PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ-೦೮, ಕೊಪ್ಪಳ ಕ್ಷೇತ್ರದ ಹಿರೇಸಿಂದೋಗಿ ಮತ್ತು ಕವಲೂರು ಗ್ರಾಮಗಳಲ್ಲಿ ಕೊಪ್ಪಳ ಲೋಕಸಭಾ ಅಭ್ಯರ್ಥಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವರು ಕೇಂದ್ರದ ಯು.ಪಿ.ಎ ಸರ್ಕಾರ ಆಹಾರ ಭದ್ರತೆ ಯೋಜನೆ ತಂದು ಭಾರತವನ್ನು ಹಸಿವು ಮುಕ್ತ ರಾಷ್ಟ್ರವನ್ನಾಗಿ ಮಾಡುವ ಗುರಿ ಸಾಧನೆ ಮಾಡಿದ್ದು ಕಾಂಗ್ರೆಸ್ ಪಕ್ಷದ ಹೆಗ್ಗಳಿಕೆಯಾಗಿದೆ. ದೇಶದಲ್ಲ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರವು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಪ್ರಧಾನಿಯ ಹಗಲುಗನಸು ಕಾಣುತ್ತಿರುವ ಮೋದಿ ಅಧಾನಿ ಕಂಪನಿ ಮತ್ತು ಟಾಟಾ ಕಂಪನಿಗಳಿಗೆ ಸುಮಾರು ೫೮ ಸಾವಿರ ಎಕರೆ ಸರ್ಕಾರದ ಭೂಮಿಯ ಹಗರಣ ಮಾಡಿದ್ದು ತಾನೊಬ್ಬ ಸಾಚಾ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಸ್ಪದವಾಗಿದೆ. ರಾಜ್ಯದ ಬಿ.ಜೆ.ಪಿ ನಾಯಕರು ತಮ್ಮ ಪಕ್ಷದ ಧೇಯ ಧೋರಣೆಗಳನ್ನು ಹೇಳಿಕೊಳ್ಳದೆ ಮೋದಿಗಾಗಿ ಮತಯಾಚನೆ ಮಾಡುತ್ತಿರುವುದು ಇವರ ಅಸಹಾಯಕತೆಯ ಮೆರಗಾಗಿದೆ. ೦೫ ವರ್ಷದ ಇವರ ಆಡಳಿತವನ್ನು ನೋಡಿದ ರಾಜ್ಯದ ಜನತೆ ವಿಧಾನಸಭಾ ಚುನಾವಣೆಯಲ್ಲಿ ಯಾವ ರೀತಿ ಇವರನ್ನು ತಿರಸ್ಕರಿಸಿದೆ ಹಾಗೇ ಲೋಕಸಭಾ ಚುನಾವಣೆಯಲ್ಲಿಯೂ ಸಹಾ ದೇಶದ ಹಾಗೂ ರಾಜ್ಯದ ಮತದಾರರು ಇವರನ್ನು ಬದಿಗೊತ್ತಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಬರ್ಜರಿ ಜಯಗೊಳಿಸಲಿದ್ದಾರೆ. ಕೊಪ್ಪಳದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಬಸವರಾಜ ಹಿಟ್ನಾಳ ಅವರಿಗೆ ಇಡೀ ಲೋಕಸಭಾ ಕ್ಷೇತ್ರದಲ್ಲಿ  ಅಭೂತ್ವಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು ಸುಮಾರು ೧ ಲಕ್ಷದ ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಕರಿಯಣ್ಣ ಸಂಗಟಿ, ಅಂದಾನಪ್ಪ ಅಗಡಿ, ಎಸ್.ಬಿ ನಾಗರಳ್ಳಿ, ಟಿ.ಜನಾರ್ಧನ, ಶಾಂತಣ್ಣ ಮುದಗಲ್, ಹೆಚ್.ಎಲ್ ಹಿರೇಗೌಡ್ರ, ಜುಲ್ಲು ಖಾದ್ರಿ, ಈಶಪ್ಪ ಮಾದಿನೂರು, ಗವಿಸಿದ್ದಪ್ಪ ಮುದುಗಲ್ಲ, ಮುದೇಗೌಡ್ರ ಬೂದಿಹಾಳ, ಹನುಮರೆಡ್ಡಿ ಹಂಗನಕಟ್ಟಿ, ಸುರೇಶ ಭೂಮರೆಡ್ಡಿ, ಕೆ.ಎಮ್ ಸೈಯ್ಯದ, ಆಶೀಫ್ ಅಲಿ, ವೆಂಕನಗೌಡ್ರ ಹಿರೇಗೌಡ್ರ, ವೈಜನಾಥ ದಿವಟರ್, ಜಾಕೀರ್ ಹುಸೇನ ಕಿಲ್ಲೇದಾರ, ಅರ್ಜುನಸಾ ಕಾಟವಾ, ನಾಗರಾಜ ಬಳ್ಳಾರಿ, ಕೇಶವರೆಡ್ಡಿ, ಬಸವರೆಡ್ಡೆಪ್ಪ ಹಳ್ಳಿಕೇರಿ, ಹಟ್ಟಿ ಭರಮಪ್ಪ, ದೇವಪ್ಪ ಕವಲೂರು, ಗೋಣೆಶಪ್ಪ ಉಪ್ಪಾರ, ಸಾವಿತ್ರಿ ಮುಜಾಂದಾರ, ಸರೋಜಮ್ಮ, ನೂರಜಹಾಂ ಬೇಗಂ, ಸುನಂದಮ್ಮ ಗದ್ದಿಕೇರಿ, ಹಿರೇಸಿಂದೋಗಿ ಹಾಗೂ ಕವಲೂರು ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ಉಪಸ್ಥಿತರಿದ್ದು ಸುರೇಶ ದಾಸರೆಡ್ಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರೆಂದು ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ್ ತಿಳಿಸಿದ್ದಾರೆ.

Advertisement

0 comments:

Post a Comment

 
Top