ಕೊಪ್ಪಳ :-೧೫ ಕೊಪ್ಪಳ ಜಿಲ್ಲಾ ಭಾರತೀಯ ಜನತಾಪಕ್ಷದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿಭಾಗದ ವತಿಯಿಂದ ಜಿಲ್ಲಾ ಪದಾಧಿಕಾರಿಗಳ ಹಾಗೂ ತಾಲೂಕ ಮೋರ್ಚಾಗಳ ಪದಾಧಿಕಾರಿಗಳ ಸಭೆಯನ್ನು ನಗರದ ಕಿನ್ನಾಳ ರಸ್ತೆಯ ಪ್ರಮೋದ ಮಂದಿರದಲ್ಲಿ ಬೆಳಿಗ್ಗೆ ೧೦:೩೦ ಘಂಟೆಗೆ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರಾಜ್ಯಾಧ್ಯಕ್ಷರೂ ಹಾಗೂ ಮಾಜಿ ಶಾಸಕರಾದ ಎಮ್.ಎಸ್. ಸೊಮಲಿಂಗಪ್ಪ, ಹಿಂದುಳಿದ ಆಯೋಗದ ಮಾಜಿ ಅದ್ಯಕ್ಷ ಎನ್ ಶಂಕ್ರಪ್ಪ, ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಅಶೋಕ ಗಸ್ತಿ, ಸೇರಿದಂತೆ ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರು ಎಲ್ಲಾ ಮೋರ್ಚಾಗಳ ಪದಾಧೀಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಉಮೇಶ ಸಜ್ಜನ ಕಾರಟಗಿ ತಿಳಿಸಿದ್ದಾರೆ.
ಸಭೆಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರದಿಂದ ಎಸ್ಸಿ ಎಸ್ಟಿ ಜನಾಂಗಕ್ಕೆ ಆದ ಅನ್ಯಾಯ, ಅನ್ನಬಾಗ್ಯ, ಕ್ಷಿರಬಾಗ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನವಿರೋಧಿ ಆಡಳಿತ, ಆಶ್ರಯ ಮನೆಗಳ ಹಂಚಿಕೆಯಲ್ಲಿ ತಾರತಮ್ಯ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ದಿ ಯೋಜನೆಗಳಿಗೆ ಹಣ ಬಿಡುಗಡೆಗೆ ವಿಳಂಬಮಾಡುತ್ತಿರುವದು ಕುರಿತು ಚರ್ಚೆ ನಡೆಸಿ ಇದೇ ದಿನಾಂಕ; ೨೨ ರಂದು ಮುಖ್ಯಮಂತ್ರಿ ಮನೆಯ ಮುಂದೆ ಧರಣಿ ನಡೆಸಲಾಗುವದು
ಈ ಸಭೆಗೆ ಜಿಲ್ಲೆಯ ಎಲ್ಲಾ ಮೋರ್ಚಾಗಳ ಪದಾಧೀಕಾರಿಗಳು ಬಿಜೆಪಿ ಪಕ್ಷದ ಮುಖಂಡರು ಆಗಮಿಸಿ ಯಶಸ್ವಿ ಗೊಳಿಸಬೆಕೇಂದು ಮಾಧ್ಯಮ ವಕ್ತಾರ ಪರಮಾನಂದ ಯಾಳಗಿ ತಿಳಿಸಿದ್ದಾರೆ.
0 comments:
Post a Comment