PLEASE LOGIN TO KANNADANET.COM FOR REGULAR NEWS-UPDATES

 ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಬುಧವಾರದಂದು ನಡೆದ ದ್ವಿತೀಯ ಭಾಷೆ ಇಂಗ್ಲೀಷ್ ವಿಷಯದ ಪರೀಕ್ಷೆಗೆ ಜಿಲ್ಲೆಯ ೧೫೭೩೨ ವಿದ್ಯಾರ್ಥಿಗಳು ಹಾಜರಾಗಿದ್ದು, ೪೬೬ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
  ಎಸ್.ಎಸ್.ಎಲ್.ಸಿ. ಪರೀಕ್ಷೆಯ ಇಂಗ್ಲೀಷ್ ವಿಷಯಕ್ಕೆ ಬಾಲಕರು-೮೮೬೬, ಬಾಲಕಿಯರು- ೭೩೩೨ ಸೇರಿದಂತೆ ಒಟ್ಟು ೧೬೧೯೮ ವಿದ್ಯಾರ್ಥಿಗಳು ದಾಖಲಾಗಿದ್ದರು. ಇದರಲ್ಲಿ ಬಾಲಕರು- ೮೫೭೫, ಬಾಲಕಿಯರು- ೭೧೫೭ ಸೇರಿದಂತೆ ಒಟ್ಟು ೧೫೭೩೨ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು,   ೨೯೧-ಬಾಲಕರು, ೧೭೫- ಬಾಲಕಿಯರು ಗೈರು ಹಾಜರಾಗಿದ್ದಾರೆ. 
ಕೊಪ್ಪಳ ತಾಲೂಕಿನಲ್ಲಿ ೫೧೯೬ ವಿದ್ಯಾರ್ಥಿಗಳ ಪೈಕಿ ೪೯೮೧ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೫೩೦೬ ವಿದ್ಯಾರ್ಥಿಗಳ ಪೈಕಿ ೫೧೯೦, ಕುಷ್ಟಗಿ ತಾಲೂಕಿನಲ್ಲಿ ೨೬೬೫ ವಿದ್ಯಾರ್ಥಿಗಳ ಪೈಕಿ ೨೫೯೨, ಯಲಬುರ್ಗಾ ತಾಲೂಕಿನಲ್ಲಿ ೩೦೩೧ ವಿದ್ಯಾರ್ಥಿಗಳ ಪೈಕಿ ೨೯೬೯ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ೨೧೫, ಗಂಗಾವತಿ- ೧೧೬, ಕುಷ್ಟಗಿ-೭೩ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೬೨ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು  ತಿಳಿಸಿದ್ದಾರೆ.

Advertisement

0 comments:

Post a Comment

 
Top