PLEASE LOGIN TO KANNADANET.COM FOR REGULAR NEWS-UPDATES

 ಭಗವಾನ ಮಹಾವೀರ ಸ್ವಾಮಿಗಳವರ ಜನ್ಮದಿನಾಚರಣೆ ಪ್ರಯುಕ್ತ ದಿ.೧೩ರಂದು ಮಹಾವೀರ ಜಯಂತಿ ಅಂಗವಾಗಿ ನಗರದ ಸಾಹಿತ್ಯ ಬವನದಿಂದ ಕೋಟೆ ರಸ್ತೆಯಲ್ಲಿರುವ ಜೈನ್‌ಬಸದಿ ವರೆಗೆ ಭಗವಾ ಮಹಾವೀರರ ಭಾವಚಿತ್ರದ ಭವ್ಯ ಮೆರವಣಿಗೆ, ಶೋಭಾಯಾತ್ರೆ ನಡೆಯಲಿz ಎಂದು ಜೈನ್ ಸಮಾಜದ ನಾಯಕ ಹಾಗೂ ಕೊಪ್ಪಳ ನಗರಸಭೆಯ ಸದಸ್ಯ ಮಹೇಂದ್ರ ಛೋಪ್ರಾ ಹೇಳಿದರು.
  ಅವರು ಈ ಕುರಿತು ಹೇಳಿಕೆ ನೀಡಿ ಮಹಾವೀರ ಜಯಂತಿ ಪ್ರಯುಕ್ತ ನಡೆಯುವ ಶೋಭಾಯಾತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ರೋಹಿಣಿ ಕೋಟೆಜ್ ಸೆಪಟ್ ರವರು ಚಾಲನೆ ನೀಡಲಿದ್ದಾರೆ. ನಂತರ ಜೈನ್ ಸ್ಥಾನಕ ಭವನದಲ್ಲಿ ಭಗವಾನ್ ಮಹಾವೀರರ ಇತಿಹಾಸ ಜೀವನ ಚರಿತ್ರೆ ಕುರಿತು ವಿಶೇಷ ಕರ್ಯಕ್ರಮ ಧಾರ್ಮಿಕ ಪ್ರವಚನ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ ಎಂದರು.
    ಭಗವಾನ್ ಮಹಾವೀರ ಜಯಂತಿ ದಿನದಂದು ಅಹಿಂಸಾ ದಿನಾಚರಣೆಯಾಗಿ ಮಾಡಲಾಗುತ್ತಿದ್ದು ಅಂದು ಮಾಂಸ ಮಾರಾಟ ಮಾಡಬಾರದು ಮಾಂಸ ಮಾರಾಟ ಅಂಗಡಿಗಳು ಅಂದು ಬಂದ್‌ಮಾಡಿ ನಮ್ಮ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡ ಅವರು ಈ ಕಾರ್ಯಕ್ರಮದಲ್ಲಿ ಶ್ವೇತಾಂಬರ್, ದಿಗಂಬರ್ ಎರಡೂ ಪಂಥಗಳ ಪದಾಧಿಕರುಗಳು, ತೇಗಿಪಂಥ ಮಹಾಸಭಾ, ಜೈನ್ ಶ್ರಮಸಂಘ, ಸಕಲಜೈನ್ ಯುವ ಫೆಡರೇಶನ್, ನವಕಾರ ಗ್ರೊಪ್, ತ್ರಿಶಲ ಮಹಿಳಾ ಮಂಡಲ, ತೇರಾಪಂಥ ಮಹಿಳಾ ಪರಿಷತ್ತಿನ ಪಧಾಧಿಕರಿಗಳುನ ಸೇರಿದಂತೆ ಸಮಾಜದ ಪ್ರಮುಖರಾದ ರಾಮಲಾಲ್ ಬಾಗರೇಚಾ, ಅಭಯಕುಮಾರ್ ಮೇಹತಾ, ಬಾಬುಲಲ್ ಚೋಪ್ರಾ, ಗೌತಮ ಜಾಂಗಡಾ, ಗೌತಮ ಮೇಹತಾ, ನವೀನ ಚಂದ್ ಮಾರೂ, ಗೌತಮಚಂದ್ ದಾನೇಶಾ, ಅಶೋಕ ಪಾರೀಖ, ಮಹೇಂದ್ರ ಲೂಂಕಡ, ಮನೋಜ ಚೋಪ್ರಾ, ವಿಜಯ ಜಾಂಗಡಾ,  ಸುಮಾರು ೨೦೦೦ಸಾವಿರದಷ್ಟು ಜೈನ್ ಬಂಧೂಗಳು ಪಲ್ಗೊಳಲಿದ್ದಾರೆಂದು ಜೈನ್ ಸಮಾಜದ ನಾಯಕ ಹಾಗೂ ಕೊಪ್ಪಳ ನಗರಸಭೆಯ ಸದಸ್ಯ ಮಹೇಂದ್ರ ಛೋಪ್ರಾ ವಿವರಿಸಿದರು.

Advertisement

0 comments:

Post a Comment

 
Top