PLEASE LOGIN TO KANNADANET.COM FOR REGULAR NEWS-UPDATES

 ಭಾರತ ವಿದ್ಯಾರ್ಥಿ ಫೇಡರೇಷನ್ (ಎಸ್.ಎಫ್.ಐ) ಹೊಸಬಂಡಿಹರ್ಲಾಪುರ ಪದವಿ ಕಾಲೇಜ್ ಘಟಕದಿಂದ ಪ್ರತಿಭಟನೆಯ ಮೂಲಕ ಒತ್ತಾಹಿಸುವುದೇನೆಂದರೆಮೇ/ಜೂನ-೨೦೧೪ರಲಿನಡೆಯುವ ಬಿ.ಎ/ಬಿ.ಎಸ್ಸಿ/ಬಿ.ಕಾಂ/ಬಿ.ಬಿ.ಎಂ/ಬಿ.ಸಿ.ಎ/ಬಿ.ಎಸ್.ಡಬ್ಲ್ಯು ಪರೀಕ್ಷೆಗಳಿಗೆ ಪರಿಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿರುವುದನ್ನು ಎಸ್.ಎಫ್.ಐ ತಾಲೂಕ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
          ಪ್ರತಿ ಸೆಮಿಸ್ಟರ್‌ಗಳಿಗೆ ಬಿ.ಎ/ಬಿ.ಕಾಂ ವಿದ್ಯಾಥಿಗಳಿಗೆ ೬೦೦/-ರೂಪಾಯಿ ಹಾಗೂ ಅಂಕಪಟ್ಟಿಗೆ ೧೦೦/- ರೂಪಾಯಿಯಂತೆ ೭೦೦/-ರೂಪಾಯಿ ಪರಿಕ್ಷಾ ಶುಲ್ಕವನ್ನು ನಿಗದಿ ಮಾಡಲಾಗಿದೆ. /ಬಿ.ಎಸ್ಸಿ/ಬಿ.ಬಿ.ಎಂ ಬಿ.ಸಿ.ಎ ವಿದ್ಯಾಥಿಗಳಿಗೆ ೬೫೦/- ರಿಂದ ೭೫೦/- ರೂಪಾಯಿ ನಿಗದಿ ಮಾಡಲಾಗಿದೆ. ಇಡೀ ಸರಕಾರಿ ಪದವಿ ಕಾಲೇಜುಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ  ಗ್ರಾಮೀಣ ಭಾಗದ  ಬಡ ಹಿಂದುಳಿದ ಅಲ್ಪಸಂಖ್ಯಾತರ ಹಾಗೂ ದಲಿತ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, 
                      ಈ ಪರೀಕ್ಷಾ ಶುಲ್ಕ ಭರಿಸಲಾಗದೆ, ಪರಿಕ್ಷೇಗಳನ್ನು ಬರೆಯಲಾಗದ ಪರಿಸ್ಥಿತಿ ಉಂಟಾಗಿದೆ, ಹಾಗೂ ೨೦೧೩ ನವೇಂಬರ್/ಡಿಸೇಂಬರ ನಲ್ಲಿ ನಡೆದ ಪರೀಕ್ಷೆಗಳಿಗೆ ಪ್ರತಿ ಸೆಮಿಸ್ಟರ್‌ಗಳಿಗೆ ೧೧೦/-ಶುಲ್ಕ ಭರಿಸಲಾಗಿತ್ತು, ಏಕಾಏಕಿ ಪದವಿ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿ ಬಡ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಿರಿ, ಈಗಾಗಲೇ ಹಿಂದಿನ ಸೆಮಿಸ್ಟರ್‌ನಲ್ಲಿದ್ದ ಪರೀಕ್ಷಾ ಶುಲ್ಕವನ್ನ ಮೇ/ಜೂನ್ ೨೦೧೪ ರಲ್ಲಿ ನಡೆಯುವ ಪರೀಕ್ಷೆಗಳಿಗೆ ಅದೇ ಶುಲ್ಕವನ್ನ ಅನ್ವಯಮಾಡಬೇಕು, ಹಾಗೂ ೨೦/೦೩/೨೦೧೪ ರಂದು ಹೊರಡಿಸಿರುವ ಪರೀಕ್ಷಾ ಶುಲ್ಕದ ಅದಿಸೂಚನೆಯನ್ನ ರದ್ದುಪಡಿಸಿ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಬೇಕೆಂದು ಎಸ್.