PLEASE LOGIN TO KANNADANET.COM FOR REGULAR NEWS-UPDATES

 ಲೋಕಸಭೆಯ ಚುನಾವಣೆ ನಿಮಿತ್ಯ ಕೊಪ್ಪಳ ನಗ
ರದಲ್ಲಿ ದಿನಾಂಕ: ೦೮-೦೪-೨೦೧೪ ರಂದು ಚುನಾವಣಾ ಬೃಹತ್ ಬಹಿರಂಗ ಪ್ರಚಾರ ಸಭೆ ನಡೆಯಲಿದ್ದು, ಸದರಿ ಕಾರ್ಯಕ್ರಮಕ್ಕೆ ಗುಜರಾತ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಬಿ.ಜೆ.ಪಿ. ಘೋಷಿತ ಪ್ರಧಾನಿ ಅಭ್ಯರ್ಥಿಯಾದ   ನರೇಂದ್ರ ಮೋದಿ ರವರು ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸುಮಾರು ೧ ಲಕ್ಷ ಕಾರ್ಯಕರ್ತರು, ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದ್ದು, ಈ ಸಂದರ್ಭದಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಸಂಚಾರ ಮಾರ್ಗದಲ್ಲಿ ಅಲ್ಪ ಬದಲಾವಣೆ ಮಾಡಿದ್ದು, ಬದಲಾವಣೆ ಮಾಡಿದ ಮಾರ್ಗದಿಂದ ಸಂಚರಿಸಲು ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಮಾರ್ಗ ಬದಲಾವಣೆ ಸಮಯ :- ದಿನಾಂಕ: ೦೮-೦-೨೦೧೪ ರಂದು ಬೆಳಿಗ್ಗೆ ೧೦-೦೦ ಗಂಟೆಯಿಂದ ಮಧ್ಯಾಹ್ನ ೩-೩೦ ಗಂಟೆಯವರೆಗೆ.
ಹೊಸಪೇಟೆ ಯಿಂದ ಗದಗ ಕಡೆಗೆ ಏಕಮುಖ ಸಂಚಾರ ವ್ಯವಸ್ಥೆ :-
* ದ್ವಿ-ಚಕ್ರ ವಾಹನ, ಆಟೋ, ಕಾರ್, ಜೀಪ ಮತ್ತು ಸರ್ಕಾರಿ ಬಸ್ಸುಗಳು:-
೧] ಗಿಣಿಗೇರಾ ಕ್ರಾಸ್‌ನಿಂದ ಹೊರಟು ಬಗನಾಳ ಕ್ರಾಸ್, ಅಲ್ಲಾನಗರ, ಹಾಲವರ್ತಿ, ಗವಿಮಠ, ಗಂಜ್ ಸರ್ಕಲ್ ಮೂಲಕ ಕೊಪ್ಪಳಕ್ಕೆ ಬಂದು ಅಲ್ಲಿಂದ ಕುಷ್ಟಗಿ ಮತ್ತು ಗದಗ ಕಡೆಗೆ ಹೋಗಬಹುದು.
* ಲಾರಿ ಮತ್ತು ಇತರೇ ಸರಕು ವಾಹನಗಳು  :-
೨] ಗಿಣಿಗೇರಾ ಕ್ರಾಸ್‌ನಿಂದ ಹೊರಟು ಅಲ್ಲಾನಗರ, ಹಿರೇಬಗನಾಳ, ಕರ್ಕಿಹಳ್ಳಿ, ಕುಣಿಕೇರಿ ಕ್ರಾಸ್, ಮುದ್ದಾಬಳ್ಳಿ ಕ್ರಾಸ್, ಚಿಕ್ಕಸಿಂದೋಗಿ, ಕೋಳೂರ ಕ್ರಾಸ್ ಮುಖಾಂತರ ಗದಗ ಕಡೆಗೆ ಹೋಗಬಹುದು.
ಕೊಪ್ಪಳದಿಂದ ಗಂಗಾವತಿ ಹೊಸಪೇಟೆ ಕಡೆಗೆ ಏಕ ಮುಖ ಸಂಚಾರ ವ್ಯವಸ್ಥೆ:-
* ದ್ವಿ-ಚಕ್ರ ವಾಹನ, ಆಟೋ, ಕಾರ್, ಜೀಪ ಮತ್ತು ಸರ್ಕಾರಿ ಬಸ್ಸುಗಳು:-
೧] ಎಸ್.ಎಫ್.ಎಸ್. ಶಾಲೆ, ಕಿಡದಾಳ ರೈಲ್ವೇ ಗೇಟ್, ಬಸಾಪೂರ, ಗಿಣಿಗೇರಕ್ಕೆ ಹೋಗಿ ಅಲ್ಲಿಂದ ನೇರವಾಗಿ ಗಂಗಾವತಿಗೆ ಹೋಗಬಹುದು. ಹಾಗೂ ಗಿಣಿಗೇರ ರೈಲ್ವೆಗೇಟ್ ದಾಟಿ ಹೊಸಪೇಟೆ ಮುಖ್ಯ ರಸ್ತೆಗೆ ಸೇರಿ ಹೊಸಪೇಟೆಗೆ ಹೋಗಬಹುದು.
೨] ಸಮಾರಂಭ ಸ್ಥಳಕ್ಕೆ ಹೋಗುವ ಎಲ್ಲಾ ದ್ವೀ-ಚಕ್ರ ಹಾಗೂ ಎಲ್ಲಾ ವಾಹನಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಸಮಾರಂಭಕ್ಕೆ ಹೋಗುವುದು. ಅಲ್ಲದೇ ಸಮಾರಂಭಕ್ಕೆ ಆಗಮಿಸುವರು ತಮ್ಮ ಬ್ಯಾಗ್ ಹಾಗೂ ನೀರಿನ ಬಾಟಲಿಗಳನ್ನೂ ಸಹ ತರುವುದನ್ನು ನಿಷೇಧಿಸಲಾಗಿದೆ.
* ಲಾರಿ ಮತ್ತು ಇತರೇ ಸರಕು ವಾಹನಗಳು  :-
೨] ಕುಷ್ಟಗಿ ಸರ್ಕಲ್‌ದಿಂದ ಇರಕಲಗಡ ಕೊಡದಾಳಕ್ರಾಸ್, ಚಿಲಕಮುಖಿ, ಹೊಸೂರು ಕ್ರಾಸ್ ಹತ್ತಿರ ರಾಷ್ರೀಯ ಹೆದ್ದಾರಿ-೫೦ ರಲ್ಲಿ ಸೇರಿ ಹೊಸಪೇಟೆ ಮತ್ತು ಗಂಗಾವತಿ ಕಡೆಗೆ ಹೋಗಬಹುದು.  

Advertisement

0 comments:

Post a Comment

 
Top