೆ. ಭಾರತದ ಸಂವಿದಾನದ ಪ್ರಕಾರ ಭಾರತೀಯರಾದವರಿಗೆ ದೇಶದ ಯಾವುದೇ ಮೂಲೆಯಲ್ಲಾದರೂ ವಾಸಮಾಡುವ ಹಕ್ಕು ನೀಡಿದೆ. ಇದನ್ನು ಅರಿಯದೇ ಗೋವಾ ಸರಕಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮನೆಗಳನ್ನು ಒಡೆದು ಹಾಕಿ ಕನ್ನಡಿಗರನ್ನು ಮೂಲ ಸೌಕರ‍್ಯ & ವಸತಿ ನೀಡದೆ ದೌರ್ಜನ್ಯದಿಂದ ಬೀದಿಪಾಲು ಮಾಡಿದೆ. ಇದನ್ನು ಖಂಡಿಸಿ ಕೊಪ್ಪಳ ಜಿಲ್ಲಾ ಜನಹಿತ ವೇದಿಕೆ ಜಿಲ್ಲಾ ಘಟಕವು ಇಂದು ಕೊಪ್ಪಳ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮತ್ತು ಕರ್ನಾಟಕ ಮುಖ್ಯಮಂತ್ರಿಗಳಿಗೆ ಜಿಲ್ಲಾಧ್ಯಕ್ಷರಾದ ಬಸವರಡ್ಡಿ ಶಿವನಗೌಡ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ನಿಯೋಗವು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಶ್ರವಣ ಕುಮಾರ, ಉಪಾಧ್ಯಕ್ಷ ನಾಗರಾಜ ಬಾರಕೇರ, ಶರಣ ಹೂಗಾರ, ಮಹೇಶ ನೆಲಜೇರಿ, ಸುಧಾಕರ ಮಾಲಶೆಟ್ಟಿ,ಬಸವರಡ್ಡಿ ಶಿವನಗೌಡ್ರ ಇನ್ನಿತರ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು
0 comments:
Post a Comment