ಎಫ್.ಐ ತಮ್ಮ ಗಮನಕ್ಕೆ ತರಬಯಸುತ್ತದೆ.
        ಹೈ-ಕ ವ್ಯಾಪ್ತಿಯಲ್ಲಿ ಬರುವ ವಿ.ಎಸ್.ಕೆ ವಿ.ವಿ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ವಿಧ್ಯಾರ್ಥಇಗಳು ಆರ್ಥಿಕವಾಗಿ ತಿವ್ರಸಂಕಷ್ಟದಲ್ಲಿದ್ದು ಉನ್ನತ ಶಿಕ್ಷಣ ಕಲಿಯುವ ಸಂಖ್ಯೆ ಕಡಿಮೆದೆ. ಆದರಿಂದ ನಿವು ೨೦/೦೩/೨೦೧೪ ರಂದು ಹೊರಡಿಸಿರು ಪರೀಕ್ಷಾ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಇಲ್ಲವಾದಲ್ಲಿ ಎಸ್.ಎಫ್.ಐ ಸಂಘಟನೆಯು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಂಯಕ್ಕೆ ಮುತ್ತಿಗೆ ಕಾರ್ಯಕ್ರಮ  ಹಮ್ಮಿಕೊಳ್ಳಲಾಗುತ್ತದೆ. ಎಂದು ಎಸ್.ಎಫ್.ಐ ಒತ್ತಾಹಿಸುತ್ತz. 
ಪ್ರತಿಬಟನೆಯಲ್ಲಿ ದಸ್ತಗಿರಿವಿ, ಸುಬಾಷಚಂದ್ರ, ಯಮನೂರಪ್ಪ, ಎಂ.ಪರಶುರಾಮ, ಪ್ರಾಂಶಾತ,ರಾಜವಲಿ, ಸುಧಾ,ರೇಖಾ,ಕವಿತಾ,ಗೌರಮ್ಮ,ಸಬೇನಾ ಬೇಗಂ,ಸಂಧ್ಯ ಎಂ, ರಾಜಲಕ್ಷ್ಮೀ ಇತರರು ಪ್ರತಿಭಟನೆಯಲ್ಲಿ ಪಾಲ್ಗಗೊಂಡಿದರು ಕಾಲೇಜ್ ಪ್ರಾಚಾರರಿಗೆ ಮನವಿ ಪತ್ರ ಸಲ್ಲಿಸಲಾಯಿತ್ತು.          
          
ಅಮರೇಶ ಕಡಗದ               ದುರುಗೇಶ ಡಗ್ಗಿ           ಹನುಮಂತ ಬಂಡಿಹರ್ಲಾಪುರ          
 ಜಿಲ್ಲಾ ಅಧ್ಯಕ್ಷರು               ಜಿಲ್ಲಾ ಉಪಾಧ್ಯಕ್ಷರು              ಜಿಲ್ಲಾ ಸಮಿತಿ ಸದಸ್ಯ 

 ವಿನಯ್ ಕುಮಾರ್           ಬಿ.ಶೈಲಾಜರಡ್ಡಿ
ಕಾಲೇಜ್ ಘಟಕದ ಅಧ್ಯಕ್ಷ        ಕಾಲೇಜ್ ಘಟಕದ ಕಾರ್ಯದರ್ಶಿ

              

Advertisement

0 comments:

Post a Comment

 
Top