ಭಾರತ ಸರ್ಕಾರ ತೆಲಂಗಾಣ ರಾಜ್ಯವನ್ನು ಘೋಷಣೆ ಮಾಡಿರುವದರಿಂದ ೫೪ ವರ್ಷಗಳ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಭಾರದ್ವಾಜ್ ತಿಳಿಸಿದ್ದಾರೆ.
ಎರಡು ನೂರು ವರ್ಷ ನಿಜಾಮರ ಕೆಟ್ಟ ಆಡಳಿತದಿಂದ ಶೋಷಣೆಗೊಳಪಟ್ಟಿದ್ದ ಜನರು ವಿಶ್ವದಲ್ಲಿಯೇ ಅದ್ಭುತವಾದ ಸಶಸ್ತ್ರಹೋರಾಟದಿಂದ ವಿಮೋಚನೆಗೊಂಡ ತೆಲಂಗಾಣ ಜನರು ಭಾಷಾವಾರು ರಾಜ್ಯಗಳು ಅಸ್ವಿತ್ವಕ್ಕೆ ಬಂದಾಗ ಮದ್ರಾಸ್ ಪ್ರಾಂತದಿಂದ ಬಂದಿರುವಂತಹ ಆಂದ್ರಪ್ರಾಂತದ ಬಂಡವಾಳಶಾಹಿಗಳ ಕಪ್ಪುಮುಷ್ಟಿಗೆ ಸಿಲುಕಿ ಶೋಷಣೆಗೊಳಪಟ್ಟಿದೆ. ೧೯೬೯ ರಿಂದ ಇಂದಿನವರೆಗೆ ಹದಿನಾಲ್ಕು ನೂರು ಜನ ಯುವಕರು ಮತ್ತು ವಿದ್ಯಾರ್ಥಿಗಳು ಆತ್ಮಾರ್ಪಣೆ ಮಾಡಿದ್ದರಿಂದ ಪ್ರತ್ಯೇಕ ರಾಜ್ಯ ಸಿಕ್ಕಿದೆ.
ಇತಿಹಾಸಕಾಲದಿಂದಲೂ ಹೋರಾಟಗಳ ಗಂಡುನಾಡಾದ ತೆಲಂಗಾಣ ಪ್ರದೇಶದಲ್ಲಿ ಜನರು ನಿರಂತರ ಶೋಷಣೆ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದಾರೆ. ಈಗಲಾದರೂ ಅಧಿಕಾರಕ್ಕೆ ಬಂದ ಹೊಸ ಸರ್ಕಾರ ಶೋಷಣೆ ಮುಕ್ತ ತೆಲಂಗಾಣ ನಿರ್ಮಿಸುತ್ತದೆ ಎಂದು ನಂಬಿದ್ದೇವೆ. ಇಲ್ಲದಿದ್ದಲ್ಲಿ ಕೆಟ್ಟ ಸರ್ಕಾರಗಳಿಗೆ ತೆಲಂಗಾಣ ಜನರೇ ತಕ್ಕ ಪಾಠಕಲಿಸಲಿದ್ದಾರೆಂದು ಸಿ.ಪಿ.ಐ.ಎಂ.ಎಲ್. ಪಕ್ಷ ಹೊಸ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
0 comments:
Post a Comment