ಧರಣಿಯನ್ನು ಬೆಂಬಲಿಸಿ ಖಾಯಂ ಕಾರ್ಮೀಕರ ಹೋರಾಟ
೮ ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸುವಂತೆ, ಹಿಂದುಸ್ಥಾನ ಕೋ ಕೋ ಕೋಲಾ ಬೇವರೇಜಸ್ ಪ್ರ. ಲಿಮಿಟೆಡ್ ಹಿರೇಬಗನಾಳ ಕಂಪನಿಯನ್ನು ಒತ್ತಾಯಿಸಿ ಕಾರ್ಮಿಕರ ಧರಣಿ ೧೦೪ ನೇ ದಿನಕ್ಕೆ ಕಾಲಿಟ್ಟಿದ್ದೆ. ಕಂಪನಿಯ ಕಾರ್ಮಿಕರ ಖಾಯಂ ಆತಿಯನ್ನು ನಿರಾಕರಿಸುತ್ತದೆ. ಪೂರ್ವದಿಂದ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕೆಂದು ಇವತ್ತಿನ ದಿನ ಹಿಂದುಸ್ತಾನ ಕೋ ಕೋ ಕೋಲಾ ಬೇವರೇಜಸ್ ಪ್ರ. ಲಿಮಿಟೆಡ್ ಖಾಯಂ ಕಾರ್ಮಿಕರ ಸಂಘಟನೆಯು ಬೆಂಬಲ ನೀಡಿ ಕಾರ್ಮೀಕರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ರಮೇಶ ಕುಮಾರ ಮತ್ತು ಉಪಾಧ್ಯಕ್ಷ ಶೇಷಗಿರಿ ಕಂಪನಿಯ ಕಾರ್ಮಿಕರ ಬೇಡಿಕೆ ಪತ್ರವನ್ನು ವಿಳಂಭ ಮಾಡುತ್ತಿದ್ದು ಕಂಪನಿಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಒಗ್ಗಟ್ಟಿನಿಂದ ಹೋರಾಡಬೇಕಿದೆ. ೧೦೪ ನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಧರಣಿ ಈಗಾಗಲೇ ಕೆಲಸದ ಅವಧಿಯಲ್ಲಿ ಕಂಪನಿ ಕೊಡುವ ಊಟ ಮತ್ತು ಉಪಹಾರವನ್ನು ಸೇವಿಸದೆ ಹೋರಾಟ ಮಾಡುತ್ತಿದ್ದು ಕಂಪನಿಯು ತಕ್ಷಣ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಂಪನಿಯನ್ನು ಖಾಯಂ ಕಾರ್ಮಿಕರು ಈ ಹೋರಾಟದ ಮುಖಾಂತರ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಖಾಯಂ ಸಂಘದ ಪದಾಧಿಕಾರಿಗಳು ಮತ್ತು ಸಂಘಟನೆಯ ಎಲ್ಲಾ ಸದಸ್ಯರು ಹಿಂದುಸ್ಥಾನ ಕೋ ಕೋ ಕೋಲಾ ಬೇವರೇಜಸ್ ಪ್ರ. ಲಿಮಿಟೆಡ್ ವರ್ಕರ್ಸ ಆಕ್ಷನ್ ಜಂಟಿ ಸಂಘಟನೆಯ ಎಲ್ಲಾ ಪಾದಾಧಿಕಾರಿಗಳು ಸರ್ವಸದಸ್ಯರು ಈ ಧರಣಿಯಲ್ಲಿ ಪಾಲಗೊಂಡು ಇವತ್ತಿನ ಹೋರಾಟವನ್ನು ಯಶಸ್ವಿಗೊಳಿಸಿರುತ್ತಾರೆಂದು ಆಕ್ಷನ್ ಕಮೀಟಿಯ ಅಧ್ಯಕ್ಷ ಚನ್ನವೀರಯ್ಯ ಹಿರೇಮಠ ತಿಳಿಸಿದ್ದಾರೆ.
0 comments:
Post a Comment